ಮನ ಮಿಡಿದಿದೆ ನಿನಗಾಗಿ,
ಹೊಂಬಾಳಿನ ಹೂ ಬನದಲ್ಲಿ
ತಂಗಾಳಿಯಾಗಿ ನಾ ಸುಳಿವೆ!
ಮುಂಗಾರು ಮಳೆ ಹನಿಗಳಲಿ
ಪನ್ನೀರಾಗಿ ನಾ ಹರಿವೆ!
ಎಳೆ ಬಿಸಿಲಿನ ಕಿರಣದಲಿ
ಎಳೆ ಎಳೆಯಾಗಿ ನಾ ಸೂಸೂವೆ!
ಮುನ್ನುಗ್ಗಲು ಹಾ ತೊರೆವ
ಸಾಗರದ ಅಲೆಯಾಗಿ ನಾ ಬರುವೆ!
ನಿನ್ನಿರುವಿನ ಹೆಜ್ಜೆಗಳ ಕುರುಹುಗಳ
ಕಂಡಿರಲು,ಮಿಡಿಯುವುದು ನಿನಗಾಗಿ
ಹೃದಯವಿದು ಅನವರತ!!-
ಅಮ್ಮನ ಮಡಿಲು ,ಅದುವೇ ಸ್ವರ್ಗ!
ಅಮ್ಮನ ಹಾಲು ಮಗುವಿಗೆ ಅಮೃತ!
ಅಮ್ಮನ ಜೋಗುಳ ಮಧುರ ಸಂಗೀತ!
ಅಮ್ಮನಿತ್ತ ಕೈ ತುತ್ತು ಪರಮಾನ್ನ!!
ಕೈ ಹಿಡಿದು ನಡೆಯಲು ಕಲಿಸಿದೆ
ತಿದ್ದಿ ತೀಡಿ ನುಡಿಯಲು ಕಲಿಸಿದೆ
ಸಂಬಂಧ ಗಳ ನೀ ಪರಿಚಯಿಸಿದೆ
ಗುರು ಹಿರಿಯರ ನಮಿಸಲು ತಿಳಿಸಿದೆ
ಹಸಿದುತಾನಿದ್ದು ಉಣಿಸಿದೆ
ನಿದ್ದೆಯ ಬಿಟ್ಟುಮಲಗಿಸಿದೆ
ಅಕ್ಕರೆಯಲಿ ಮೀಯಿಸಿದೆ
ನೋವನು ಉಂಡು ನಗಿಸಿದೆ!
ಅಮ್ಮನೇ ನನ್ನಪ್ರೀತಿಯಾ ಬಂಧು
ಅಮ್ಮ ನೀ ನನ್ನಾತ್ಮದ ಗೆಳತಿ
ಅಮ್ಮ ನನ್ನನ್ನು ಉದ್ಧರಿಸುವ ಗುರು
ಜನ್ಮ ಜನ್ಮಕೂ ನೀನೇ ನನ್ನ ಅಮ್ಮ!!
-
ಹೃದಯ ಮಂದಿರದ ಮಂಟಪದಿ
ನಿನ್ನ ಕೂರಿಸಿದೋ
ಪ್ರೀತಿಯ ಅಭಿಷೇಕ ನಿನಗರ್ಪಣೆ!!!-
ಮನದೊಂದಾಸೆ....
ಹೃದಯ ಮುಟ್ಟಿದ, ಭಾವ ಮಿಡಿದ
ಬೆನ್ನುತಟ್ಟಿದ,ಸ್ನೇಹಕ್ಕೆ ಬಗ್ಗಿದ
ಪ್ರೀತಿಗೆ ಮನಸೋ ತ,
ಗೆಲುವಿಗೆ ಹಿಗ್ಗಿದ, ಸೋತಾಗ
ಸಂತೈ ಸಿದ,ತಪ್ಪಿಗೆ ತಿದ್ದಿದ
ನನ್ನೆಲ್ಲಾ ಪ್ರೀತಿಪಾತ್ರರಿಗೆ
ಜಗದೊಡೆಯ ನಲಿ ಬೇಡಿ
ಅಕ್ಷಯ ದ ಪಾತ್ರೆಯ ತಂದು
ಅಮೃತ ವನು ಕುಡಿಸುವಾಸೆ!!!
-
ಮರಳಿ ಬಾ ಬಳಿಗೆ..
ಮೂಡಣದಿ ಉದಿಪ ರವಿಯ
ರಂಗಲ್ಲಿ ನಿನ್ನ ನೆನಪು
ಹಾಲುಕ್ಕುವ ಬೆಳದಿಂಗಳ
ಬೆಳಕಿನಲ್ಲಿ ನಿನ್ನ ನೆನಪು
ಮುಂಗಾರು ಮಳೆಯ ತುಂತುರು
ಹನಿ ಗಳಲ್ಲಿ ನಿನ್ನ ನೆನಪು
ಯುಗಾದಿಯ ಬೇವು ಬೆಲ್ಲದ
ಕಹಿ ಸಿಹಿ ಯೊಂದಿಗೆ ನೆನಪು
ದೀಪಾವಳಿಯ ಹಣತೆಗಳ
ಬೆಳಕಿನಲ್ಲಿ ನಿನ್ನ ನೆನಪು
ದೇವಾಲಯದಿ ಶಂಖ ನಾದ
ಮೊಳಗಿದಾಗ ನಿನ್ನ ನೆನಪು
ಸಂಗೀತದ ಸಪ್ತ ಸ್ವರದ
ಲಹರಿಯಲ್ಲಿ ನಿನ್ನ ನೆನಪು
ಸಂದದಾರಿಯ ಹಂಗು ಬಿಟ್ಟು
ಹಿಂದಿರುಗಲಿ ಅದೇ ಹುರುಪು
ಮನದ ಮೂಲೆಯಲಿ ಬಚ್ಚಿಟ್ಟ
ಪ್ರೀತಿಯಾಗದೇ ಇರಲಿ ಬರಿ ನೆನಪು!
ಕವಲೊಡೆದ ದಾರಿಗಳು ಮತ್ತೆ
ಸಂಧಿಸಿ ತರಲಿ ಜೀವನದಿ ಹೊಳಪು!!
-
ಗುಲಾಬಿಯನ್ನು ಕಂಡಾಗಲೆಲ್ಲ...
ಸುಗಂಧ ಸೂಸಿ. ನಸುನಕ್ಕು
ಅರಳಿ ನಿಂತ ತರುಣಿ....
ತಂಗಾಳಿಗೆ ಬಳುಕಿ ನಿನ್ನ ನಡು ಸಣ್ಣ,
ಉಳುಕ ಬಹುದೆ ಕಾಣೆ...
ಮೊಗ್ಗಿನಿಂದಾಚೆ ಅರಳಿ ನಗುವ ಮೊಗದಿ ನಸು ಲಜ್ಜೆ...
ಮಂಜಿನ ಹನಿ ಕಚುಕುಳಿಯಿಟ್ಟ
ಪರಿಗೆ ಕುಣಿವೆ ಇಟ್ಟು ಹೆಜ್ಜೆ...
ಮಧುವ ಅರಸಿ ಬಳಿ ಬರಲು ಭೃಂಗ
ರೋಮಾಂಚನ ನಿನಗೆ ಅಂಗಅಂಗ...
-ರಾಧಿಕಾ ಕಾಮತ್
-
ಎಲ್ಲಾದಕ್ಕೂ ಕಾಲ ಕೂಡಿ ಬರ ಬೇಕು....
ಇಲ್ಲಾಂದ್ರೇ Yq ....
ನಂಗೆ ಯಾಕೆ ಮೊದಲೇ ಸಿಗ್ಲಿಲ್ಲ???-
ನಿನ್ನ ನೋಡ ಬೇಕೆಂದು ಹಂಬಲಿಸುವೆ.....
ಸುತ್ತ ಮುತ್ತ ಹತ್ತು ಹಲವರಿರ ಬಹುದು
ಮುಕ್ತ-ಮುಗ್ಧ ಮನಸು ಬಿಚ್ಚಿಡಲೂ ಬಹುದು..
ಹತ್ತು ಹಲವು ವ್ಯವಹಾರಗಳಾಚೆ
ಕೊಟ್ಟು ಕೊಳ್ಳ ಬಹುದು, ಲೆಕ್ಕ
ಹೇಳಲೂ ಬಹುದು...
ಮನದ ಅಳಲನ್ನು ತೋಡಿ, ಸುಖ -ದು:ಖಗಳ ಹಂಚಿ ಕೊಳ್ಳಲು ಬಹುದು....
ಹಬ್ಬ ಹರಿದಿನಗಳಲ್ಲಿ ತುಪ್ಪ ಹೋಳಿಗೆ ಯೂಟ, ಸಂತಸದಿ ಜತೆಯಾಗಿ
ಸವಿದಿರ ಬಹುದು...
ಎಲ್ಲರನು ಮೀರಿ, ಕೊಟ್ಟು ಕೊಡದೆ
ಹಂಚಿ ತಿನದೇ, ಮನವ ಮೀಟಿದ,
ಆತ್ಮಕ್ಕೆ ಹತ್ತಿರವಾದ ನಿನ್ನ ನೋಡಲು
ಹಂಬಲಿಸುವೆ!!!!
-ರಾಧಿಕಾ ಕಾಮತ್
-
ಮಾಡಿ ಎಲ್ಲಾ ಮತದಾನ ಪ್ರಜಾತಂತ್ರಕೆ ಇದು ವರದಾನ!!
ಎಲ್ಲಾ ಸರಿಯಿಲ್ಲ ಸಾವಧಾನ ಇದ್ದದ್ದುರಲ್ಲೇ ಹುಡುಕು ನಿಧಾನ!!!-
ನೇಸರನ ಚಿತ್ತಾರ
ಬೇಕಿಲ್ಲ ಅವಂಗೆ
ಬಣ್ಣ-ಬ್ರಷ್ಗಳ ಹಂಗು!!!!-