ರವೀಂದ್ರ ಗುಡಿಹಾಳ್   (ನನ್ನುಡಿ ಕನ್ನಡಿ)
1.2k Followers · 1.1k Following

read more
Joined 22 August 2018


read more
Joined 22 August 2018

ದೇವರ ಸ್ವರೂಪದಲಿ ತಾಯಿಯನ್ನು
ಕಂಡವರು ಮಹಾ ಜ್ಞಾನಿಗಳು

-



ನಮ್ಮ ದೇಶದ ಉಳಿವಿಗಾಗಿ
ತಮ್ಮ ಪ್ರಾಣವನ್ನು ಸಮರ್ಪಿಸಲು
ಸಜ್ಜಾಗಿರುವ ಮಹಾ ಸೇನೆಗೆ
ಮಹಾ ಶರಣು
ಜೈ ಭವಾನಿ ಜಯವಾಗಲಿ
ಜೈ ಭಾರತ ಮಾತೆಗೆ
ನಮ್ಮ ಯೋಧರೆ ನಮಗೆ
ದೇವರು ನಮ್ಮ ದೇಶ ರಕ್ಷಣೆಗೆ

-



ಅಮ್ಮ ಪೂಜಿಸುವ ಮಹಾ ದೇವತೆ
ಅಮ್ಮ ಮೊದಲಕ್ಷರ ಕಲಿಸಿದ ಶಾರದೆ
ಅಮ್ಮ ಮೊದಲ ತುತ್ತು ಉಣಿಸಿದ
ಅನ್ನಪೂರ್ಣೆ ಅಮ್ಮ ದೇಹವನ್ನು
ಶುಚಿಗೊಳಿಸಿದ ಗಂಗೆ ಅಮ್ಮ
ಧೈರ್ಯ ತುಂಬಿದ ಶಕ್ತಿ ದೇವತೆ
ಅರ್ಥಪೂರ್ಣವಾದ ಅಮ್ಮ
ಮಗುವಿಗೆ ಮಹಾ
ಗುರುವಿದ್ದಂತೆ

-



ಬದುಕು ಅಂತರಂಗದ
ಬೆಳಕಿಗೆ ಸಾಕ್ಷಿಯಾದರೆ
ಅದುವೇ ಸಾಕ್ಷಾತ್ಕಾರದ
ದಿವ್ಯ ದರ್ಶನ

-



ಬಾಳು ಏಳುಬಿಳುಗಳ
ನಡಿಗೆ ಎಚ್ಚರಿಕೆಯಿಂದ
ಹೆಜ್ಜೆ ಇಡಬೇಕು

-



ಭಾರತ ನಾರಿಯರ ಹಣೆಯ
ಮೇಲಿನ ಸಿಂಧೂರ ಅಳಿಸಿದ
ಉಗ್ರರನ್ನು ಚಂಡಾಡಿದ
ಭಾರತಾಂಬೆ
ರಕ್ತದೋಕಳಿಯಾಡಿದಳು
ಜೈ ಜಗನ್ಮಾತೆ ಜೈ ಭಾರತಮಾತೆ

-



ಭಾರತ ಮಾತೆಯ ಯೋಧರು
ನಮ್ಮ ಮನೆಯ ಮಕ್ಕಳಿದ್ದಂತೆ
ಅವರ ಧೈರ್ಯ ಸ್ತೈರ್ಯಕ್ಕೆ
ನಾವು ಸದಾ ಬೆಂಬಲಿಸಬೇಕು
ಜಯವಾಗಲಿ ಜೈ ಜವಾನ್
ಜೈ ಭಾರತಮಾತೆ

-



ಮನೆಯಾಗಲಿ ಮನವಾಗಲಿ
ಸದಾ ಶಾಂತವಾಗಿರಬೇಕು

-



ಬದುಕು ನೋವಿನ ಸಂತೆ
ಇಲ್ಲಿ ಸಂತೋಷದಿಂದ
ವ್ಯಾಪಾರ
ಮಾಡಬೇಕಷ್ಟೇ

-



ಪ್ರೀತಿಸುವುದಾದರೆ
ಪ್ರಕೃತಿಯನ್ನು ಪ್ರೀತಿಸು
ಎಂದೆಂದಿಗೂ ಮೋಸ
ಮಾಡುವುದಿಲ್ಲ
ಮೌನವಾಗಿ ಮನವನ್ನು
ಶಾಂತಗೊಳಿಸುವ
ಮಹಾ ತಪಸ್ವಿ
ಈ ಪ್ರಕೃತಿ

-


Fetching ರವೀಂದ್ರ ಗುಡಿಹಾಳ್ Quotes