ಮೊದಲೆಲ್ಲಾ ತಡರಾತ್ರಿ ಆದ್ರೆ
ಅಮ್ಮಾ... ತಾಯಿ ಕವ್ಳ ಹಾಕಮ್ಮಾ
ಅಂತ ಬರ್ತಿದ್ರು...
ಈಗೀಗ ನಾವೇ fridge ನಲ್ಲಿ ಇಡ್ತಾ ಇದೀವಿ
ಭಿಕ್ಷಕರು ಕಮ್ಮಿ ಆಯ್ತು ಅಂತ ಅಲ್ಲಾ.....
ಭಿಕ್ಷೆ ಹಾಕೋರು ಕಮ್ಮಿ ಆದ್ರು😥-
follow me on ....insta......dodmane-hennu
ಪ್ರೀತಿ ಪ್ರೇಮಗಳ ಬಗ್ಗೆ ಬರೆಯುವ ಬರವಣಿಗೆಯಲ್ಲಿ ಕಂಡ ನೋವು
ಬಹುಶಃ...
ಸಾವು ಎನ್ನುವುದು ಕೊಡುವ ನೋವಿಗಿಂತಲೂ ತುಸು ಹೆಚ್ಚೇ ಇರಬೇಕು!!!!
-
ಈ ಸಂಭಾಷಣೆ...
ಮಾತು...
ಮೌನ...
ನಗು....
ಹರಟೆ....
ಜಗಳ....
ಒಪ್ಪಿಗೆ....
ಸರಿ ತಪ್ಪುಗಳ ವಾದ, ವಿವಾದ
ತಪ್ಪದ ಒಪ್ಪಂದ
ಕಡೆಗೆ ಸುಖಾಂತ್ಯ-
ಬದುಕೆಂದರೆ ಹೀಗೆ..
ಮತ್ತಷ್ಟು, ಮೊಗೆದಷ್ಟು, ಬಗೆದಷ್ಟು, ಕಿತ್ತು ಒಗೆಯುವಷ್ಟು
ಬೆತ್ತಲೆ ಭಾವನೆಗಳು, ಅಸಂಬದ್ಧ ತೊಳಲಾಟಗಳು, ಅಪರಿಮಿತ ಅಹಂ
ನಾನು!!!.... ನೀನು!!! ಎಂದು ಬಿತ್ತುವ ಬೆಳೆಯೇ ಬರದ ಬೆಲೆಯೂ ಇಲ್ಲದ ವ್ಯರ್ಥ ತಾಕತ್ತು..
ಏಕ ರೂಪದ ಅಲಿಖಿತ ನಿಯಮಗಳು, ಮನಸ್ಸಿಗೂ ಹಿತ ಕೊಡದ, ದೇಹಕ್ಕೂ ಸುಖ ಕೊಡದ,
ಅಂಡಾಣು ವೀರ್ಯಾಣುಗಳ ಮಿಲನಗಳು, ಅನಪೇಕ್ಷಿತ ಫಲ, ತಿನ್ನಲು ಆಗದ ಬಿಸುಡಲು ಆಗದ ಗೊಂದಲಗಳು...
ಕಟ್ಟ ಕಡೆಗೆ, ಹಾಗೂ ಹೀಗೂ ಹೇಗೋ ನಡೆಯುವ ಸಾರವೇ ಇಲ್ಲದ ಸಂಸಾರದಲ್ಲಿ, ತೇಲಿ, ಮುಳುಗಿ
ನಡೆವ ಸಂಸಾರ ನೌಕೆಗೆ, ಲಗಾಮು ಇಲ್ಲ, ಲಂಗರು ಇಲ್ಲ...
-
ಅವರಾಗಿ ಅವರು ಕೇಳಿದರೆ ಮಾತ್ರ....
ನಾವಾಗಿ ನಾವು ಸಹಾಯ ಮಾಡ್ತೀವಿ ಅಂತಿಟ್ಕೋ
ಹಸ್ಕೊಂಡ್ ಸುಸ್ತಾಗಿದೆ ಅಂತ ಬಿದ್ದಿರೋ ನಾಯಿಗೆ
ಅನ್ನ ಹಾಕಿದ್ರೆ...
ಶಕ್ತಿ ಬಂದ್ ಕೂಡ್ಲೇ ನಮ್ಮನ್ನೇ ಮೊದಲು ಕಚ್ಚೋದು ನೆನಪಿರಲಿ.-
ಪ್ರೀತಿ ನನ್ದಲ್ಲ ಅನ್ನೋದು ಅರಿವಾದ ತಕ್ಷಣ...
ಪ್ರೀತಿ ಪ್ರೇಮದ ಬಗ್ಗೆ ಓದೋದು ಬಿಟ್ಟೆ,
ಪ್ರೀತಿ ಪ್ರೇಮದ ಬಗ್ಗೆ ಬರೆಯೋದು ಬಿಟ್ಟೆ,
ಪ್ರೀತಿ ಪ್ರೇಮದ ಬಗ್ಗೆ ಮಾತಾಡೋರ್ನ ನೋಡಿದ್ರೆ ಮೂರ್ಖರು ಅನ್ಸತ್ತೆ
ಯಾಕ್ ಗೊತ್ತಾ....
ಹಿಂದೊಮ್ಮೆ ಅದೇ ಮೂರ್ಖತನದಲ್ಲಿ first rank ತಗೊಂಡಿದ್ದೆ😀
ಈಗೀಗ ನನ್ನ ನಾನು ಪ್ರೀತಿಸೋದು ಕಲಿತಿದಿನಿ
ಪ್ರೀತಿ ಪ್ರೇಮ ಅನ್ನೋದು ಭ್ರಮೆ ಅಂತ ಹೇಳ್ತಿದೀನಿ
ಎಲ್ರಿಗೂ ಬೇಕಿದ್ದ card ಬೀಳಲ್ಲ
Card ಬಿದ್ದೋರಿಗೆ card ಬೇಕಿರಲ್ಲ..
Life ಇಷ್ಟೇ ಮಗಾ🤟
ಇನ್ನಾದ್ರೂ ತಿಳ್ಕೊಂಡ್ ಮುಂದ್ ಹೋಗ್ತಿರ್ಬೇಕ್ ಮಗಾ-
ನಾವು ಮಾತ್ರ ಒಳ್ಳೆಯವರು
ನಮ್ಮನ್ನ ಬಿಟ್ಟು....
ಬೆರೆಯವರೆಲ್ಲ ಸರಿಯಿಲ್ಲ ಅನ್ನೋ ತಪ್ಪು ಕಲ್ಪನೆ-
ಇತಿಹಾಸವೇ ಸಾಕ್ಷಿಯಾಗಿದೆ
ಎದುರಾಳಿಯನ್ನು ಕೇವಲವಾಗಿ ಕಂಡ ಮೊಲಕ್ಕೆ ಸೋಲಾಯಿತೇ
ಹೊರತು
ನಿಧಾನವಾಗಿ ಗೆಲ್ಲಲೇ ಬೇಕು ಎಂದು ನಡೆದ ಆಮೆಗಲ್ಲ...
-
ಎಲ್ಲಾ ಗೊತ್ತು ಅನ್ಕೊಂಡು
ಹೌದಪ್ಪ..ಹೌದು ಹೌದು
ಹೌದಮ್ಮಾ ಹೌದು ಹೌದು ಅನ್ನೋ ರಾಗ-