ಮಸ್ತಕವೇ ಮನೆ,
ಪುಸ್ತಕವ ತೆರೆ
ಮಸ್ತದಲಿ ಬರೆ,
ಪುಸ್ತಕ ತುಂಬಿ ತುಳುಕಲಿ
ಮಸ್ತಕ ಖಾಲಿ ಇರಲಿ,
ಪುಸ್ತಕದ ಜ್ಞಾನ ತಿಳಿ
ಮಸ್ತದಲಿ ತುಂಬಿ ಅರಿ...✍️
-
ಮನಸು ಪರಿ... read more
ಅಪ್ಪ ಎಂದರೆ ಭದ್ರತೆ
ಅಪ್ಪ ಎಂದರೆ ಶಕ್ತಿ
ಅಪ್ಪ ಎಂದರೆ ಭಕ್ತಿ
ಅಪ್ಪ ಎಂದರೆ ಆಕಾಶ
ಅಪ್ಪ ಎಂದರೆ ಅವಕಾಶ...✍️-
||ಭೂಮಿತಾಯಿಯ ಮಡಿಲು||
ಮುಂಜಾನೆ ಮಂಜಿನ ನಗರಿಯಲಿ,
ಭುವಿಯ ಸುಂದರ ಮೊಗದಲಿ||
ಮೂಡಿದ ನಗುವಿನ ಚೆಲುವಿಕೆಯ,
ಕಂಡು ನಾಚಿ ಕೆಂಪಾದನು ರವಿತೇಜನು||
ಅಂದವ ಚೆಂದವ ತೋರುತಿವೆ,
ಆಡುತ ತೂಗುತ ಬೀಗುತಿವೆ||
ಎಲ್ಲರ ಮುದ್ದಿಂದ ಸೆಳೆಯುತ್ತಿವೆ,
ರಂಗು ರಂಗಿನ ಹೂವುಗಳು ಹೂವುಗಳು||
ರೆಕ್ಕೆಯ ಬಡಿಯುತ ಹಾರುತಿವೆ,
ಹೂಗಳ ಅಂದವ ಸವಿಯುತಿವೆ||
ಮನಸೋ ಇಚ್ಚೇ ಕುಣಿಯುತಿವೆ,
ರಂಗು ರಂಗಿನ ಚಿಟ್ಟೆಗಳು ಚಿಟ್ಟೆಗಳು||
ಭೂತಾಯಿಯು ಹೊಂದಿರೆ ಹಸಿರನ್ನು,
ಜೀವವು ಪಡೆವುದು ಉಸಿರನ್ನು||
ಉಳಿಸೋಣ ಹಸಿರಿನ ಪಸಿರನ್ನು,
ಬದುಕುವ ನಿರೋಗದ ಬದುಕನ್ನು||-
ಹೃದಯದ ಪ್ರೀತಿಯ ತೋರಿಸಲು,
ಮನದ ಭಾವನೆ ಕರಗಿಸಲು||
ಬವಣೆಗಳ ಬರಿದು ಮಾಡಲು,
ಸಂತಸವ ಹಿರಿದು ಮಾಡಲು||
ಜೀವನದ ಪಲ್ಲವಿ ಹಾಡಲು,
ಸಂಗೀತದ ನಾದ ಪಸರಿಸಲು||
ಎಲ್ಲೆಡೆ ಸಂತಸ ಹರಡಿಸಲು,
ಮೊಗದಲಿ ಮಂದಹಾಸವ ಕಾಣಲು||-
//ಸಂಸ್ಕಾರದ ಸಂಗೀತ//
ಸಾಗರದ ಅಲೆಗಳಂತೆ ಮರುಕಳಿಸುತ್ತಿದ್ದ ಪಲ್ಲವಿಯು,
ಹರಿಯುವ ನದಿಯು ಬೇಸಗೆಯಲ್ಲಿ ಬತ್ತಿದಂತೆ ಮರೆಯಾಗುತ್ತಿದೆ,
ವರುಣನ ಆಗಮದಿಂದ ನದಿ ಮತ್ತೆ ಹೊಸ ಹುರುಪನ್ನು ಪಡೆಯಿತು,
ಒಯ್ಯಾರದಿ ಬಳುಕುತಾ ಸಾಗರವ ಸೇರಿತು,
ಆದರೆ ಸುಂದರವಾದ ಪಲ್ಲವಿಯು ಮಾತ್ರ ಪುನಃ ಶೃತಿ ಸೇರಲೇ ಇಲ್ಲ,
ಸಂಗೀತ ಆಗಲೇ ಇಲ್ಲ...✍️-
ಪ್ರತಿ ಕ್ಷಣ ಪ್ರತಿ ದಿನ
ಕಷ್ಟ ಮತ್ತು ನೋವುಗಳ
ಜೊತೆಗೆ ಬದುಕುವವರು
ಮೌನವಾಗಿ ಬದುಕಿನ ಮಜಲುಗಳನ್ನು ದಾಟುತ್ತಿರುತ್ತಾರೆ
ಯಾರಿಗೂ ಗೋಚರಿಸದೆ,
ಯಾರ ಅರಿವಿಗೂ ಬಾರದೆ,
ಯಾರಿಗೂ ಅರ್ಥವಾಗದೆ...✍️-