Rashmi P Gowda   (ರಶ್ಮಿ. ಪಿ)
50 Followers · 10 Following

Blissful 😊
Art • Writing • Creative • Music
Joined 8 March 2019


Blissful 😊
Art • Writing • Creative • Music
Joined 8 March 2019
18 MAR 2023 AT 20:58

ಮನಃಶಾಂತಿ ಹುಡುಕುತ
ಮಸಣವ ಸೇರಿತು
ಮರುಗಿದ ಜೀವ

-


12 AUG 2021 AT 8:36

ಕಾಡಬೇಡ ಹೀಗೆ
ಕನಸಿನ ರಾಯಭಾರಿ
ಕಾದಿರುವೆ ನಿನಗಾಗಿ
ಕೊಡುವೆಯ ನನ್ನ
ಹೃದಯಕೆ ಹಾಜರಿ

-


5 AUG 2021 AT 11:30

ಅರೆಕ್ಷಣ ಮಾತಿಲ್ಲದೆ ಬರಿ ಮೌನವೇ
ಸುಳಿದಾಡಿದೆ ನನ್ನಲಿ, ನಿನ್ನ ಕಂಡೊಡನೆ
ಮನಸೇಕೊ ಗರಿಗೆದರಿದೆ
ತಾಳಲಾಗದೆ ಪ್ರೀತಿಯ ಕಚಗುಳಿ,

ಕಳುವಾಗಿದೆ ನನ್ನ ಹೃದಯದ ಕೀಲಿ
ದಯಮಾಡಿ ಹಿಂದಿರುಗಿಸು ಒಲವೇ
ಸರಿಯಾಗಿ ಬಂಧಿಸುವೆನು ನಿನ್ನನು
ನನ್ನ ಹೃದಯದ ಜೋಪಡಿಯಲಿ

ಮರೆಯಾಗದಿರು ನನ್ನಿಂದ ಮರುಮಾತಾಡದೆ ,
ಸದಾ ನನ್ನ ಕಿವಿಯಲಿ ಮನಸು
ಪಿಸುಗುಡುತ್ತಿರುವುದೊಂದೆ, ಸಾಗಲಿ
ನಿಮ್ಮ ಪ್ರೀತಿಯ ಸವಾರಿ ಇಂದೇ..

-


21 APR 2021 AT 0:31

ಕಾಣದ ಜೀವಿಯ ಕತಕ್ಕಳಿಯ ನರ್ತನ
ಮಾನವನ ಕರ್ಮ ಫಲದ ಸವಿ ಭೋಜನ
ಜೀವದ ಹಂಗಿಗೆ ನಡೆದಿದೆ ಜೀವನದ ಪ್ರಯಾಣ
ಎಲ್ಲಿ ನೋಡಿದರೂ ಸ್ಮಶಾನ ಮೌನ
ಬಡವ ಬಲ್ಲಿದನೆಂಬ ತಾರತಮ್ಯವನಳಿಸಿ
ಹರಡಿದ ಈ ಕೊರೋನ, ಮತ್ತೆಲ್ಲರ ಬದುಕನ್ನು
ಕರೆದೊಯ್ಯುವುದಿನ್ನೆಲ್ಲಿಗೋ ಕಾಣೆ ನಾ...... !

-


21 JUN 2020 AT 0:39

“ಅಪ್ಪ” ಎಂಬ ಎರಡಕ್ಷರದಿ ಅಡಗಿದೆ “ಶ್ರಮ”
ಬದುಕಿನ ಸಂಕೇತವಾಗಿ
ಮಕ್ಕಳ ಏಳಿಗೆಗೆ ಹೆಗಲಾಗಿ
ಜವಾಬ್ದಾರಿಯ ಪೇಟವ ತನ್ನ
ಮುಡಿಗೇರಿಸಿಕೊಂಡು ಸಂಸಾರ
ಎಂಬ ನೌಕೆಯ ನಾವಿಕನಾಗಿ
ಸರಿ ದಾರಿಯಲಿ ಸಾಗುವವನು
“ಅಪ್ಪ”

Happy Father’s Day

-


20 JUN 2020 AT 19:23

ಕಣ್ಣ ಸನ್ನೆಯಲಿ ಅವಿತಿರು ಮೌನ
ಮನಸಿನಂತರಾಳದಿ ಮಾತಾಗಿ
ಹೊಮ್ಮಿದೆ, ತುಟಿಯಂಚಿನಲಿ
ಬೀರುತ ಕಿರುನಗೆ ತೇಲಾಡಿದೆ
ಪ್ರೀತಿಯ ಗುಂಗಲಿ...

-


20 JUN 2020 AT 18:32

ದ್ವೇಷ, ಅಸೂಯೆಯ ಹಂಗನ್ನು ತೊರೆದು
ನೋವನು ಮರೆಯುತ, ಎಲ್ಲೆಡೆ
ಪ್ರೀತಿ, ವಿಶ್ವಾಸವ ಪಸರಿಸಿ
ನಗುತ, ನಗಿಸುತ ಬಾಳೋಣ ಇರವಷ್ಟು ದಿವಸ..

-


20 JUN 2020 AT 14:48

ಸಿರಿವಂತನೆನಿಸಿಕೊಳ್ಳುವುದು
ಎಣಿಸಲಾರದಷ್ಟು
ಹಣದಿಂದ ಅಲ್ಲ,
ಬೆಲೆ ಕಟ್ಟಲಾಗದ
ಗುಣದಿಂದ...

-


20 JUN 2020 AT 14:33

ಸಾವಿರ ಸೋಲಿನ ಸವಾಲಿಗೆ ಅಂಜದೆ
ಸೋತ ದಿನದಂದು ಇದೇ ನನ್ನ ಕೊನೆಯ
ಸೋಲೆಂದು ಭಾವಿಸಿ ಗೆಲುವಿನ
ಆಶಯದೊಂದಿಗೆ ಮುನ್ನಡೆದರೆ
ವಿಜಯದ ಪತಾಕೆಯು ಹಾರುವುದು
ಬಾನೆತ್ತರದಿ...

-


17 JUN 2020 AT 10:07

ಜೀವನದಲ್ಲಿ ಸೋಲು ಸಹಜ
ಸೋತರೇನಾಯಿತು,
ಸೋಲೇ ಗೆಲುವಿಗೆ ಬುನಾದಿ

-


Fetching Rashmi P Gowda Quotes