Rudru punith RC  
87 Followers · 15 Following

Joined 28 February 2018


Joined 28 February 2018
18 NOV 2018 AT 13:16

ಬಣ್ಣಗಳಿಲ್ಲದ ನನ್ನ ಮನಸ್ಸೆಂಬ ಹಾಳೆಯಲಿ,
ಕಣ್ಣೀರಿನ ಮಸಿಯಿಂದ ನಾನು ಬರೆದ ಕವಿತೆಯಲಿ
ನಿಮ್ಮ ಕುರಿತಾದ ಬಣ್ಣ ಬಣ್ಣದ ನೆನಪುಗಳು ಮಾತ್ರ.

ಭಾವನೆಗಳು ದಾರ ಕಿತ್ತ ಗಾಳಿಪಟದಂತೆ ಹಾರಿಹೋದರೆ,
ಮನಸ್ಸು ಮಾತ್ರ ಆ ಕೈಯಿಂದ ಜಾರಿ ಹೋದ ಗಾಳಿಪಟವನ್ನೇ ಎದುರು ನೋಡುತ್ತಿದೆ.

ಜಾರಿದ ಕಂಬನಿಯು ಕೆನ್ನೆ ಸೋಕಲು
ಒಂದೊಂದು ಹನಿಯು ಹಳೆ ನೆನಪುಗಳನ್ನ ಕೆದಕಿ ಹೊರತೆಗೆಯುತ್ತಿದೆ.

ಮನದೊಳಗೆ ನೋವಿನ ಜ್ವಾಲೆಯೇ ಹೊತ್ತಿ ಉರಿಯುತ್ತಿರಲು,
ಕೇವಲ ಒಂದೋ ಎರಡೋ ಹನಿ ಕಣ್ಣೀರು ಆ ಜ್ವಾಲೆಯನ್ನು ನಂದಿಸಲು ಸಾಧ್ಯವೇ?

-


18 NOV 2018 AT 10:13

ಸುತ್ತಲೂ ನಿನ್ನ
ನೆನಪುಗಳನ್ನು ಚೆಲ್ಲಿಕೊಂಡು
ಏಕಾಂತವನ್ನು ಕಳೆಯುತ್ತಿದ್ದೇನೆ,
ಮನದೊಳಗೆ ಬಂದ ನಿನ್ನ ಕುರಿತು
ಒಂದೆರೆಡು ಕವಿತೆ ಬರೆಯುತ್ತೇನೆ,
ಮದುಮಗಳಾದ ಗೆಳತಿಯ
ಅಂಗೈಯಲ್ಲಿ ಮದರಂಗಿ
ಬಿಡಿಸುವಾಗ ನನ್ನ ಹೆಸರು
ಬರೆಯದಿರು, ಕೈತಪ್ಪಿ ಹೋಗುವ
ಇಚ್ಚೆ ನನಗಿಲ್ಲಾ,
ಮುಂಜಾನೆಯ ಲಗ್ನದ ಕ್ಷಣ
ಅವರಿಬ್ಬರೂ ಮಾಲೆ
ಬದಲಾಯಿಸಿಕೊಳ್ಳುವ ವೇಳೆ
ನನ್ನದೇ ನೆನಪಿನಲ್ಲಿ ಅಕ್ಷತೆ
ಎರಚದಿರು ಅವರ ಮೇಲೆ,
ನನಗಿಲ್ಲಿ ಬಿಕ್ಕಳಿಕೆಯಿಂದ
ತಿನ್ನಲಾಗುತ್ತಿಲ್ಲಾ ನನ್ನಯ ಕೈ ಅಡುಗೆ,
ಎಲ್ಲವೂ ಮುಗಿದ ಮರುಕ್ಷಣವೇ
ನನಗೆ ಕರೆ ಮಾಡು,
ಮದುಮಕ್ಕಳು ಅವರಾದರೂ
ಮೆಲ್ಲನೆ ಬೈಕ್ ನಲ್ಲಿ ಮೆರವಣಿಗೆಯಂತೆ
ಬರೋಣ ನಾವಿಬ್ಬರು ...

-


14 AUG 2018 AT 18:19

ಯಾವಾಗ ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಕಡಿಮೆ ಆಗುತ್ತದೋ,
ಯಾವಾಗ ನಮ್ಮ ದೇಶದಲ್ಲಿ ಮೇಲ್ಜಾತಿ ಕೆಳಜಾತಿ ಎನ್ನುವ ಅನಿಷ್ಟ ಮನಸ್ಥಿತಿಯ ದಮನ ಆಗುತ್ತದೋ,
ಯಾವಾಗ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತದೋ,
ಯಾವಾಗ ಈ ಜ್ಯಾತಿ ಧರ್ಮಗಳ ನಡುವು ಕೋಮುದ್ವೇಷವನ್ನ ಹಚ್ಚುತ್ತಿರುವವರ ನಿರ್ಣಾಮ ಆಗುತ್ತದೋ,
ಯಾವಾಗ ನಮ್ಮ ಸಂವಿಧಾನವನ್ನ ಪ್ರತಿಯೊಬ್ಬ ನಾಗರಿಕನೂ ಗೌರವ ಸಲ್ಲಿಸುವ ದಿನ ಬರುತ್ತದೋ,
ಅವತ್ತು ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ಹಾಗೆ.

ಅಲ್ಲಿಯವರೆಗೆ ಈ ಸ್ವಾತಂತ್ರ್ಯ ಅನ್ನೋದು ಕೇವಲ ಉಳ್ಳವರ ಮತ್ತು ಬಲ್ಲವರ ಧನಿಯ ದರ್ಪದಲ್ಲಿರುತ್ತದೆ.

-


13 AUG 2018 AT 15:41

ಬ್ರಿಟಿಷರ ಆಳ್ವಿಕೆಯ ಸಮಯ ಅವರ ಕಪಿಮುಷ್ಠಿಗೆ ಸಿಕ್ಕಿ ದೌರ್ಜನ್ಯಕ್ಕೆ ಒಳಗಾದ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಒಗ್ಗಟ್ಟಿನ ಕೊರತೆ ಇತ್ತು, ಸ್ವಾತಂತ್ರಕ್ಕಾಗಿ ಸಾವಿರಾರು ಜನ ಹೋರಾಟಗಾರರು ಇದ್ದರೂ ಸಹ ಇಡೀ ದೇಶವನ್ನೇ ಒಗ್ಗಟ್ಟಾಗಿ ಒಂದು ಸಂಘಟನೆಯ ರೀತಿ ಮಾಡಿದ್ದು ಮತ್ತು ತನ್ನ ಒಂದು ಕೂಗಿದೆ ಇಡೀ ರಾಷ್ಟ್ರವೇ ಬೆನ್ನಿಗೆ ಬಂದು ನಿಲ್ಲುವ ಹಾಗೆ ಮಾಡಿದ್ದು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ..
ಅವರ ಅದರ್ಶಗಳನ್ನ ನಾವು ಪಾಲಿಸುತ್ತೇವೋ ಇಲ್ಲವೋ ಗೊತ್ತಿಲ್ಲ, ಆದರೆ ಅವರು ನಡೆದು ಬಂದ ದಾರಿಯಲ್ಲಿ ಕೇವಲ ಒಂದು ಹೆಜ್ಜೆ ಇಟ್ಟರೂ ಸಾಕು ನಮ್ಮ ಬದುಕು ಸಾರ್ಥಕಮಯವಾಗುವುದರಲ್ಲಿ ಸಂಶಯವಿಲ್ಲ..

ಮಹಾತ್ಮ ನನ್ನ ಆತ್ಮ...

-


13 AUG 2018 AT 15:30

ಗಾಂಧಿ ಹುಟ್ಟಿದ ನೆಲದಲ್ಲಿ ನನ್ನ ಜನ್ಮವಾಗಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ..

-


16 APR 2018 AT 9:36

ಎಲ್ಲ ಅವಮಾನ ಮತ್ತು ನೋವುಗಳನ್ನ ಸಹಿಸಿಕೊಂಡೇ ಇರು ನೀನು.

ನೀನು ಬೆಳೆಯುವವರೆಗೆ ಮಾತ್ರ ಅಲ್ಲ

ಬದಲಾಗಿ ನಿನ್ನ ಟೀಕಿಸಿದವರು,
ಅವಮಾನ ಮಾಡಿದವರು ಕೊಂಡಾಡುವ ವರೆಗೆ.

-


12 APR 2018 AT 23:07

Life is not fair with everyone's life
So ನಾವು ಲೈಫ್ ಜೊತೆ ಅಷ್ಟೇ ಫೇರ್ ಆಗಿ ಇರ್ಬೇಕು ಅಂತ ಏನು ಇಲ್ಲ..

Chase your dream,
Stay hungry,
Stay foolish.

Gultoo

-


5 APR 2018 AT 21:16

ಜೀವನ ಕೆಲವೊಮ್ಮೆ ನಮಗೆ ಎಂಥಹ ಏಟು ಕೊಡತ್ತದೆ ಎಂದರೆ ಆ ಏಟಿಗೆ ನಮ್ಮ ಜೀವನದ ದಿಕ್ಕೇ ಬದಲಾಗಿ ಹೋಗಬಹುದು. ಅಂತಹ ಸಮಯದಲ್ಲಿ ನಮಗೆ ಎರಡು ದಾರಿಗಳು ಕಾಣಸಿಗುತ್ತವೆ,
ಒಂದು ಕತ್ತಲೆ(ಸಾವು), ಇನ್ನೊಂದು ಬೆಳಕು(ಸಾಧನೆ).

ಆರಿಸುವ ದಾರಿ ಇನ್ನೊಬ್ಬರಿಗೆ ಪ್ರೇರಣೆಯಾಗಿರಬೇಕು

-


4 APR 2018 AT 22:37

ಜೀವನ ಕೆಲವೊಮ್ಮೆ ಎಂತಹ ಏಟು ಕೊಡುತ್ತದೆ ಎಂದರೆ ಆ ಏಟಿಗೆ ಜೀವನದ ದಿಕ್ಕೇ ಬದಲಾಗಿ ಹೋಗಬಹುದು. ಆ ಸಮಯದಲ್ಲಿ ನಮಗೆ ಎರಡು ದಾರಿಗಳು ಕಾಣಸಿಗುತ್ತದೆ.
ಒಂದು ಸಾವು, ಇನ್ನೊಂದು ಸಾದಿಸು

ನೀವು ಆಯ್ಕೆ ಮಾಡುವ ದಾರಿ ನಿಮಗೆ ಇನ್ನೊಂದು ಬದುಕನ್ನು ರೂಪಿಸಬಲ್ಲದು.

-


4 APR 2018 AT 13:45

ಬದುಕು ಕೆಲವು ಸಲ ಅನೀರೀಕ್ಷಿತ ಘಟ್ಟವನ್ನ ತಲುಪಿದಾಗ, ಕೇವಲ ಮನಸ್ಸಿಗೆ ಬೇಜಾರಾಗುವ ಹಾಗಿದ್ದರೆ ಅದನ್ನ ಮರೆಮಾಚುವ ಪ್ರಯತ್ನ ಮಾಡಬಹುದು, ಆದರೆ ಅದು ಹೃದಯ ಹಿಂಡುವಷ್ಟು ನೋವು ಕೊಟ್ಟಾಗ ಆ ನೋವಿನ ಅನುಭವ ಬಲ್ಲವನೇ ಬಲ್ಲ..

ಕೆಲವು ನೋವುಗಳು ಸಹಿಸಿಕೊಳ್ಳುವಷ್ಟು ಸಣ್ಣದು ಇರುವುದಿಲ್ಲ, ಪರರ ಜೊತೆ ಹಂಚಿಕೊಳ್ಳುವಷ್ಟು ಸುಲಭವೂ ಇರುವುದಿಲ್ಲ.

ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಕಷ್ಟ ಪಟ್ಟು ಅನುಭವಿಸುವಂತಹ ನೋವುಗಳು ಬರುತ್ತವೆ.

-


Fetching Rudru punith RC Quotes