ಕೊಟ್ಟ ಕುದುರೆಯ ಏರಿದ ಧೀರ ,
ದಿಟ ಕಾಣದು ಕಣ್ಣಿದ್ದು ಕುರುಡರ
ಮಾಟಕ್ಕೆ ಬೆರಗಾಗುವರು ಲೋಕಿಗರು
ರಾಮಲಿಂಗ-
ಕನ್ನಡದ ಎಳ್ಗೆಗಾಗಿ ಹಿಂದೆ ಕಾರ್ಯಕ್ರಮ ಆಗುತಿದ್ದವು
ಕನ್ನಡ ಸಂಸ್ಕೃತಿಯ ಹಣಕ್ಕಾಗಿಂದು ಸಮಾರಂಭವು
ಕನ್ನಡಕ್ಕೆ ಬಸುರಾಗಿ ಮಕ್ಕಳಿಗೆ ಆಂಗ್ಲ ಮಾಧ್ಯಮವು
ರಾಮಲಿಂಗ-
ಸಂಪತಿಗೊಸ್ಕರ ಸಂಬಂದ ಕಳ್ಕೊಬ್ಯಾಡ್ರಿ
ಸಂಪತ್ತು ಎಷ್ಟಾದರು ಸಂಪಾದಿಸಬಹುದ್ರಿ
ಸಂಪತ್ತು ಕಳೆಯಾದ್ರೆ ಸಂಬಂದ ಬೆಳೆಯಾದ್ರಿ
ರಾಮಲಿಂಗ-
ದುಡ್ಡುಳ್ಳವರ ಕಟೌಟುಗಳ ಹಾವಳಿ
ಮಡಿದರು ಹುಟ್ಟಿದರೂ ಬಿರುಗಾಳಿ
ಗುಡ್ಡದಷ್ಟು ಹುಣಸೆ ಹಾಕ್ತಾರ ಹೊಳೆಯಲ್ಲಿ
ರಾಮಲಿಂಗ-
ಹರ ನೀನಿರಲು ಜೋತೆಯಲ್ಲಿ
ವರ ಯಾಕೆ ಬೇಕು ಬದುಕಲ್ಲಿ ?
ತರಹ ತಹರಕ್ಕೆ ಶಿವ ಬೆಳದಿಂಗಳು
ರಾಮಲಿಂಗ,-
ವರ್ಷಕೊಮ್ಮೆ ಮಹಾ ಶಿವರಾತ್ರಿಯು
ಹರ್ಷದಿ ಅನುಭವಿಸಬೇಕು ಹಬ್ಬವು
ಸ್ಪರ್ಷ ತನ್ನೊಳಗಾಗಬೇಕು ಕ್ಷಣ ಕ್ಷಣವು
ರಾಮಲಿಂಗ-
ಹುಟ್ಟು ಹಬ್ಬ ಆಚಾರಿಸುತ್ತಾರೆಲ್ಲ
ಹುಟ್ಟಿನ ಗುಟ್ಟು ತಿಳಿಯದವರೆಲ್ಲ
ಹುಟ್ಟು ಹಿಟ್ಟಾಗಿಸದೆ ಹೊಟ್ಟಾಗಿಸಿದರಲ್ಲ
ರಾಮಲಿಂಗ-
ಭಾರತಕ್ಕೆ
ಭಾರತೀಯತೆ
ನುಂಗಿದ್ದು
ಶೈವ - ವೈಷ್ಣವರ
ಸದಾಚಾರವೆಂದು
ಆಚಾರಿಸುವ
ಆಹಂಕಾರವ-
ಮನಸು ಮುರಿದ್ಹೊದ ಗೆಳತಿ
ಕನಸಲ್ಲು ಹಂಚಿದಳು ಪ್ರೀತಿ
ತನ್ನಿಂದ ತಾ ದೂರಾಗದ ರೀತಿ
ರಾಮಲಿಂಗ-
ಬೇಡಿ ಬೇಡಿ ಪ್ರಶಸ್ತಿ ಗಿಟ್ಟಿಸಿಕೊಂಬರು
ಕಾಡಿ ಕಾಡಿ ಕೀರ್ತಿ ಹರುವಿಕೊಂಬರು
ದುಡಿವವರ ರೊಟ್ಟಿ ಕಸಿದುಕೊಂಬರು
ರಾಮಲಿಂಗ-