ಆಗ ಹೊರಟೆ ನಾ ಬಾನ ಚುಕ್ಕಿ
ಮುಕ್ಕೋಟಿ ಕನಸ ಹೆಕ್ಕಿ ಕಟ್ಟಿ
ಬಾನಂಗಳದಿ ರೆಕ್ಕೆ ಬಿಚ್ಚಿ
ಆದೆ ನಾ ಹಾರಾಡೋ ಹಕ್ಕಿ!
ನಲುಗಿದೆ ಜನರ ಕೈಯಲ್ಲಿ ಸಿಕ್ಕಿ
ಕುಹುಕದಿ ಮನವ ಕುಕ್ಕಿ ಕುಕ್ಕಿ
ಕಡಿದರು ನನ್ನೊಂದು ಹಾರಾಡೋ ರೆಕ್ಕಿ
ಅದೆ ನಾನಾಗ ಕಕ್ಕಾಬಿಕ್ಕಿ!
ಹೆದುರಿಸೊ ಜನರಲಿ ಪಂಥ ಕಟ್ಟಿ
ಕಂಡ ಕನಸಿನ ಬೆನ್ನ ಹತ್ತಿ
ಬಾನಿಗೆ ಜಿಗಿಸಿತು ಮತ್ತೊಂದು ರೆಕ್ಕಿ
ಕೊನಗೂ ಆದೆ ನಾ ಮಿನುಗೊ ಚುಕ್ಕಿ!-
ಮಳೆಯೊಮ್ಮೆ ಬರಲು ಕುಣಿಯುವ ನವಿಲು
ನೀನೊಮ್ಮೆ ನಗಲು ಹೆಚ್ಚುವುದು ಅಮಲು
ರವಿಯಿರುವ ಎಲ್ಲಿ ತಾವರೆಯೂ ಅಲ್ಲಿ
ನೀನೆಲ್ಲೆ ಇರಲಿ ನನ್ನ ಹಾಜರಿ ಅಲ್ಲಿ
ದಡ್ಡ ನೀನು ತಿಳಿಯೆ ಏನೂ
ಹೇಗೆ ತಿಳಿಸಲಿ ಅರಿಯೆ ನಾನು
ಹುಚ್ಚು ಮನವಿದು ಸತ್ಯ ಅರಿಯದು
ನಿನ್ನನೆಂದೂ ಬಯಸುತಿರುವುದು
ನಂಬಿರುವೆ-ಈ ಬಂಧನವ
ಆ ದೇವನೇ ಮಾಡಿಸಿರುವ
ಮಾಡಾಗಿದೆ ಮನದ ದೊರೆ
ನೀನೆಂದೂ ನನ್ನಲೆ ಸೆರೆ
ಬಾಕಿ ಒಂದಿದೆ-ಅದುವೇ ನಿನ್ನಯ ಒಲವಿನ ಕರೆ-
It doesn't matter
whether you were at front
in the middle of the race or not.
WHO FINALLY WINS THE RACE
-that's all that matters.-
People try to make your voice unheard because they know that once you start speaking they will have nothing to say but just accept your point!!
-
ಚಿಲ್ಲರೆ ಸದ್ದು ಮಾಡಿದರೂ ನೋಟಿನ ಮೌನ ಘನತೆಯದು
ಗುಡುಗು ಗುಡುಗುಡು ಗುಡುಗಿದರೂ ಮೌನದ ಮಿಂಚು ಕೊಲ್ಲುವುದು
ಸಾವಿರ ಜಗಳವಾಡಿದರೂ ಮೌನದ ಅಪ್ಪುಗೆ ಮನ ತಣಿಸುವುದು
ಮೌನದಿಂದಲಿ ನೀನಿರು ಅದರಿಂದಲೇ ಎಲ್ಲರ ಗೆಲ್ಲುತಿರು!-
ಎಲ್ಲಿ ಇಲ್ಲ ಭ್ರಷ್ಟಾಚಾರ
ಅದಕೆ ಇಲ್ಲ ಲೆಕ್ಕಾಚಾರ!
ಕೊಡುವೆವು ನಾವು 'ರಾಜ'ನ ಪಟ್ಟ
ಕಟ್ಟುವರಿವರು ಸಮಾಜಕೆ ಚಟ್ಟ!
'ಜನಸೇವೆ' ಎಂದೇ ಹೇಳುತ ಹಲವರು
ಜನರನು ಕಷ್ಟದ ಕೂಪಕೆ ನೂಕುವರು!
-
When you tell them your dreams they will laugh at you.
When you achieve your dreams they will clap for you!
-
I will prove them-
Their doubt reflects their capability
And my capability is beyond their judging abilty
-