Sagar Bhoomannavar  
225 Followers · 30 Following

read more
Joined 31 December 2018


read more
Joined 31 December 2018
23 MAR AT 10:16

ನೆನಪು ತಿವಿದ ಗಾಯದ.
ಮಿಡಿತ ಮಡಿದ ಭಾವದ.
ಕೈಯ ಮುಗಿವ ಮೌನದ.
ಖಾಲಿ ಖಾಲಿ ಕಾಗದ.💐💝

-


17 MAR AT 14:12

ಮರೆಯಲಾಗದ ಕನಸು ನೀನು.
ಕನಸಿನೊಳಗಿನ ನೆನಪು ನೀನು.
ನೆನಪೊಂದ ನೆನೆಯುತಿರುವೆ ನಾನು.
ಆ ನೆನಪಲೇ ಅಚ್ಚಳಿಯದಂತೆ
ಉಳಿದವಳು ನೀನು.

-


14 MAR AT 9:21

ನೀ ನನ್ನ ವಿಳಾಸ. ನಿನ್ನಲೇ
ನನ್ನ ನಿವಾಸ‌. ಪ್ರೀತಿ ಶುರುವಾಗಿ
ಶುರು ಹಿತವಾಗಿ ನೀ ವಧುವಾಗಿ
ನನಗಾಗಿ ಈ ಹೃದಯಕ್ಕೆ‌
ಬರಬಾರದೆ. ಪದೇ ಪದೇ
ನೋಡೋದ್ಯಾಕೆ ಕಣ್ಣಲ್ಲೇ
ಕಾಡೋದೇಕೆ‌. ನಿನ್ನಿಂದಲೇ
ಈಗಾಗಲೇ ನಾನಿನ್ನು
ಜೋಪಾನ. ನೀ ಇಲ್ಲದ
ಈ ಜೀವನ ಬರಿ ಮೌನ.

-


13 MAR AT 10:44

ಮಾತಿಲ್ಲದ ಸವಿ ಸಂಭಾಷಣೆ
ನಡೆಸೋದು ನೀನು ಕಲಿತಾಗಿದೆ.
ಇನ್ನೇಕೆ ಬಿಡು ಆಶ್ವಾಸನೆ.
ಮರಭೂಮಿಯಂತೆ ನಾನು
ಮುಂಗಾರೆಯಾದೆ ನೀನು.
ನನ್ನ ಪ್ರೀತಿ ಬಳಿ ಚಿಗುರಿ
ಅರಳಲು. ಕನಸಿನೊಳಗೋ
ಸಿಗದ ಒಲವು ಎದುರೆ ನಗುತ್ತಾ
ಕುಳಿತ್ತಿದೆ. ನಿನ್ನ ಕಿರುಬೆರಳ
ತುದಿಯಲಿ ಕುಣಿಸು ನನ್ನ. ಈ
ಜಗವನೇ ಮರೆವೆನೋ ನಾ ಚಿನ್ನ.

-


17 FEB AT 14:08

ಅವಳೆಂದರೆ
ಬರೆದಿದ್ದೆಲ್ಲವೂ
ಅರ್ಥೈಸಿಕೊಳ್ಳುವಂತೆ
ತೆರೆದಿಟ್ಟ ಪುಸ್ತಕವಲ್ಲ. ನಿಷ್ಠೆ
ನಿಯಮಗಳನುಸರಿಸಿ
ತದೇಕಚಿತ್ತದಲಿ
ವಿಶ್ಲೇಷಿಸಿದಾಗ
ಅರ್ಥವಾಗುವ ಕ್ಲಿಷ್ಟವಾದ
ಬಚ್ಚಿಟ್ಟ ಗ್ರಂಥ .💚

-


13 FEB AT 10:05

ಅದೆಲ್ಲೋ ಅಡಗಿರುವ ನಿರ್ಮಲ
ಆಸೆಗಳ ಕೆದಕಿ ನಾಜೂಕಾಗಿ
ಆಕ್ರಮಿಸಿ ಕಣ್ಣೋಟದಲ್ಲೇ ಬಂಧಿಸಿ
ಮುಗುಳುನಗೆಯಲ್ಲೇ ಮೋಹಿಸಿ
ಮೌನದಲೆಯಲ್ಲೇ ಮನವ ತಣಿಸಿ
ಕುಣಿಸಿ. ಪ್ರೇಮದ ಷೇರು
ಮಾರುಕಟ್ಟೆಯಲ್ಲಿ ಮನದ
ಭಾವನೆಗಳ ಹೂಡಿಕೆದಾರಳು ನೀ
ನನ್ನ ಉಳಿತಾಯ ಶಾಖೆಯೋ 💰ನೀ.

-


7 FEB AT 18:02

ನನ್ನ ಹೃದಯದ ಸ್ವಿಮಿಂಗ್ ಪುಲ್
ಅಲ್ಲಿ ಅವಳ ಹೆಸರು ತೇಲುತ್ತಿದೇ.
ಜ್ಞಾನಿಯಾಗಿ ಮೌನಿಯಾಗಿ
ನನ್ನೊಂದಿಗೆ ನಿನ್ನ ಜೀವನವನ್ನು
ಆನಂದಿಸು. ಉಸಿರುಸರಲಿ
ಬೆರೆತು ಹೊಸ ಜೀವಕ್ಕೆ ಬದುಕು
ಕೊಂಡುವವರೆಗೋ‌.

-


6 FEB AT 17:23

ನಿನ್ನ ಕುರಿತು ಇನ್ನಷ್ಟು
ತಿಳಿಯಲು. ಸಂಶೋಧನೆಗಳೆಲ್ಲಾ
ವ್ಯರ್ಥವಾದವು. ಭಾವನೆಗಳ
ಸೂತ್ರ ಬಿಡಿಸಲಾಗದೆ ಒಲವಿನ
ಫಲಿತಾಂಶ ಹೊಮ್ಮಲಿಲ್ಲ.
ಸಾಗರದಾಳ ಅರಿಯಲು
ಮುಂದಾಗಿದ್ದೆ ನಿನ್ನಂತರಾಳ
ತಿಳಿಯುವಲ್ಲಿ ನಿರತನಾದೆ.

-


30 JAN AT 20:12

ಸಂಪರ್ಕವಿಲ್ಲದೆ ಎಷ್ಟೇ
ದಿನ ಕಳೆದರೂ, A
special person is
always special. Put
me in your hearts
jail. And dont give
me any bail. ಅಷ್ಟೇ 😍.

-


18 JAN AT 3:41

ಚೆಲುವೆರ ಹಿಂಡಿನಲ್ಲಿ ಹೊರ
ಬರುವ ನಗುವಿನಂತೆ. ಮುಂಜಾನೆ
ಮೂಡುವ ಸೂಯ೯ನ ಎದುರು
ನೀ ಬರಲು ನಲಿದಾಡಿವೆ ಕಣ್ಣಗಳು.
ಹೋಟೆಲ್ ಸಿಗ್ನಲ್ ಟೆಂಪಲ್
ಗುಂಪಲೋ ಎಲ್ಲೆಲ್ಲೋ ನಿಂದೇ
ಜಪ. ಎಡಗೈಯಲ್ಲಿ ಬಳೆಯ ತೊಟ್ಟ
ಬಲಗೈಯಾಗ ಪ್ರೇಮ್ ಪತ್ರ ಕೊಟ್ಟ
ಪ್ರೀತಿಯ ಮೋಡಿ ಮಾಡಿದಿ.
ಅಲ್ಲಿಂದ ಇಲ್ಲಿಯವರೆಗೂ
ಕಾಡುತ್ತಿರುವೇ ಸಿಹಿ ಕಾಯಿಲೆಯ
ಹಾಗೇ ಸದಾ ಸದಾ.

-


Fetching Sagar Bhoomannavar Quotes