ತಳ್ಳಿದ್ದೇನೆ ನನ್ನೆಲ್ಲ ಆಸೆಗಳ;
ನಿರಾಸೆಯ ಸಿಡಿಲು ಸಿಡಿಯುವ ಮೊದಲು.....-
ಧರ್ಮಸಂಕಟಗಳಲಿ,ಜೀವಸಮರದಲಿ||
ನಿರ್ವಾಣದೀಕ್ಷೆಯಲಿ,ನಿರ್ಯಾಣಘಟ್ಟದಲಿ|
ನಿರ... read more
ಸಿಲುಕಿಹುದು ನನ್ನೀ ಮನ;
ಮೋಹದ ಜಾಲಕೆ......!
ನಿಲುಕದು ನನ್ನೀ ಯಾನ;
ನಿನ್ನದೇ ನೆನಪಿನ ಕನವರಿಕೆ......!-
ಸೋತೆನಾ ಈ ವಿಧಿಗೆ...
ಭಾರಹೊತ್ತ ತಲೆಗೆ ಕಲ್ಲ ಎಸೆಯುವ;
ಈ ಹುಚ್ಚು ವಿಧಿಗೆ ಸೋತೆ ನಾನು...
ನಾಟಕದ ನೃತ್ಯ ಎಸಗುವ ಹೆಜ್ಜೆಗೆ ತಾಳತಟ್ಟುವ;
ಈ ಹುಚ್ಚು ವಿಧಿಗೆ ಸೋತೆ ನಾನು...
ಬದುಕುವ ಬಯಕೆಗೂ ಬಾಯಾರಿಸುವ;
ಈ ಹುಚ್ಚು ವಿಧಿಗೆ ಸೋತೆ ನಾನು...
ಬೆವರನ್ನೂ ಬೆಲೆಯಿಲ್ಲದೆ
ಬಾಯ್ದುಂಬುಲದಂತೆ ಕಾಣುವ;
ಈ ಹುಚ್ಚು ವಿಧಿಗೆ ಸೋತೆ ನಾನು...
ಸತ್ಯವೇ ಸೇರದೇ ಸುಳ್ಳನ್ನೇ ಸವಿಯುವ;
ಈ ಹುಚ್ಚು ವಿಧಿಗೆ ಸೋತೆ ನಾನು...
-
ಹುಚ್ಚು ಬಿದ್ದು ಹಂಬಲಿಸುತ್ತಿರುವೆ ಏಕೆ??
ನಿನ್ನವರಲ್ಲದವರಿಗೆ??
ಹಚ್ಚಿದೆಯೇಕೆ ಭಾವಕೆ ಬೆಂಕಿಯ??
ನಿನ್ನವರಲ್ಲದವರಿಗೆ??
ಹೊತ್ತಿಸಿ ದೀಪವ ಕಾದಿಹೆ ಏಕೆ??
ನಿನ್ನವರಲ್ಲದವರಿಗೆ??
ಚಿತ್ತಿಸಿ ಚಿಂತಿಸಿ ಚಪ್ಪರ ಕಟ್ಟಿಹೆ ಏಕೆ??
ನಿನ್ನವರಲ್ಲದವರಿಗೆ??
ಚಂದದಿ ಬದುಕಿಗೆ ಚಟ್ಟವ ಕಟ್ಟಿಹೆ ಏಕೆ??
ನಿನ್ನವರಲ್ಲದವರಿಗೆ??— % &-
ತುಸು ಜಾರಿದ ಅಕ್ಷುಶವು
ಹೊಸದೆನಿಸಿದೆ ಸಿಹಿ ಮನಕೆ...!
ಅಸಹನೀಯ ನೋಟದಲ್ಲೂ;
ಹುಸಿಯಿಲ್ಲದ ಹಸಿ ನಗೆಯ ಹೊಸೆದಿಹಳು ಆಕೆ...!?
-
ಬೆಳಗುವ ಭಾವನೆಗಳೂ
ಬೆರಗಾದ ಹಾಗಿದೆ;
ಅದೇ ಸ್ವಾರ್ಥಸಾಮ್ರಾಜ್ಯದ
ಗದ್ದಲದಲ್ಲಿ !-
ನಡೆದಷ್ಟು ಹಾದಿ...
ಬಗೆದಷ್ಟು ಜ್ಞಾನ...
ಪಡೆದಷ್ಟು ಭಾಗ್ಯ...
ನೆನೆದಷ್ಟು ನೋವು...
ನುಡಿದಷ್ಟೂ ಕಷ್ಟ...
ಮೆರೆದಷ್ಟೂ ಮೌನ...
ಕಂಡಷ್ಟೇ ಸತ್ಯ...
ಉಂಡಷ್ಟೇ ನಿತ್ಯ...-