ಅವಳ ಶಿರದಲಿರುವುದು ಮುಕುಟ-ಕಿರೀಟ,
ಅವಳ ಹಿಂದಿರುವುದು ಕರುನಾಡ ಬಾವುಟ
ಅವಳ ಹಣೆಯಲಿರುವುದು ಅರಿಶಿಣ-ಕುಂಕುಮದ ಬೊಟ್ಟು,
ಅವಳು ಸಲಹುವಳು ತನ್ನ ನೆಲದ ಕಂದಮ್ಮಗಳ ಪಣತೊಟ್ಟು
ಅವಳ ಮೂಗಿನಲ್ಲಿ ಹೊಳೆಯುವುದು ಕೆಂಪಾದ ಮೂಗುತಿ,
ಅವಳ ಕಂಡರೆ ಸಾಕು ಉಕ್ಕುವುದು ಮನದಲಿ ಭಕುತಿ
ಅವಳ ಕೆನ್ನೆಗಳ ಮೇಲೆ ರಾರಾಜಿಸುವುದು ಹಳದಿ ಅರಿಶಿಣ,
ಅವಳು ನೀಡಿರುವಳು ಕನ್ನಡ ಸಾಹಿತ್ಯ ಗ್ರಂಥಗಳ ಹೂರಣ
ಅವಳು ನುಡಿಯುವ ಅಧರಗಳು ಕೆಂಪು ಸೂಸುವ ಕಂಪು,
ಅವಳ ನಾಡಿನ ಹಾಡು ಹಾಡಲು-ಕೇಳಲು ಬಲು ಇಂಪು
ಅವಳ ಕತ್ತಿನಲ್ಲಿರುವುದು ಸೂರ್ಯರಶ್ಮಿಯಂತೆ ಕಂಗೋಳಿಸುವ ಚಿನ್ನದ ಆಭರಣ,
ಅವಳ ನೋಟದೊಳಗೆ ಸಂಚಲಿಸುತಿರುವುದು ಹೊನ್ನಕಿರಣ
ಅವಳು ಉಟ್ಟಿಹಳು ನಿಸರ್ಗದ ಹಸಿರು ಬಣ್ಣದ ಸೀರೆ,
ಅವಳೇ ನಮ್ಮ ವೀರ ವನಿತೆಯರಲ್ಲಿ ಕಾಣುವ ನೀರೆ
-
-✍️🌄 ಸೂರ್ಯರಶ್ಮಿ🌅👸🪄
ಅಣ್ಣ-ತಂಗಿಯರ, ಅಕ್ಕ-ತಮ್ಮಂದಿರ ಹಬ್ಬ ರಕ್ಷಾಬಂಧನ,
ಇರಲಿ ಪರಸ್ಪರರ ಶ್ರೀರಕ್ಷೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಅನುದಿನ,
ಕಟ್ಟಿಸಿಕೊಳ್ಳದಿದ್ದರೂ ಚೆಂದದ ರಾಖಿ,
ಒಂದು ರೇಷ್ಮೆಯ ನೂಲಿನ ಎಳೆಯೂ ಕೂಡ ರಾಖಿ,
ಪ್ರೀತಿ, ಸಹಬಾಳ್ವೆಯಿಂದ ಬಾಳಿ ಜೀವನಪೂರ್ತಿ,
ಮುಖ್ಯವಲ್ಲ ತೋರಿಕೆಯ ರೀತಿ,
ಅಣ್ಣ-ತಮ್ಮನ ರಕ್ಷಣೆಯೇ ಸಹೋದರಿಯರಿಗೆ ಕಾಣಿಕೆ,
ಅಕ್ಕ-ತಂಗಿಯರ ಆಶೀರ್ವಾದವೇ ಸಹೋದರರಿಗೆ ಶ್ರೀರಕ್ಷೆ!
ಎಲ್ಲರಿಗೂ ರಕ್ಷಾಬಂಧನ ಹಬ್ಬದ ಹೃತ್ಪೂರ್ವಕ ಶುಭಾಶಯಗಳು🙏💐.
-
ಬೆಟ್ಟದ ಮೇಲೆ ಹಸಿರಿನ ಕಳೆಯ ತಂದಿರುವ ಮಳೆಯ ವಾತಾವರಣ
ಶುಭಸಂಜೆಯಲಿ ಇಳೆಯ ಮೇಲಿನ ಮನೆಮಹಡಿಯಿಂದ ಸವಿಚಾರಣ-
ತನ್ನ ಹುಟ್ಟಿದ ಹಬ್ಬ ಯಾವಾಗ ಎಂದೇ ತಿಳಿಯದಿರುವವಳು,
ಮಕ್ಕಳಿಗೆ ಜನ್ಮ ಕೊಟ್ಟ ಕ್ಷಣದಿಂದ ತನ್ನ ಹುಟ್ಟಿದ ಹಬ್ಬ ಆಚರಿಸುವವಳು..
ಸದಾ ಮನೆಗೆಲಸದ ಮೇಲೆ ಗಮನ ಕೊಡುವವಳು,
ಒಂದು ಕ್ಷಣವೂ ಬಿಡುವು ಇಲ್ಲದಿದ್ದರೂ ಬೇರೆಯವರ ಖುಷಿಯಲ್ಲಿ ತನ್ನ ಖುಷಿಯ ಕಾಣುವವಳು..
ಬಿಡುವಿರದ ಕೆಲಸಗಳ ನಡುವೆ ವಿಶ್ರಮಿಸಲೆಂದು ಹೋಗುವ ಅವಳು,
ವಿಶ್ರಾಂತಿಯಲ್ಲೂ ಆ ಕೆಲಸಗಳ ಬಗ್ಗೆ ಆಲೋಚಿಸುವವಳು..
ತನಗಾಗಿ ಸಮಯವನ್ನು ಮೀಸಲಿಡದಿರುವವಳು,
ತನ್ನವರಿಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವಳು...
ಅಮ್ಮ ಎಂಬ ದೇವತೆ ಅವಳು!-
ಒಳ್ಳೆಯ ಕೆಲಸಗಳನ್ನು ಒಳ್ಳೆಯವರಿಂದಲೇ ಕಲಿತು ಆ ಕಾರ್ಯಗಳನ್ನು ತಮಗೇ ತಿಳಿದೋ, ತಿಳಿಯದಂತೆಯೋ ಮಾಡಿ ಅವರನ್ನು ದೂರ ಮಾಡುವ ಜನರಿಗೇನು ಗೊತ್ತು, ಅವರು ತಾವು ದೂರ ಮಾಡಿಕೊಂಡಿರುವ ಒಳ್ಳೆಯವರಿಂದ ಒಳ್ಳೆಯ ಕೆಲಸಗಳನ್ನಂತೂ ಅಳವಡಿಸಿಕೊಂಡಿದ್ದೇವೆ ಎನ್ನುವುದು.
-
ಬಿರು ಬೇಸಿಗೆಯ ಧಗೆಯ ಕಳೆಯಲು
ಬಂತು ವರ್ಷದ ಮೊದಲ ಮಳೆ
ಬಂದು ತನುವ ತಂಪಾಗಿಸಿ ಮೂಡಲು
ಬೀರಿತು ಮನದಲ್ಲಿ ಹರ್ಷದ ಹೊಳೆ-
ಖಂಡಿತ ಇಲ್ಲ,ಅದು ಹಾಗೆಂದುಕೊಂಡವರಿಗೆ ಮಾತ್ರ!
ಏಕೆಂದರೆ ರೊಕ್ಕ ಜೀವನದ ಒಂದು ಭಾಗ ಮಾತ್ರ,
ಸಂಬಂಧ ಮತ್ತು ಭಾವನೆಗಳ ಬೆಲೆಯೇ ವಿಭಿನ್ನ ಗಾತ್ರ ಹೊಂದಿದೆ. ಕೇವಲ ರೊಕ್ಕ ಎನ್ನುವ ಕಾಗದದಿಂದ ಸಂಬಂಧ ಮತ್ತು ಭಾವನೆಗಳನ್ನು ಮೀರಿಸುವಂತೆ ಮಾಡಬಾರದು.-
ಜೀವನದಲ್ಲಿ ನಮ್ಮೊಂದಿಗೆ ಇರುವುದು ಎಂದರೆ ಅದು ನಮ್ಮ ಆತ್ಮವೆಂಬ ಪರಮಾತ್ಮ ಮಾತ್ರ. ಅದು ಜೀವ, ಜೀವನ ಇರುವವರೆಗೆ, ಜೀವನ ಮುಗಿಸಿ ಜೀವ ಹೋದಾಗ ಸೇರುವುದು ಪರಮಾತ್ಮನಿಗೆ!
-