ನಿನ್ನ ನಾಚಿಕೆ ನಿನ್ನ ಅಂದವನ್ನು ಹೆಚ್ಚಿಸಿ
ನನ್ನನ್ನು ಪ್ರೀತಿಯಲ್ಲಿ ಹುಚ್ಚಾಗಿಸಿ
ನನ್ನಿಂದ ನನ್ನನ್ನೇ ಕಳೆದುಕೊಂಡಿರುವೆ..
ನಿನ್ನ ಅಂದದ ಮೊಗವನ್ನು ಕ್ಯೆಯಲ್ಲಿ ಹಿಡಿದು ಆ ಸುಂದರ ಕಣ್ಣುಗಳಿಗೆ ಸಿಹಿ ಮುತ್ತನ್ನು ಕೊಡುವಾಸೆ..
ಆ ಸುಂದರ ಕಣ್ಣುಗಳಲ್ಲಿ ಕಳೆದು ಹೋಗುವಾಸೆ..
-
ನಮ್ಮ ಸಿಂಬಾ ತುಂಬಾ ಜಾಣ
ಅವನೇ ನಮ್ಮ ಪ್ರಾಣ
ಆದರೆ ಸ್ವಲ್ಪವೇ ಕೋಣ..
ಅವನು ನಾಯಿ ಅಲ್ಲ
ಅವನೇ ನಮಗೆ ಎಲ್ಲ
ಅವನ ಆಟವೇ ನಮಗೆ ಬೇವು ಬೆಲ್ಲ..
-
ನಿನ್ನ ಮನಕೆ ನನ್ನ ಮನವ ಸೇರುವ ಕಾತರ..
ನಿನ್ನ ಕೊರಳಿಗೆ ನನ್ನಿಂದ ಮಾಂಗಲ್ಯ ತೊಡುವ ಆತುರ..
ನಿನ್ನ ಕಾಲು ಬೆರಳಿಗೆ ನನ್ನಿಂದ ಕಾಲುಂಗುರದ ಆತುರ
ನಿನ್ನ ತೋಳುಗಳಿಗೆ ನನ್ನ ಅಪ್ಪುವ ಆತುರ
ನನಗೂ ನಿನ್ನ ಕನಸುಗಳ ಈಡೇರಿಸುವ ಆತುರ..-
ನಮ್ಮ ಮನೆಯಂಗಳದಲ್ಲಿ..
ಸುಂದರ ಬೆಳದಿಂಗಳ ಬೆಳಕಿನಲ್ಲಿ..
ನಿನ್ನ ತೊಡೆಯ ಮೇಲೆ ಮಲಗಿ..
ನಿನ್ನ ಸುಂದರ ಮುಖಾರವಿಂದವ ನೋಡುತ್ತ..
ನಂತರದ ಪ್ರೇಮ ಸಲ್ಲಾಪವು
ಸರಸಕ್ಕೆ ತಿರುಗಿ..
ಪ್ರೀತಿಯ ಉತ್ಕಟಕ್ಕೆ ಏರಿ..
ನಿನ್ನನ್ನು ಇನ್ನಷ್ಟು ಮತ್ತಷ್ಟು ಮಗದಷ್ಟು
ಕೊನೆ ಇರಲಾದಷ್ಟು ಪ್ರೀತಿಸುವುದು ನನ್ನ ಕನಸು..-
ಮುಂಜಾನೆ ಎದ್ದಾಗ
ಹೃದಯದಲ್ಲಿ ಸಾವಿರ ನೋವಿದ್ದರೂ
ಸೂರ್ಯನ ಕಿತ್ತಳೆ ಕಿರಣ
ಹಕ್ಕಿಗಳ ಚಿಲಿಪಿಲಿ
ಶುಭ್ರ ಆಕಾಶ
ಒಂದು ಆಹ್ಲಾದಕರ ಸ್ನಾನ
ಒಳ್ಳೆಯ ಉಡುಪು
ಮನವನ್ನು ಉಲ್ಲಾಸಕರವಾಗಿ ಮಾಡಿ
ಇಂದಿನ ಯುದ್ಧಕ್ಕೆ ಸಜ್ಜು ಮಾಡಿವೆ..
-
ನಿನಗೊಂದು ಉಡುಗೊರೆ ಕೊಡಬೇಕು ಎನಿಸಿದೆ
ನಿನಗೇನು ಬೇಕೆಂದು ಹೇಳು ಎಂದಾಗ
ನೀನು ನನ್ನ ಖುಷಿ ಬೇಕು ಎಂದೆ...
ನಾನು ಖುಷಿಯಿಂದ ನಿನ್ನ ಅಪ್ಪಿ
ಸಿಹಿ ಮುತ್ತಿನ ಮಳೆಗರೆದಾಗ
ನಿನ್ನ ಮೊಗದಲ್ಲಿ ನಾಚಿಕೆ ಕಂಡೆ..
ನಿನ್ನ ಮಂದಹಾಸ ಕಂಡು
ನಿನ್ನ ತೊಡೆಯ ಮೇಲೆ ಕಂದನಂತೆ ಮಲಗಿ
ಜೀವನದ ಸಾರ್ಥಕತೆ ಕಂಡೆ..-
ಬಂಗಾರದ ಮ್ಯೆಯವಳೆ
ಬಂಗಾರದ ಮೊಗದವಳೆ
ನನ್ನ ಮನ ಕದ್ದವಳೆ
ಇವಳೇ ಇವಳೇ
ನನ್ನ ಚೆಲುವೆ..
ಮೆಲ್ಲಗೆ ಹೆಜ್ಜೆಯಿಟ್ಟು ಬದುಕಿನಲಿ ಬಂದವಳೇ
ಕಾಲ್ಗೆಜ್ಜೆ ಶಬ್ದದಿಂದ ರೋಮಾಂಚನಗೊಳಿಸಿದವಳೆ
ಮುಗುಳ್ನಗೆಯಿಂದ ನನ್ನ ಸೆಳೆದವಳೆ
ಇವಳೇ ಇವಳೇ
ನನ್ನ ಉತ್ಸಾಹದ ಚಿಲುಮೆ..-
ಅವಳು ಬೆಳದಿಂಗಳ ಬಾಲೆ
ನನ್ನ ಪಾಲಿನ ಬೆಳದಿಂಗಳು..
ಅವಳ ನಗೆ, ನುಡಿ
ಸಂಸ್ಕೃತಿಯ ಸಂಕೇತ..
ನನ್ನ ಕನಸಿನ ಚೆಲುವೆ,
ಅವಳದು ಅಪ್ಸರೆಯರೂ ನಾಚುವಂತಹ ಚೆಲುವು.
ಅವಳ ಪ್ರೀತಿಯೇ ನನ್ನ ಗೆಲುವು..
-
ನನ್ನೆದೆಯಲ್ಲಿ ಉರಿಯುತ್ತಿದೆ ಬೆಂಕಿ
ನನ್ನ ಹೃದಯದಿಂದ ಹರಿಯುತ್ತಿದೆ ನೋವಿನ ರಕ್ತ
ಮನಸ್ಸು ಘಾಸಿಗೊಂಡಿರುವುದ ಕಂಡು
ಒದ್ದಾಡುತ್ತಿದೆ ದೇಹ ವಿಲವಿಲ
ಇಷ್ಟಾದರೂ ಹೋಗದೀ ಜೀವ....-
ನನ್ನನ್ನು ಕಾಡಿ ಏನು ಸಾಧಿಸುವೆ?
ನಾನೂ ನಿನ್ನನ್ನು ಕಾಡಿದರೆ ಏನು ಮಾಡುವೆ?
ನಿನ್ನ ಕಾಡದಿರುವುದು ನನ್ನ ಒಳ್ಳೆಯತನ ಅರ್ಥ ಮಾಡಿಕೊ..
ನೀನೂ ಬದುಕು.. ನನ್ನನ್ನೂ ಬದುಕಲು ಬಿಡು..
ನಿನ್ನ ಹುಚ್ಚು ಆಲೋಚನೆಗಳಿಗೆ ಕೊನೆಯಿಲ್ಲ..
ನಿನ್ನ ನಾಲಿಗೆಗೆ ಕಡಿವಾಣವಿಲ್ಲ..
ನನಗೂ ಇವೆಲ್ಲ ಮಾಡಲು ಬರುತ್ತೆ
ಮಾಡಿದರೆ ನನಗೂ ನಿನಗೂ ವ್ಯತ್ಯಾಸವೇನು ಇರುತ್ತೆ?-