ಭಲಾಡ್ಯತೆಯ ಮುಂದೆ ದುರ್ಬಲತೆ ಅನ್ನೋದು ನೆಲ ಕಚ್ಚಲೆ ಬೇಕು, ಈ ಪಾಠವನ್ನು ಪ್ರಕೃತಿಯೇ ತಿಳಿಸಿಕೊಟ್ಟಿದೆ.
ಭಲಾಡ್ಯ ಕ್ರೂರ ಪ್ರಾಣಿಗಳಾದ ಸಿಂಹ, ಹುಲಿಯ ಮುಂದೆ ಜಿಂಕೆ, ಮೊಲಗಳು
ನಾವು ಹೊಡೆದಾಡುತ್ತೇವೆ ಅಂತ ನಿಂತರೆ ಅದೀತೆ?
ಹೊಡೆದಾಟ ಯಾವಾಗಲೂ ಸಮ ಶಕ್ತಿಯ ಮಧ್ಯೆ ಇರಬೇಕಾಗುತ್ತದೆ,
ಹೇಳುವ ತಾತ್ಪರ್ಯವಿಷ್ಟೇ ಸ್ನೇಹಿತರೇ
ನಮ್ಮ ಶಕ್ತಿ ಸಾಮರ್ಥ್ಯಕ್ಕೂ ಮಿಗಿಲಾದ ಭಲಾಡ್ಯ ಶಕ್ತಿಯನ್ನು ಎದುರಿಸಬೇಕಾದಲ್ಲಿ
1) ನಾನು ಅದರ ಶಕ್ತಿಗೆ ಸಮಾನನಲ್ಲ ಎಂದು ಹಿಂದೆ ಸರಿದು ಬಿಡುವುದು.
2) ಇಲ್ಲವಾದಲ್ಲಿ ಶಕ್ತಿಗಿಂತ ಯುಕ್ತಿ ಬಳಕೆ ಮಾಡುವುದು.
ಇವೆರಡರಲ್ಲಿ ಒಂದನ್ನು ಬಳಸಿದ್ದೆ ಆದರೇ ಮಾತ್ರ ಜೀವ ಉಳಿದೀತು. ಇಲ್ಲವಾದಲ್ಲಿ ಸತ್ತು ಹೋಗಬೇಕಾಗುತ್ತದೆ ನೆನಪಿರಲಿ.-
ಸಂಬಂಧಗಳ ಮಧ್ಯೆ ಮನಸ್ತಾಪಗಳು ಸಹಜ, ಆದರೆ ನಂಬಿಕೆ ಹಾಗೂ ವಿಶ್ವಾಸ ಎನ್ನುವುದು ಅವನ್ನು ಪ್ರೀತಿಯಿಂದ ಬೆಸೆಯುವ ಅಂಟಿನಂತಿರಬೇಕು,
ಖಾಲಿಯಾದಷ್ಟು ಸ್ವಚ್ಛವಾದ ತಿಳಿನೀರು ಒರತೆಯಲ್ಲಿ ತುಂಬಿಕೊಂಡ0ತೆ-- ಸಂಬಂಧಗಳ ಮದ್ಯೆ ಈ ವಿಶ್ವಾಸ, ನಂಬಿಕೆ ತುಂಬುತ್ತಲೇ ಇರಬೇಕು,
ಆದು ಬಿಟ್ಟು ಸುಳ್ಳು, ಸ0ಶಯಗಳು ತುಂಬಿ,ಸ0ಬಂಧಗಳು ರಾಡಿ ನೀರಿನ0ತೆ ಕಲುಷಿತವಾಗಬಾರದು
ಅಷ್ಟೇ.-
ಅಪ್ರತಿಮ ಸುಂದರ ಸ್ವರ್ಗದ ತರಹ ಕಾಣಿಸಿಕೊಂಡು, ಎಲ್ಲರನ್ನು ಕೈಬೀಸಿಕರೆದು,
ಮರುಳಾಗಿ ತನ್ನೊಳಗೆ ಪ್ರವೇಶಿದ ಕೂಡಲೇ ತನ್ನ ಮಹಾದ್ವಾರವನ್ನು ಮುಚ್ಚಿ,
ಇನ್ನೆಂದೂ ಮರಳಲು ಸಾಧ್ಯವಾಗದ ಹಾಗೆ ಇರುವ ಮನೆ,
ಅದುವೇ ಮದುವೆ ಎಂಬ ಭದ್ರ ಕೀಲಿ ಕೈಯನ್ನು ಜಡಿದುಕೊಂಡು, ನಿಂತಿರುವ ಮಾಯಾವಿ,ಸಂಸಾರವೆಂಬ ಮನೆ.-
ಕ್ರೂರತನದ ನಡೆನುಡಿ ಉಳ್ಳ ವ್ಯಕ್ತಿಯೊಬ್ಬ, ಅದೆಷ್ಟೇ ಪ್ರೀತಿ ತೋರಿದರೂ ಕೂಡ, ಎದುರಿನ ವ್ಯಕ್ತಿ ಮಾತ್ರ ಆ ಪ್ರೀತಿಯನ್ನು ಸ್ವೀಕರಿಸದಷ್ಟು ಭಯದಿಂದ ಅವನ ಮನಸ್ಸು ಮುರಿದು ಹೋಗಿ ಬಿಟ್ಟಿರುತ್ತದೆ.
-
ಸಮರ ಸಾಕಿನ್ನು,
ಉಸಿರು ಬಿಡುತಿವೆ ಜೀವಗಳು,
ಉಸಿರು ಕಳೆದುಕೊಳ್ಳುತಿಹ
ತಮ್ಮವರ ನೋಡಿ,
ಕಂದಮ್ಮಗಳ ಕನಸುಗಳು
ಆಗುತಿವೆ ಅಹುತಿ ಬೆಂಕಿಗೆ,
ಮಾನವೀಯತೆ ಪಾತಾಳಕ್ಕೆ
ಬಿದ್ದು ಉಸಿರು ಚೆಲ್ಲಿದೆ,
ಏತಕೆ ಸಮರ?
ಭೂಮಿಗಾಗಿ ತಾನೇ
ಇದೆಂತಹ ಭಯಾನಕ ಸದೃಶ್ಯ?
ಎಲ್ಲಿದಿರಾ ಧರ್ಮ ಬೋಧಕರೇ?
ದೇಶದ ನಾಯಕರ ಕೂಡಿಸಿ
ಹೇಳಲಾರಿರಾ ಬುದ್ದಿ,
-
"ಬೇರೆಯವರನ್ನು ಕೊಂದಾದರೂ
ಪರವಾಗಿಲ್ಲ ಒಟ್ಟಾರೆ ನಾನು ಬದುಕಬೇಕು"..
ಜಗತ್ತಿನ ಸದ್ಯದ ಮಂತ್ರ,
-
ಪರಿಸ್ಥಿತಿ, ಸನ್ನಿವೇಶಗಳು ಅದೆಷ್ಟೇ ಕೆಟ್ಟದ್ದಾಗಿದ್ದರೂ ಕೂಡ, ಒಳ್ಳೆಯವನಾದವನು ಬಯಸಿದರೂ ಕೂಡ ಕೆಟ್ಟದ್ದನ್ನು ಮಾಡಲು ಸಾಧ್ಯನೇ ಇಲ್ಲ.
ಯಾಕೆಂದರೆ ಅವನ ಆತ್ಮ ಸಾಕ್ಷಿಯೇ ಅವನ ಗುರುವಾಗಿರುತ್ತದೆ, ಅಕಸ್ಮಾತ ಅವನು ತಪ್ಪನ್ನೇನಾದರೂ ಮಾಡಿದರೆ ಅದು ಅವನನ್ನು ಅದೆಷ್ಟು ಭಯಾನಕವಾಗಿ ಶಿಕ್ಷಸಿಬಿಡುತ್ತದೆ ಎಂದರೆ, ಅವನೆಂದೂ ಕೂಡ ಮತ್ತೊಮ್ಮೆ ಕೆಟ್ಟ ದಾರಿ ತುಳಿಯುವ ಸಾಹಸವನ್ನೇ ಮಾಡಲು ಹೋಗುವುದಿಲ್ಲ.-
ಸಂಬಂಧಗಳಿಗೆ ಸಮಯ ಕೊಡಲೇಬೇಕು, ಇಲ್ಲವಾದಲ್ಲಿ ಸಂಬಂಧಗಳು ಸೊರಗಿ ಸತ್ತು ಹೋಗುತ್ತವೆ. ನೆನಪಿರಲಿ.— % &
-
ಅವನೋ ಇದ್ದಿಲಿಗೆ ಸಮ ಬಣ್ಣದ ಕರಿಯ,
ಅವಳಾದರೋ ಹಾಲು ಬಿಳುಪಿನ
ಮೈಬಣ್ಣದ ಚೆಲುವೆ,
ಪ್ರೀತಿ ಬೆಸೆದಿತ್ತು ಇಬ್ಬರಲಿ,
ತಾಳಿ ತನ್ನ ಬಂಧದಿ ಬೆಸೆದಿತ್ತು,
ಅಕ್ಕಿಕಾಳು ಹಾಕಿದವರೆಲ್ಲ
ಅಂದಿದ್ದರು ಮನದಲೆ,
ಸುಂದರಿಗೆ ಅದ್ಹೇಗೆ ಪ್ರೀತಿ
ಮೂಡಿತ್ತೋ ಈ ಕರೀಮಾರಿಯ
ಗಂಡನು ಕಂಡು,ಆದರವರಿಗೇನು ಗೊತ್ತು!
ಅಲ್ಲಿ ಜೀವ ಎರಡಿದ್ದರೂ ಆತ್ಮ ಒಂದಾಗಿ
ಬೆಸೆದುನಿಂತಿವೆ ಎಂದು,
ಅವಳ ಕಣ್ಣಿಗೆ ಅವನೆ ಮನ್ಮಥ,
ಆತ್ಮ ಬೆಸೆಯುವಾಗ
ರೂಪಕ್ಕಿಲ್ಲ ಅಲ್ಲಿ ಜಾಗ.
— % &-
ದೇಶಗಳು, ಈ ಯುದ್ಧಗಳು,ಶಸ್ತ್ರಗಳು ಇವೆಲ್ಲ ದೇವರ ಸೃಷ್ಟಿಯಂತೂ ಅಲ್ಲ,ಯುದ್ಧದಲ್ಲಿ ಸತ್ತು ಹೋದ ಪ್ರತಿಯೊಬ್ಬ ಸೈನಿಕನೂ ತನ್ನ ದೇಶಕ್ಕಾಗಿ ಜೀವಕೊಟ್ಟಿರಬಹುದೇನೋ ನಿಜ,
ಆದರೆ ದೇವರ ಮುಂದೆ ನಿಂತಾಗ ಮಾತ್ರ ದೇವರು ಅವನನ್ನು ದೇಶಕ್ಕೋಸ್ಕರ ಎದುರಾಳಿಯನ್ನು ಕೊಂದು ಹಾಕಿದ್ದಕ್ಕೆ "ಶಹಭಾಸ್"ಅಂತ ಹೇಳಿ ಸ್ವರ್ಗಕ್ಕೆ ಕಳಿಸುತ್ತಾನೋ?
ಅಥವಾ "ದೇಶ,ಯುದ್ಧ,ಗಡಿ,ಯುದ್ಧ, ಶಸ್ತ್ರ ಇವೆಲ್ಲ ನಾನು ಮಾಡಿಕೊಳ್ಳಿ ಅಂತ ನಾನಂತೂ ಹೇಳಿಲ್ಲ ಮನುಜ. ನೀನು ಸರಿ ಸುಮಾರು 30 ಜನರನ್ನು ಯುದ್ಧದಲ್ಲಿ ಕೊಂದಿರುವೆ, ಕೊಲೆ ಮಾಡಿರುವ ಪಾಪ ನಿನ್ನ ಮೇಲಿದೆ, ಆದ ಕಾರಣ ನಿನಗೇ ನರಕ ಪ್ರಾಪ್ತಿ" ಅಂತ ಹೇಳ್ತಾನೋ?
ಧರ್ಮ ಗ್ರಂಥಗಳು
ಏನನ್ನುತ್ತಾವೊ
ಈ ವಿಷಯದ ಬಗ್ಗೆ.
— % &-