RvN lobo Official   (яνи studio)
11 Followers · 2 Following

Manglorian
Love direction
Proud to being writer
Joined 7 May 2019


Manglorian
Love direction
Proud to being writer
Joined 7 May 2019
21 JUN 2023 AT 13:14

ಮಾನ್ಸೂನ್ ರಾಗ...

ಕಾಲ್ಗೆಜ್ಜೆ ಕಿವಿಯೋಲೆ ಅನುಕಂಪವೇ..
ಗಂಡೆದೆಯ ಗುಂಡಿಗೆಗೆ ಭೂಕಂಪವೇ..
ಬರೀ ಮೂರು ಗಂಟೀಗ ಮುನ್ನೂರು
ಕವಲಾಗಿವೆ...

ಹಣೆಬರಹ ಕೂ , ಹಸೆಮಣೆ ಗೂ
ವ್ಯತ್ಯಾಸವೇ.,
ಆರಂಭಕೇ ಅಂತ್ಯ ಅಭ್ಯಾಸವೇ..
ಅಂಗೈಲಿ ಬದುಕಿಲ್ಲ , ಬದುಕೆಲ್ಲ ಬರಿದಾಗಿದೆ..

-


7 MAR 2023 AT 19:37

ಕಂಡ ಕನಸುಗಳು ,
ದಿನಗಳ ಕಾಯುತ್ತಿವೆ..
ಇರೋ ದಿನಗಳು ,
ಕನಸ ಕಾಣುತ್ತಿವೆ...

-


15 MAR 2022 AT 13:18

ಮತ್ತೆ ಮತ್ತೆ ನೋಡೋ ಫಿಗರ್ ಏನು ಅಲ್ಲಾ..
ಆದರೂ ಶುಗರ್ ಗಿಂತ ಕಮ್ಮಿ ಏನು ಇಲ್ಲ.,
ನಿನ್ನ ಹೋಲಿಕೆ ಮಾಡ ಹೊರಟರೆ
ಲೆಕ್ಕ ಕೂಡದು, ಆ ದೇವರೇ ಬಲ್ಲ..
ಆದರೂ ಮನಸು ಬಯಸುತ್ತಿದೆ ನಿನ್ನ
ಕೇಳಿ ಪ್ರೀತಿ ಎಂಬ ಆಸೆಯನ್ನ
ಜೊತೆಯಾಗುವೆಯಾದರೆ ಕೈ ಜೋಡಿಸುವೆ ನಾ..
ಇಲ್ಲವಾದಲ್ಲಿ , ಕೊನೆವರೆಗೆ ಕಾಯುವೆ ನಾ...

-


26 NOV 2021 AT 13:27

ಮಾಯಾವಿ ಪ್ರಪಂಚವಿದು..
ಒಳ್ಳೆವರಾರು , ಕೆಟ್ಟವರಾರು
ಅನ್ನೋದನ್ನ
ಬಲ್ಲವರಾರು.........

-


28 OCT 2021 AT 10:34

ಹದಿಹರೆಯದ ನೆನಪುಗಳು ನೂರು ...
ಆದರೆ ನಂಬಿಕೆಗಳು ಚೂರು ಚೂರು ....

ನಂಬಿ ನಿಂತ ಸ್ನೇಹ,
ನಂಬಿ ಕೊಟ್ಟ ಪ್ರೀತಿ,.
ಜೊತೆಯಲಿ ಕಳೆದ ನೆನಪುಗಳು ಹಲವು ರೀತಿ .....
ನಂಬಿಕೆಯಿಲ್ಲದಿದ್ದರೂ ನಂಬಿರುವ ಸ್ನೇಹ,
ನಂಬಿಕೆಯಿದ್ದರೂ ನಂಬದಿರುವ ಪ್ರೀತಿ .,
ನೆನಪುಗಳ ಪಾಲಿಗೆ ಅದು ಸಾಗರದ ರೀತಿ ...

ನಂಬಿಕೆಗಳು ಸತ್ತರೂ .., ನೆನಪುಗಳು ಸಾಯದು....

-


3 JUL 2021 AT 13:34

ಮನದ ಆಸೆಯ ಮುರಿದು,
ಜಗದ ಸುಳ್ಳಿನ ಕಂತೆಯಲಿ,
ನಡೆವ ಪ್ರೀತಿಯ ಆಟವದು
ಕಾಡಲು ಬಾರದು ಜೀವನ.....

ಎದುರೆದುರಲಿ ಆಡುವ ಆಟ ,
ಕಣ್ಣಿಗೂ ಕಾಣದ ನೋಟ,
ಬಯಸಿದ ಪ್ರೀತಿಯ ಪಾಠವಿದು
ನನಗೆ ಏಕೊ ತಿಳಿಯದು...

ದೂರಾದ ನಿನ್ನ ಪ್ರೀತಿ,
ಸಹಿಸಲು ಆಗದ ರೀತಿ,
ಮನವೊಲಿಸಿ ನಿನ್ನ ಕಾಡಿ
ಮರೆತೆ ನಾ ನನ್ನಯ ಹಾದಿ....

ಮರಳಿ ಬಾರೆಯ ಕಾದಿರುವೆನಾ.,
ನಡೆದ ದಾರಿಯ ಮರೆಯದೆ ಇನ್ನಾ .... |

-


26 MAY 2020 AT 18:26

ಮುಖದ ಅಂದವ ನೆನೆದು ಹಿಬ್ಬೇರಗಾಗುವ ಈ ಮನಸ್ಸು
ತಾಳಲಾರದೆ ಕುಣಿಯಲು ಆರಂಭಿಸಿದೆ...
ನಗುವ ಸದ್ದಲ್ಲೆ ಹುಟ್ಟಡಗಿಸುವ ಈ ತುಟಿಯ ಕಂಡು
ಆಳುವ ಹೃದಯ ನಗುತಿದೆ...
ನಿನ್ನ ಉಸಿರ ಶಾಖ ತಾಗಿ ನನ್ನ ಜೀವ
ಪಿಸುಗುಡಲಾರಂಬಿಸಿದೆ..
ಕೇಳದೆ ಬಯಸಿದ ನಿನ್ನ ಪ್ರೀತಿ
ನನ್ನ ಉಸಿರ ಕೊಲ್ಲುತ್ತಿದೆ.....

-


16 APR 2020 AT 22:11

ಸೋಬಿತ್ ಸುಂದರ್ ತುಜೆ ದೊಳೆ.
ಪೊಳೊನ್ ಪಿಸೋ ಜಾಲೊ೦ ಪೊಳೆ.,
ಗುಲೋಬರ್ ಆಸಾತ್ ತೊಡೆ ಕಾಂಟೆ..
ಮೋನ್ ಮುಜೆ ಜಾಲಾ೦ ವಾಂಟೆ...

-


5 MAR 2020 AT 19:23

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ,
ನಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾಗಿದೆ .
ನೋಡುವೆ ನಿನ್ನ , ಬಾನದ ತುದಿ
ಕಾಣಿಸದು ಎಲ್ಲೂ, ಏಕೆಂದರೆ .....,
ಈ ಭೂಮುಲಿ ಸುತ್ತಿ ಹೊಡೆದೆ ಗಾರುಡಿ..
ನಾ ಆರಡಿ ನೀ ಮೂರಡಿ... 😃

-


22 OCT 2019 AT 14:28

ಏನಾಗಿದೆ....

ಮರೆತೆ ನಾ ನನ್ನ
ಹೇಳಲೇ ಈ ಸಣ್ಣ
ಜೀವನದ ಕಥೆಯ.......!

ಹದಿ ಹರೆಯದ ವಯಸ್ಸು
ಚಡಪಡಿಸುವ ಮನಸ್ಸು
ಯಾಕೊ ಈ ಜೀವನ
ಕಾಣುತ್ತಿಲ್ಲ ಯಶಸ್ಸು....

ಏನಾಗಿದೆ.....

ಕೂಗಿ ಕೂಗಿ ಕರೆದೆ ನಿನ್ನ ,
ನೋಡಬಾರದೆ ಒಮ್ಮೆ ನನ್ನ..
ಕೇಳಲಿಲ್ಲವೇ ಈ ಕೂಗು ,
ಬರಡಾಗಿದೆ ಜೀವನ....

ಏನಾಗಿದೆ.....

ಜೊತೆಯಲಿ ನಡೆವ ಜೀವನ ,
ನೀನು ಅಂದ ಆ ಕ್ಷಣ...
ಕಾದೆ ಮರೆತು ಮೈಮನ ,
ಅರಿವಾಯಿತು ನನಗೆ ನನ್ನ ಜೀವನ..
ಏನಾಗಿದೆ.. ಯಾಕಾಗಿದೆ....
ತಿಳಿಯೆನು ನಾ....

-


Fetching RvN lobo Official Quotes