ಹೃದಯದ ನೆಂಟ!
ಬಹಳ ಜನ ಹುಚ್ಚರು,
ಹೃದಯದಲ್ಲಿ ಸದಾ ನೀನೇ ನೆಂಟರು!
ಆಗಾಗ ಬರುವಾಗ ನೀನು,
ಆಯ್ದು ತರುವೆ ಏನು?
ಸಾಕು ನನಗೆ ನಿನ್ನ
ಬರುವಿಕೆಯ ಸುದ್ದಿ ಇನ್ನ!
ಹೃದಯದಲೇ ಇರುವಾಗ ನೀ,
ಕಾಣುವೆ ಏನ ಎದುರಾಳಿ ಇರುವಾಗ?
ಮನಸಲೇ ನೆನೆವಾಗ ನೀ,
ಕಾಣಲಿ ನಿನ್ನ ಎದೆದಾರಿ ಕಾಯುವಾಗ!
ಬರುವೆ ನೀ ಪದೇ ಪದೇ,
ಇದ್ದು ಹೋಗುವೆಯಾ ನೆಂಟರಂತೆ?
ಹೃದಯದ ಮೂಲೆಯಲ್ಲಿ ಅದೇ ಅದೇ,
ಇದ್ದು ಬಿಡುವೆಯಾ ತುಂಟನಂತೆ?
-
ಬದುಕಲ್ಲಿ ಬವಣೆ ಬದಲಿಸು,
ಹುರುಪಲ್ಲಿ ಹೊಂಗನಸ ಅರಳಿಸು,
ಈ ಬಾಳ ನವಿರಾಗಿ ಅನುಭವಿಸು!
-
ಹೆಕ್ಕಿ ಹುಡುಕಿದರೆ ಸಿಗದು,
ಒಂದೇ ದಾರಿಯ ಅರಸಿದರೆ ಮುಗಿಯದು,
ಮರಿಯದೇ ಕೆಣಕಿದರೂ ಕಾಣದು,
ಕಣ್ಮುಚ್ಚಿ ಚಿಂತಿಸು, ತೆರೆದ ಸುಳ್ಳಿನಲ್ಲಿ ಒಳಹೊಕ್ಕು,
ಗೋಜಲು ದಾರಿಯಲ್ಲಿ ಮುನ್ನುಗ್ಗು,
ಕಾಣದೇ ಇದ್ದರೂ ಕಾಡುವ ಸತ್ಯವ ಕಂಡುಕೋ!-
Shine would have been a horror of the lightning and not the twinkle of a star,
Brightness would have been a humid of the sun and not the blinking of a star,
Moon would have faced loneliness when even the birds runaway with the sun!
Would the poets survive?
Would the artists breath?
When the Universe would have flown away in the milkyway!-
ಅತ್ಯಂತ ಶಾಂತ ಚಿತ್ತವ ಹುಡುಕುವ ಯತ್ನದಲ್ಲಿ
ತನ್ನಲಿಯೇ ಇದ್ದ ಶಾಂತಿಯ ಕದಡುವ ಚಿತ್ತ!-
ಬರಸಿಡಿಲು ಬಡಿದು ಬಂದಾಗ ಒಮ್ಮೆಲೇ,
ಸಮಾಧಾನವಾಗಿರು ನೀ ಕೂಡಲೇ,
ಎದುರಿಸು ಧೈರ್ಯದಿಂದಲೇ-
ಪಕಕ್ಕದಲ್ಲಿದ್ದ ಮರವು ಗಾಳಿಗೆ ಅಲುಗಾಡತೊಡಗಿತು,
ಬಿರುಗಳಿಯು ಬಡಿಯಲಾರಂಭಿಸಿತು,
ಚಳಿಗೆ ಅಜ್ಜನ ಮೈ ನಡುಗಲಾರಂಭಿಸಿತು,
ಒಟ್ಟಿಗೆ ಹೃದಯವು ಬಡಿಯಲು ಶುರುವಾಯಿತು,
ಬೀಳುವುದು ತಾನೂ? ನಿಲ್ದಾಣವೋ? ಮರವೋ ಎಂದು ಯೋಚೋಸುತ್ತಿದಂತೆ
ತಟ್ಟನೆ ಶಬ್ದ, ದಿಢೀರನೆ ಎದ್ದ ಅಜ್ಜ ನೋಡಿದರೆ ನಿಲ್ದಾಣದ ಹೆಂಚಿನ ತುಂಡು ಎದುರಿಗೆ ಬಿದ್ದವು,
ಮೇಲೆದ್ದು ಹೆದರಿಯೇ ಮರದಡಿಯಲ್ಲಿ ನಿಂತ ಅಜ್ಜ!
ಮಳೆಯು ಸುರಿಯಲು ನಿಂತಿತು,
ಗಾಳಿಯು ಚದುರಿತು, ಮರವು ಸ್ತಬ್ಧವಾಯಿತು ಅಜ್ಜನ ಹೃದಯವೂ ಕೂಡ!
ಕಡೆಗೆ ಬುಡವು ಗಟ್ಟಿಯಾಗಿದ್ದದ್ದು ಮರದ್ದು !
-