ಅಂದವಾದ ಮುಖವನ್ನು ನೋಡಲು ಎಷ್ಟೋ ಜನ ಸರದಿಯಲ್ಲಿ ನಿಲ್ಲಬಹುದು. ಆದರೆ , ಅಂದವಾದ ಮನಸ್ಸನ್ನು ಅರಿಯಲು ಮತ್ತೊಂದು ಅಂದವಾದ ಮನಸ್ಸಿನಿಂದ ಮಾತ್ರ ಸಾಧ್ಯ
-
RAJESHWARI
27 Followers 0 Following
ನಾನ್ ಬೇರೆಯವರ ಅಭಿಪ್ರಾಯಕ್ಕೆ ಬದುಕಲ್ಲ , ಅವರ ಅಭಿಪ್ರಾಯಗಳು ಯಾವತ್ತೂ ನನ್ನ ಕಾಲು ಮಟ್ಟಕ್ಕೂ ಇರೋದಿಲ್ಲ.
Joined 6 May 2019
15 JUN 2023 AT 18:11
15 JUN 2023 AT 17:59
ಸಮಯ ಕೊಡುವವರು ಸರಿಯಾದ ಸಮಯಕ್ಕೆ ಸಿಕ್ಕರೆ , ಸಮಯ ಒಳ್ಳೆಯದಾಗಲು ಹೆಚ್ಚಿನ ಸಮಯ ಬೇಕಿಲ್ಲ.
-
30 MAY 2023 AT 20:07
ಹನುಮಂತನಿಗೆ ಸಮುದ್ರವನ್ನು ಜಿಗಿಯುವ ಸಾಮರ್ಥ್ಯ ಇದ್ದರೂ ನಂಬಿಕೆ ಬಂದದ್ದು ನನ್ನೊಂದಿಗೆ ರಾಮನಿದ್ದಾನೆ ಎಂಬ ಧೈರ್ಯದಿಂದ. ಹಾಗೆಯೇ ನಮ್ಮ ಕಷ್ಟಗಳನ್ನು ಧೈರ್ಯದಿಂದ ಎದುರಿಸೋಣ , ಏಕೆಂದರೆ ನಮ್ಮೊಂದಿಗೆ ಭಗವಂತನಿದ್ದಾನೆ.
-
24 MAY 2023 AT 18:50
ಹಣ್ಣು ಕೊಡೋ ಮರಕ್ಕೆ ಕಲ್ಲೇಟು ಉಚಿತ
ಒಳ್ಳೆಯದನ್ನು ಬಯಸೋ ವ್ಯಕ್ತಿಗೆ ಮಾತಿನೇಟು ಖಚಿತ-
24 MAY 2023 AT 18:47
ಬಣ್ಣದಂತೆ ನಿಮಿಷಕ್ಕೆ ಬದಲಾಗುವ ಕಾಲದಲ್ಲಿ ಎಂದೂ ಬದಲಾಗದೆ ಉಳಿಯ ಬೇಕಾಗಿರುವುದು ನಿನ್ನ ಗುಣ
-
24 MAY 2023 AT 18:45
ಬದುಕು ಚೆನ್ನಾಗಿ ಸಾಗಿಸಲು ಮನೆಯ ವಾಸ್ತುಗಿಂತ ವಾಸ್ತವವನ್ನೊಪ್ಪಿಕೊಳ್ಳುವ ಮನಸೊಳಗಿನ ವಾಸ್ತು ಬಲು ಮುಖ್ಯ.
-
11 MAY 2023 AT 20:14
ನೀರಿನಲ್ಲಿ ಬಿದ್ದ ಪ್ರತಿಯೊಬ್ಬರೂ ಮುಳುಗುವುದಿಲ್ಲ
ಈಜು ಬಾರದವರು ಮಾತ್ರ ಮುಳುಗಿ ಹೋಗುತ್ತಾರೆ
ಜೀವನ ಕೂಡ ಅಷ್ಟೇ... ಸಮಸ್ಯೆ ಇರುವ ಪ್ರತಿಯೊಬ್ಬರೂ ಸೋಲುವುದಿಲ್ಲ ಪರಿಹಾರ ಹುಡುಕಲಾಗದವನು ಮಾತ್ರ ಸೋತು ಹೋಗುತ್ತಾನೆ.-