ಹೆಣ್ಣಾದರೇನು?
ಗಂಡಾದರೇನು?
ಮನ ನೊಂದಾಗ
ಕಣ್ಣಿಂದ ಜಾರುವ ಕಂಬನಿಗೆ
ಲಿಂಗ ಬೇಧವಿದೆಯೇನು?
ಮನಚೂರಾದ ನೋವಿಗೆ
ಸ್ತ್ರೀ ಪುರುಷ ತಾರತಮ್ಯವಿದೆಯೇನು?-
ಬುದ್ಧನ ಬುರುಡೆಯಿಂದ
ವೃಕ್ಷ ಬೆಳೆಯಿತೇ
ಇಲ್ಲ ಬೋಧಿ ವೃಕ್ಷದಿಂದ
ಬುದ್ಧನ ಬುದ್ಧಿ ಬೆಳಗಿತೇ
🤔🤔🤔-
ನೂರಾರು ಸಾವಿರಾರು ಹೆಗಲುಗಳನ್ನು ಬದಲಿಸುತ್ತಾ ಶವಯಾತ್ರೆ ಸಾಗಬಹುದಾದರೂ ಕೊನೆಗೆ ಮಸಣದಲಿ
ಆ ಶವಕ್ಕೆ ಅಗ್ನಿಸ್ಪರ್ಶ ಮಾಡಿ ಮುಕ್ತಿಗಾಣಿಸುವ ಕರ್ತವ್ಯ ಮಾತ್ರ ಕೇವಲ ಯಾರೋ ಒಬ್ಬರ ಹಕ್ಕಾಗಿರುತ್ತದೆ ಕೃಷ್ಣ
ಆ ಹಕ್ಕನ್ನು ಯಾರೂ ಕಸಿದುಕೊಳ್ಳಲಾಗುವುದಿಲ್ಲ ಅವರಾಗೇ ಆ ಹಕ್ಕನ್ನು ಬಿಟ್ಟುಕೊಡದ ಹೊರತು-
ನನ್ನೆಲ್ಲ ನೋವುಗಳ ಮೂಲ ಕೃಷ್ಣ
ಆ ನೋವುಗಳ ಅಂತ್ಯವೂ ಕೃಷ್ಣ
ಎಲ್ಲ ಅನುಮಾನ ಅವಮಾನಗಳಿಗೆ
ಉತ್ತರವೂ ಶ್ರೀಕೃಷ್ಣನೇ
ನನ್ನೆಲ್ಲ ಜವಾಬ್ದಾರಿಗಳ ನಿಭಾಯಿಸುವ
ಶಕ್ತಿಯೂ ಶ್ರೀಕೃಷ್ಣನೇ
ಸಕಲವೂ ಕೃಷ್ಣ ಸರ್ವವೂ ಕೃಷ್ಣ
ದಿಕ್ಕುತೋಚದೆ ಬಿಕ್ಕಿಅಳುವಾಗ
ಬಂದು ಸಂತೈಸಿ ದಾರಿತೋರಿದವ ಕೃಷ್ಣ
ಮರಳಿಬಾರದಂತೆ ಕರೆದೊಯ್ಯುವವ ಕೃಷ್ಣ
ಸರ್ವಂ ಶ್ರೀಕೃಷ್ಣ ಪರಬ್ರಹ್ಮಪಾದಾರ್ಪಣಮಸ್ತು🙏🙏-
ಮನಸಿಗೆ ಮದವೇರಿದಾಗ ಮಸಣದಲಿ ಸಂಚರಿಸಬೇಕೆಂದು ಹೇಳುವರು ಕೃಷ್ಣ
ಜೀವಂತ ಶವಕೆ ಲೋಕವೆ ಮಸಣವಾಗಿರುವಾಗ
ಶವಗಳ ಸಮಾಧಿಗಳ ಆ ಮಸಣದ ಚಿಂತೆಯೇಕೆ
ಮನಸಿಗೆ ಮದವೇರಿ ಪ್ರವರ್ತಿಸುತಿದೆಯೋ
ನೊಂದ ಮನದ ಪ್ರತಿಕ್ರಿಯಿಸುವ ರೀತಿಯದೋ
ಅರಿಯದ ಜನರ ಮಾತಿಗೆ ನಾನೇಕೆ ಕಿವಿಗೊಡಲಿ
ಕೃಷ್ಣ ಎಲ್ಲವನರಿತ ನೀನು ಮೌನವಾಗಿರುವಾಗ
ನಿನ್ನಾಟದ ಗೊಂಬೆಯು ನಾನೇಕೆ ಮಾತಾಡಲಿ
ಅಪಾರ್ಥಗಳೆಂಬ ಅಡ್ಡಗೋಡೆಗಳ ಕೆಡವಿ
ನಿನ್ನಾಟದ ಖುಷಿಗೆ ನಾನೇಕೆ ಅಡ್ಡಿಯಾಗಲಿ ಕೃಷ್ಣ-
Some times krishna becomes very possessive about us, he wants that we should be with him only not with others
because of that only he plays some dramas in our lives
So cute little kannayya😍😍😊😊
Hare krishna🙏🙏-
ನಾನೊಬ್ಬ ಆಧ್ಯಾತ್ಮಿಕ ಸಾಧಕಿಯಾಗಬಯಸುತ್ತಿಲ್ಲ
ಹಾಗಾಗಿ ಸಾಧಕರ ಸಹವಾಸ ಎನಗಗತ್ಯವಿಲ್ಲ
ನನ್ನ ಹೆತ್ತವಳಿಗೆ ನೆಮ್ಮದಿಯನುಳಿಸಿದರೆ ಸಾಕು
ನನ್ನನ್ನೇ ಜೀವವಾಗಿಸಿಕೊಂಡು ಉಸಿರಾಡುತಿರುವವರ
ಮಾನ ಮರ್ಯಾದೆ ಉಳಿಸಿದರೆ ಸಾಕು
ಯಾರದೋ ನೆಮ್ಮದಿಯ ಉಳಿಸಲು ಪ್ರಯತ್ನಪಟ್ಟು
ನನ್ನ ನಂಬಿಕೊಂಡಿರುವವರ ಆತಂಕದ ಕೂಪಕೆ ನಾ ತಳ್ಳಲಾರೆ-