Raghava Ajri   (ರಾಘವ ಆಜ್ರಿ)
18 Followers · 16 Following

ಕಡಲೂರ ಕನ್ನಡಿಗರ.

ಇನ್ನೂ ಹೆಚ್ಚಿನ ಮಾಹಿತಿ ಮೊಗಹೊತ್ತಿಗೆಯಲ್ಲಿ ಸಿಗುವುದು..
Joined 21 August 2017


ಕಡಲೂರ ಕನ್ನಡಿಗರ.

ಇನ್ನೂ ಹೆಚ್ಚಿನ ಮಾಹಿತಿ ಮೊಗಹೊತ್ತಿಗೆಯಲ್ಲಿ ಸಿಗುವುದು..
Joined 21 August 2017
25 AUG AT 10:56

ಎಲ್ಲರನ್ನೂ ನನ್ನವರೆಂದರಿತು ಬೆರೆತು
ದೂರದ ಕ್ಷಣ ಮರುಗುವುದಕ್ಕಿಂತ..

ಸಿಕ್ಕಿದವರೆಲ್ಲರೂ ಪರಿಚಯದವರಷ್ಟೇ
ಎಂದುಕೊಳ್ಳುವುದೇ ಲೇಸು.

-


12 OCT 2021 AT 9:41

ಬೇಡಿದ್ದೆಲ್ಲಾ ನೀಡುವಳೆ, ಕೇಳಿದ್ದ ಕೊಡುವವಳೆ,
ನೀನಲ್ಲದಿನ್ನಾರು ನನ್ನ ಹೊಣೆ ಹೊರೆವ ಬಂಧು?
ದಯೆ ಕರುಣೆ ಅಕ್ಕರೆಯ ಜೇನ ಸವಿ ಮಮತೆಗಳ
ಹೊನಲುಗಳು ಕೂಡಿ ಸೇರಿದ ಸುಧೆಯ ಸಿಂಧು!

-


7 OCT 2021 AT 8:13

ಮುಂಜಾನೆದ್ದು ಟೀ ಸವಿಯುವ ಅಭ್ಯಾಸ ಇರುವವರೆಲ್ಲಾ
ಜೊತೆಗೊಂದಿಷ್ಟು ಪಾಸಿಟಿವಿ'ಟಿ'ಯನ್ನೂ ಬೆರೆಸಿ ಕುಡಿಯಿರಿ!
ದಿನವೆಲ್ಲಾ ಪಾಸಿಟಿವ್ ಸ್ವಾದವನ್ನು ಅನುಭವಿಸಿರಿ.😁

-


6 OCT 2021 AT 7:52

ಪರರ ಜೀವನ ಶೈಲಿ ಅನುಕರಿಸಲು ಹೋದರೆ
ಬದುಕು ಬಸವಳಿಯಬಹುದು!
ನಮ್ಮ ಅಳತೆಗೆ ತಕ್ಕಂತೆ ನಡೆದರೆ
ನಾವೂ ಸಂಭ್ರಮಿಸಬಹುದು.


-


5 SEP 2021 AT 18:17

ಹೊಗಳಿ
ಹೊರೆಯಾಗುವವರ
ಮಧ್ಯೆ
ಗದರಿ ಗರಿ ನೀಡುವವರೇ
ಗುರು!

-


4 SEP 2021 AT 22:13

ನವಿರಾದ ನೋವೆಂದರೆ
ಏನೆಂದು
ಶೃಂಗಾರದ ಪಲ್ಲಂಗದಿ
ನಲುಗಿದ
ಮಲ್ಲಿಗೆ, ಗುಲಾಬಿ ಎಸಳುಗಳು
ಹೇಳುತ್ತವೆ!
ಕೇಳಿ ನೋಡಿ..

-


3 SEP 2021 AT 23:23

ಇರಬೇಕಿತ್ತು ನಾ
ಅವರಂತೆ, ಇವರಂತೆ
ಎಂಬುದೇ ಚಿಂತೆ!
ಬಾಳುವುದೆಂತು ನಾ ನನ್ನಂತೆ
ನನ್ನತನದಂತೆ?

-


3 SEP 2021 AT 13:17

ಸೋತು ಬೀದಿಗೆ ಬಿದ್ದವ
ಮುಂದೆ
ಅದೇ ಬೀದಿಗೆ ಹೆಸರಾದ,
ಆತ್ಮವಿಶ್ವಾಸ ಗೆದ್ದರಷ್ಟೇ ಯಶಸ್ಸು!

-


23 AUG 2021 AT 0:10

ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ,
ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ
ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ
ಸುಳ್ಳಿಗೆ ಬೆದರುತ್ತದೆ
ದ್ವೇಷಕ್ಕೆ ಬಲಿಯಾಗುತ್ತದೆ
ಕೋಪಕ್ಕೆ ತುತ್ತಾಗುತ್ತದೆ
ಅಸೂಯೆಗೆ ಮಣಿಯುತ್ತದೆ
ಸ್ವಾರ್ಥಕ್ಕೆ ಸೆರೆಯಾಗುತ್ತದೆ.

ಹುಷಾರು! ಸತ್ಯವನ್ನು ಕಾಪಿಟ್ಟುಕೊಳ್ಳೋಣ.

-


18 JUN 2021 AT 17:30

ಆತ್ಮೀಯರು ಹೊಂಚು ಹಾಕಿದರೆ?
ಬಂಧುಗಳು ಸಂಚು ಮಾಡಿದರೆ?
ಮೋಸದ ಜಾಲಕ್ಕೆ ಸಿಕ್ಕಿಸುವರೆ?

ಒಂದು ದೀರ್ಘ ಉಸಿರು
ಒಂದೇ ಒಂದು ಕಿರುನಗು,
ಅಷ್ಟೇ!ಅವರೊಳಗಿನ ಸಂಚು, ಹೊಂಚು
ಒಮ್ಮೆಲೇ ಮಿಂಚಿ ಮಾಯವಾಗದಿದ್ದರೆ ಹೇಳಿ.

-


Fetching Raghava Ajri Quotes