ನಿನ್ನ ಶ್ರಮ ಹೇಗಿರಬೇಕೆಂದರೆ
ನಿನ್ನ ಬಡತನ ಮತ್ತು ನಿನ್ನ ಮನೆತನ
ದಿಕ್ಕನ್ನು ಬದಲಾಯಿಸುವಂತಿರಬೇಕು
-
ನಾನೂ ನನ್ನ ಬದುಕಿನ ಗುರುತಿಗಾಗಿ
ಬ... read more
ಸಿರಿವಂತನ ಸಮಾರಂಭದ
ಕಾಲು ಹಾಸಿಗೆಯ ರತ್ನಗಂಬಳಿಗೆ
ಇರುವ ಸತ್ಕಾರ ಮತ್ತು ಗೌರವ
ಬಡವನ ತೊಟ್ಟ ಬಟ್ಟೆಗೆ
ಇರುವುದಿಲ್ಲ ಗಾಲಿಬ್..
ಎಸ್.ಕಲಾಲ್-
' ಸರಿ ತಪ್ಪುಗಳೆಂಬ ಕಲ್ಪನೆಯಾಚೆ
ಒಂದು ಬಯಲಿದೆ
ಅಲ್ಲಿ ನಿನ್ನ ಸಂಧಿಸುತ್ತೇನೆ'
- ರೂಮಿ-
ನಿಮ್ಮಲ್ಲಿ ಯಾವುದಾದರೊಂದು
ಹುಚ್ಚು ಇರಲೇ ಬೇಕು,
ಅದರಿಂದಷ್ಟೆ ನೀವು ಜೀವಿಸಬಹುದು.
ದೇವರು ಸಹ ಹುಚ್ಚನಾಗಲು
ಸಿದ್ಧನಾಗಿರುವವನನ್ನೇ
ಹುಡುಕಿ ತಲುಪುತ್ತಾನೆ..
-ಓಶೋ-
ಈ ಚಹ ಖಾಲಿಯಾಗುವವರೆಗೂ
ಉಳಿಯುವ ಮಾತುಕೊಡು ನೀನು
ಕಡೆಯ ಗುಟಕನ್ನು ನನ್ನ ಕೊನೆಯ
ಉಸಿರಿನವರೆಗೂ ಕುಡಿಯುತ್ತಲೇ
ಇರುತ್ತೇನೆ ನಾನು..
ಮೂಲ : ಗುಲ್ಜಾರ್
-
ನೀನು ಬಂದೇಯಾ
ಬಾಗಿಲು ತೆರೆದಿದೆ ಒಳ ಬಾ...!
ನಿನ್ನ ಒತ್ತಡಗಳ ಹೊರೆಗೆ
ಮೊಳೆಯಲ್ಲಿ ನೇತು ಹಾಕು,
ಚಪ್ಪಲಿಗಳ ಜೊತೆಗೆ ನಿನ್ನ ಎಲ್ಲಾ
ನಕಾರಾತ್ಮಕತೆಯ ಬಿಟ್ಟು ಬಾ...!
ಪ್ರೀತಿ ಮತ್ತು ವಿಶ್ವಾಸದ ಮಧ್ಯಮ
ಉರಿಯಲ್ಲಿ ಚಹಾ ಇಟ್ಟಿರುವೆ
ಹನಿ ಹನಿಯಾಗಿ ಹೀರು
ಕೇಳು ಬದುಕುವುದು
ಅಷ್ಟೇನೂ ಕಠಿಣವಲ್ಲ
~ ಮಹಾಶ್ವೇತಾ ದೇವಿ
-
ಅವಳು ಯಾವತ್ತೂ
ಹಗಲಿನಲ್ಲಿಯೇ ಮಕ್ಕಳನ್ನು
ಮಲಗಿಸಿಬಿಡುತ್ತಾಳೆ
ಅಪ್ಪಿತಪ್ಪಿ
ಮತ್ತೆ
ಆಟಿಕೆಗಳನ್ನು
ಮಾರುವುವನು
ಓಣಿಯಲ್ಲಿ
ಬಂದುಬಿಟ್ಟಾನೆಂದು..
ಮೂಲ : ಮೋಶಿನ್ ನಕ್ವಿ
-
ಜೀವನದ ಅಲೆದಾಟದಲ್ಲಿ
ಬರಿ ರಸ್ತೆಗಳನ್ನೇ ಬದಲಾಯಿಸಿದೆ
ಗಾಲಿಬ್
ಆದರೆ ಸೇರುವ ಊರು
ಇನ್ನೂ ಕಾಣುತ್ತಿಲ್ಲ..
ಎಸ್.ಕಲಾಲ್-
ಪ್ರೇಮದ ದೀಪಕ್ಕೆ ಮೈಯೊಡ್ಡಿ
ಸಾಯಲು ಮಿಣುಕು ಹುಳುವಿನಂತೆ
ಎಂಟೆದೆ ಬೇಕು ಗಾಲಿಬ್
ಪ್ರೀತಿಯೆಂದರೆ ಸಾಮಾನ್ಯವಲ್ಲ..
ಎಸ್.ಕಲಾಲ್
-
ಯಾರದೋ ಮೌನವನ್ನು
ಅವನ ಅಹಂಕಾರವೆಂದು
ತಿಳಿಯಬೇಡಿ ಬಹುಶಃ ಅವನು
ಅವನೊಂದಿಗಿನ ಗುದ್ದಾಟದಲ್ಲಿ
ನಿರತನಾಗಿರಬಹುದು..
ಅನಾಮಿಕ
-