"ಮನಸ್ಸು ಮುಕವಾದಗ ಮಾತು ಮೌನವಾಗುತ್ತೆ.
ಮನಸ್ಸಿಗೆ ಸಂತಸವಾದಾಗ ಮಾತು ನಗುವಾಗುತ್ತೆ.
ಮನಸ್ಸಿಗೆ ದುಃಖವಾದಗ ಮಾತು ಕಣ್ಣೀರಾಗುತ್ತೆ.
ಮನಸ್ಸಿಗೆ ದುಗುಡವಾದಾಗ ಮಾತು ಗದ್ಗರಿತವಾಗುತ್ತೆ."-
ಸುಡುವ ಸೂರ್ಯನನ್ನು ದೂರುವ ಆಸೆ.
ಪ್ರತಿ ದಿನವೂ ಹುಣ್ಣಿಮೆ ಚಂದ್ರನ ಕಾಣುವ ಆಸೆ.
ಮನದಂಗಳ.
- ಪುಣ್ಯಾತ್ಮ
-
ಜೀವನದಲ್ಲಿ ಯಾರು ದಿನ ಬೆಳಗೋ ಸೂರ್ಯನ ಕಾಯೋಲ್ಲ.
ದಿನ good morning ಹೇಳೋ ಸೂರ್ಯನಿಗೆ ಕಾಯ್ತರೆ.
ಇದು ಜೀವನದ ವಿಪರ್ಯಾಸ.
ಅದೇ ತರಹ good night ಹೇಳೋ ಚಂದ್ರ ನನ್ನು ಯಾರು ಕಾಯೊಲ್ಲ. ಬೆಳಿಗ್ಗೆ ಬಂದಿರೋ ಸೂರ್ಯ ಮತ್ತೆ ರಾತ್ರಿಗೆ ಬರೋ ತನಕ ಕಾಯ್ತಾರೆ.....
ಇದು ಜೀವನದ ಅಭ್ಯಾಸ.
-ಪುಣ್ಯಾತ್ಮ-
ನೆಪವೊಡ್ಡಿ ನೆನಪುಗಳನ್ನು ಬಿತ್ತರಿಸುವ ಬಯಕೆ ಏನಗಿಲ್ಲ,
ನೆನಪುಗಳು ಶಾಶ್ವತ, ನೆಪಗಳು ಕೇವಲ ಕ್ಷಣಿಕವಷ್ಟೆ.-
ಮಳೆ ಬಂದಾಗ ಎಲ್ಲಾ ಪಕ್ಷಿಗಳು ಮರದಲ್ಲಿ ಆಶ್ರಯ ಪಡೆಯುತ್ತವೆ...
ಆದರೆ ಹದ್ದು ಮಾತ್ರಮೋಡದಿಂದ ಮೇಲೆ ಹಾರಾಡುತ್ತವೆ..
ಸಮಸ್ಯೆ ಎಲ್ಲರಿಗೂ ಇದ್ದೆ ಇರುತ್ತದೆ, ಆದರೆ ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ.-
ಸಮಾಜದಲ್ಲಿ,
ಮಾತಿನ ಮೌಲ್ಯ ತಿಳಿದವನು, ಮಾತನಾಡದೆ ಕೆಡುತ್ತಾನೆ.
ಮಾತಿನ ಮೌಲ್ಯ ತಿಳಿಯದವನು, ಮಾತು ಆಡಿ ಕೆಡುತ್ತಾನೆ.-