Raghav Shetty   (Raghavendra shetty)
7 Followers · 19 Following

Joined 28 May 2020


Joined 28 May 2020
5 AUG 2021 AT 8:33

ಪುಟ್ಟ ಸಸಿಯೊಂದು ಬೆಳೆದ ಮರಕೆ ಹೀಗೆ ಕೇಳಿತು

ನೀ ಯಾರು ಹಾಗೂ ನೀ ಹೇಗೆ ಇಷ್ಟು ಬೆಳೆದೆ?

ಮರವು ಹೇಳಿತು :
ನಡೆದು ಹೋಗುವವರು ತುಳಿದರು
ಕೆಲ ಜನರು ಕಡಿದರು
ಬೇಕಾದದ್ದಕೆಲ್ಲ ಬಳಸಿದರು

ಕಡಿದಷ್ಟು ಮತ್ತೆ ಬೆಳೆದೆ ಮತ್ತೆ ಬೆಳೆದೆ ನಾನಾದೆ ಆಲದಮರವು...

ಕಿವಿ ಮಾತ:
ಬೆಳೆಸುವವರ ಜೊತೆ ಇರು
ಬಳಸಿಕೊಳ್ಳುವವರಿಂದ ದೂರವಿರು...


-


27 JUN 2021 AT 10:36

ನಿನ್ನ ಬದುಕು .....

ಇದು ನಿನ್ನ ಬದುಕು ಇದರಲ್ಲಿ ನೀನೇ ಬದುಕಾಬೇಕು..
ಯಾರದೋ ಮಾತಿಗೋ....
ಇನ್ನೊಬರ ಅಭಿಪ್ರಾಯಕ್ಕೋ...
ಬುದ್ದಿವಂತರ ಹರಿಕಥೆಗೋ....
ಯಾರೋ ನೋಡಿಯರು ಎಂಬ ಅಂಜಿಕೆಗೋ
ನೀ ಬದುಕಬೇಡ....

ಏಕೆಂದರೆ ಬದುಕು ಕೈಯಲ್ಲಿರುವ ಐಸ್ಕ್ಯಾಂಡಿ ಹಾಗೆ ನಿನಗಾಗಿ ಕಾಯುವುದಿಲ್ಲ, ನಿನ್ನಹಾಗೆ ಯೋಚಿಸುವುದು ಇಲ್ಲ...ಆಲೋಚಿಸುವ ಮುನ್ನ ಕರಗಿಹೋಗುತ್ತದೆ...

ನಿನ್ನೆಲ್ಲ ಕನಸುಗಳು ನಿನ್ನ ಕೂಸಿನ ಹಾಗೆ ಕಸುವಿಸಿಗೆ ಅದನ್ನು ಕೊಲ್ಲದೆ ಉಸಿರಾಡಲು ಬಿಡು..
ಇಳಿವಯಸ್ಸಿಗೆ ನೀ ಪಡೆದ್ದದಕ್ಕಿಂತ ನೀ ಕಳೆದದ್ದೇ ನಿನ್ನ ಕೊಲ್ಲುವುದು ...

-


17 APR 2021 AT 9:04

ನೀನು ಎಷ್ಟು ಸರಿ...

ನಿನ್ನ ತಪ್ಪು ಎತ್ತಿ ಹೇಳುವಾಗ ಸಾಕ್ಷಿ ಕೇಳಬೇಡ....
ನಿನ್ನ ಆತ್ಮಸಾಕ್ಷಿಯನ್ನು ಒಮ್ಮೆ ಕೇಳು.....

ಎಲ್ಲಾ ಮೋಜು ಮಸ್ತಿ ಮಾಡಿ ನಾನೆ ಸರಿಯೆಂದೆ
ಒಮ್ಮೆ ತಿರುಗಿ ನೋಡು ನೀ ಮುರಿದ ಅಣ್ಣೆಗಳ ರಾಶಿ ಬಿದ್ದಿದೆ .........

ನೀ ಕೊಟ್ಟ ಭರವಸೆಗಳು ಲೆಕ್ಕ ಇರದಿರಬಹುದು...
ನಿನ್ನ ತಾಯಿ ಅತ್ತ ಕಣ್ಣೀರಿಗೆ ನನ್ನ ಬಳಿ ಲೆಕ್ಕ ಇದೆ.......

ನನಗೆಲ್ಲಾ ಗೊತ್ತು ಎಂಬ ಹುಂಬನಿಗೆ
ಬದುಕು ಪಾಠ ಕಲಿಸುವುದು ಇನ್ನೂ ಬಾಕಿ ಇದೆ..

ಮತ್ತೊಮ್ಮೆ ಯೋಚಿಸು ನೀನು ಎಷ್ಟು ಸರಿಯೆಂದು...






-


4 FEB 2021 AT 7:38

..........ಮಾತು ಕೇಳದವನು.....

ಯಾರದೋ ಕಣ್ಣೀರು ವರಿಸುವ ಬರದಲ್ಲಿ
ಹೆತ್ತವರ ಕಣ್ಣೀರಿಗೆ ಕಾರಣನಾಗಾಬೇಡ.....

ಹೊಸದೊಂದು ಸಂಬಂಧ ಬೆಸೆಯುವ ಬರದಲ್ಲಿ
ಇದ್ದೆಲ್ಲ ಸಂಬಂಧ ಕಳೆದು ಅನಾಥನಾಗಾಬೇಡ....

ಮೋಹದ ಬಲೆಯಲ್ಲಿ ಬಿದ್ದವನಿಗೆ
ವಾತ್ಸಲ್ಯದ ಬೆಲೆ ಹೇಗೆ ತಿಳಿಗುವುದು

ಬುದ್ದಿ ಹೇಳಿದಾಗ ಕೇಳದವನನನ್ನು
ಬುದುಕೆ ಬಡಿದು ಪಾಠ ಕಲಿಸುವುದು.........

-


2 FEB 2021 AT 9:43

Life ಆದ್ರೂ business ಆದ್ರೂ ಒಂದೇ Thumbrule

ಕಡಿಮೆ ಇರೋನತ್ರ ಜಾಸ್ತಿ ಕೀಳಬೇಡ
ಜಾಸ್ತಿ ಕೊಡೋನಹತ್ರ ಕಡಿಮೆ ಕೇಳಬೇಡ

-


29 DEC 2020 AT 16:01

*ನಿನ್ನೊಳಗಿರುವ ನಿನ್ನತನವನ್ನು ಕೇಳು*
ನಿನ್ನವರಾರೆಂದು...........

ಜೊತೆಯಲ್ಲಿದ್ದು ಜೊತೆಗಿರುವವರನ್ನು ತೊರೆಸುವವರ
ಅಥವಾ
ದೂರದಲ್ಲಿದ್ದು ನಿನ್ನ ದೂರದೇ ಸ್ಮರಿಸುವವರ......

ನಗುನಗುತ್ತಾ ನಿನ್ನ ಹಿಂದೆ ಶಪಿಸುವವರ
ನಿನ್ನ ಮರೆತ ಹಾಗೆ ನಟಿಸಿ ನಿನ್ನ ಹಾರೈಸುವವರ

ಜೊತೆಯಲ್ಲಿರುವವರೆಲ್ಲ ನಮ್ಮವರಲ್ಲ
ದೂರವಾದವರೆಲ್ಲ ಶತ್ರುಗಳಲ್ಲ,,,,

ನಿನ್ನ ಗೆಲುವಿಗೆ ಹೊಟ್ಟೆ ಕಿಚ್ಚು ಪಟ್ಟವರೆಷ್ಟು
ನಿನ್ನ ಸೋಲಿಗೆ ಇಲ್ಲಿ ಸಂಭ್ರಮಿಸುವವರೆಷ್ಟೋ...
ನಿನ್ನ ಮಾತಿಗೆ ತಪ್ಪು ಅರ್ಥಗಳು ನೂರು
ಸುತ್ತಲಿರುವವರೆಲ್ಲರೂ ಆದರೆ ಯಾರು ಕಷ್ಠಕ್ಕೆ ಆಗದವರು...
So......

ನಿನ್ನೊಳಗಿರುವ ನಿನ್ನತನವನ್ನು ಕೇಳು*
ನಿನ್ನವರಾರೆಂದು...........

Raghav shetty







-


29 DEC 2020 AT 15:58

*ನಿನ್ನೊಳಗಿರುವ ನಿನ್ನತನವನ್ನು ಕೇಳು*
ನಿನ್ನವರಾರೆಂದು...........

ಜೊತೆಯಲ್ಲಿದ್ದು ಜೊತೆಗಿರುವವರನ್ನು ತೊರೆಸುವವರ
ಅಥವಾ
ದೂರದಲ್ಲಿದ್ದು ನಿನ್ನ ದೂರದೇ ಸ್ಮರಿಸುವವರ......

ನಗುನಗುತ್ತಾ ನಿನ್ನ ಹಿಂದೆ ಶಪಿಸುವವರ
ನಿನ್ನ ಮರೆತ ಹಾಗೆ ನಟಿಸಿ ನಿನ್ನ ಹಾರೈಸುವವರ

ಜೊತೆಯಲ್ಲಿರುವವರೆಲ್ಲ ನಮ್ಮವರಲ್ಲ
ದೂರವಾದವರೆಲ್ಲ ಶತ್ರುಗಳಲ್ಲ,,,,

ನಿನ್ನ ಗೆಲುವಿಗೆ ಹೊಟ್ಟೆ ಕಿಚ್ಚು ಪಟ್ಟವರೆಷ್ಟು
ನಿನ್ನ ಸೋಲಿಗೆ ಇಲ್ಲಿ ಸಂಭ್ರಮಿಸುವವರೆಷ್ಟೋ...
ನಿನ್ನ ಮಾತಿಗೆ ತಪ್ಪು ಅರ್ಥಗಳು ನೂರು
ಸುತ್ತಲಿರುವವರೆಲ್ಲರೂ ಆದರೆ ಯಾರು ಕಷ್ಠಕ್ಕೆ ಆಗದವರು...
So......

ನಿನ್ನೊಳಗಿರುವ ನಿನ್ನತನವನ್ನು ಕೇಳು*
ನಿನ್ನವರಾರೆಂದು...........

Raghav shetty







-


8 JUL 2020 AT 22:43

ಆಗಸವ ನೋಡಲು
ಏಕೆ ನೂಕು ನುಗ್ಗಲು...
ಇಲ್ಯಾರ ಹಂಗಿಲ್ಲ ಬದುಕು ಕಟ್ಟಿಕೊಳ್ಳಲು!

ಬಳಲಿದ ಬದುಕಿಗೆ ಬಣ್ಣ ತುಂಬುವ ತವಕ
ಪ್ರಯತ್ನಗಳ ಬಿಡದಿರು ಸೋಲೆ ಸೋಲೊಪ್ಪುವತನಕಾ.

ಮೈ ಮರೆಯದಿರು ಇಲ್ಲಿ ಸ್ಪರ್ದಿ ನೀನೇ ನಿನಗೆ
ಅವಕಾಶಗಳು ಬಳಸಿ ಬೆಳೆ ಆಗಸದಕಡೆಗೆ

-


8 JUL 2020 AT 12:07

ನೀನಿದ್ದ ಪುಟ್ಟದೊಂದು ಹೃದಯ
ಇಂದೇಕೋ ಖಾಲಿ ಖಾಲಿ,,,
ನೋವೆಲ್ಲಾ ಹೊರಹಾಕುತಿದ್ದೆ
ಭುಜದ ಮೇಲೆ ಹಾಗೆ ಜಾರಿ....
ಕೈ ಬೆರಳು ತಡವರಿದೆ ಹಿಡಿದು
ಸಾಗಲು ನಿನ್ನ ಬೆರಳು...
ನೀನಿರದೆ ಜೊತೆ ಬರೇನು
ಎನ್ನುತಲಿದೆ ನನ್ನದೇ ನೆರಳು..

-


21 JUN 2020 AT 12:33

ಏನಾಗಬೇಡ...

ಪ್ರಯತ್ನ ಪಡದೆ ಸೋಲಿಗೆ ಶರಣಾಗಬೇಡ...
ಯಾರ ಮುಂದೆಯೂ ಕೈಚಾಚಿ ಕೀಳಾಗಬೇಡ ...
ಕೈ ಸೋತವರ ಕಂಡು ಹೀಯಾಳಿಸಬೇಡ...
ಹುಟ್ಟಿಗೆ ಅರ್ಥ ಸಿಗುವ ಮುನ್ನ
ಮಣ್ಣಾಗಬೇಡ...

ಆಗುವುದಾದರೆ.....
ಸರ್ವರೊಳಗೊಬ್ಬ ಉತ್ತಮನಾಗು..
ಉತ್ತಮರೊಳಗೊಬ್ಬ ಪುರುಷೋತ್ತಮನಾಗು..

ರಾಘವೇಂದ್ರ ಶೆಟ್ಟಿ

-


Fetching Raghav Shetty Quotes