S. Srickant   (•ಶ್ರೀಕಾಂತ ಸಂಕರ್ಷಣ•)
74 Followers · 308 Following

Jai Sri Krishna 🌺🙏🌺
Joined 25 November 2020


Jai Sri Krishna 🌺🙏🌺
Joined 25 November 2020
14 APR 2022 AT 23:54

ಹಾಸಿಗೆ ಕೊಳ್ಳಬಹುದು —-ನಿದ್ರೆ ಕೊಳ್ಳಲಾಗದು.
ಮನೆ ಕೊಳ್ಳಬಹುದು ——–ನೆಮ್ಮದಿ ಕೊಳ್ಳಲಾಗದು.
ಪುಸ್ತಕ ಕೊಳ್ಳಬಹುದು ——-ವಿದ್ಯೆ ಕೊಳ್ಳಲಾಗದು.
ವಿದ್ಯೆ ಇದ್ದರೇನಂತೆ ——-ವಿವೇಕ ಇಲ್ಲದಿದ್ದರೆ ?
ಹಣ ಇದ್ದರೇನಂತೆ —–ಗುಣ ಇಲ್ಲದಿದ್ದರೆ?
ಪ್ರಾಣ ಇದ್ದರೇನಂತೆ —–ತ್ರಾಣ ಇಲ್ಲದಿದ್ದರೆ ?
ಗುರು ಇದ್ದರೇನಂತೆ——–ಅರಿವೇ ಇಲ್ಲದಿದ್ದರೆ ?
ರೂಪ ಇದ್ದರೇನಂತೆ ——ಮಾನ ಇಲ್ಲದಿದ್ದರೆ ?
ಸುಖ ಇದ್ದರೇನಂತೆ ——-ಶಾಂತಿ ಇಲ್ಲದಿದ್ದರೆ ?
ಏನಿದ್ದರೇನಂತೆ————ಮಾನವೀಯತೆ ಇಲ್ಲದಿದ್ದರೆ ?

-


14 APR 2022 AT 23:51

ಬರಿ ಹಣ ಇರುವವನು ಆಳಿಗೆ ಮಾತ್ರ ಯಜಮಾನ
ಆದರೆ
ಗುಣ ಇರುವವನು ಮನುಷ್ಯ ಕುಲಕ್ಕೆ ಯಜಮಾನ.

-


14 APR 2022 AT 23:49

ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ.
ಆದರೆ ಕಷ್ಟಪಟ್ಟು ಏರಿದರೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ.
ಗುರಿ ಮುಟ್ಟುವ ತನಕ ನಿಲ್ಲದಿರಿ, ನಡೆಯುತ್ತಿರಿ....

-


14 APR 2022 AT 23:47

ನಂಬುವವರು ಕಲ್ಲುಗಳಲ್ಲೂ ದೇವರನ್ನು ಹುಡುಕಿಕೊಂಡರೆ,
ನಂಬದವರ ಮನಸ್ಸೇ ಕಲ್ಲಾಗಿರುತ್ತದೆ.

-


14 APR 2022 AT 23:43

ನಗದು ಇಲ್ಲದವರು ಬಡವರಲ್ಲ….
ನಗದೇ ಬಾಳುವವರು ಖಂಡಿತ ಬಡವರೇ.

-


14 APR 2022 AT 23:39

ಜಗತ್ತು ನಮ್ಮನ್ನು ನೋಡಲಿ ಎಂಬ ಆಸೆಯಿಂದ ಪರ್ವತ ಏರುವ ಬದಲು
ನಾವು ಜಗತ್ತನ್ನು ನೋಡುವ ಇಚ್ಛೆಯಿಂದ ಹತ್ತಬೇಕು.

-


14 APR 2022 AT 23:26

ಅರಮನೆ ಕಟ್ಟುವಂತ ಸಿರಿತನ ಇಲ್ಲದಿದ್ದರೇನಂತೆ,
ಕಣ್ಣೀರು ಒರೆಸುವಂತ ಗೆಳೆತನ ಇದ್ದಾರೆ ಸಾಕು.

-


14 APR 2022 AT 23:24

ನಮ್ಮಲ್ಲಿ ನಾವು ಸತ್ಯ ಹೇಳಿಕೊಳ್ಳುವುದು ಸತ್ಯ ನಿಷ್ಠೆ.
ಬೇರೆಯವರಲ್ಲಿ ಸತ್ಯ ಹೇಳುವುದು ಪ್ರಾಮಾಣಿಕತೆ.

-


14 APR 2022 AT 23:23

ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಬಾರಿ ಮಾತ್ರ.....
ಒಮ್ಮೆ ಅದನ್ನು ಪಡೆಯುವ ಮೊದಲು
ಇನ್ನೊಮ್ಮೆ ಅದನ್ನು ಕಳೆದುಕೊಂಡಾಗ.

-


14 APR 2022 AT 23:15

ಕೊಟ್ಟದ್ದನ್ನು ನೆನೆಯದೆ
ಮತ್ತು
ಪಡೆದದ್ದನ್ನು ಮರೆಯದೆ
ಇರುವವರೇ ಜಗತ್ತಿನಲ್ಲಿ ಧನ್ಯರು

-


Fetching S. Srickant Quotes