ಮನದೊಳಗೆ ಮೂಡುತಿದೆ ಪ್ರೇಮ ಸಂಚಲನ
ನಿನ್ನ ನೋಡುವ ತವಕ ಹೆಚ್ಚಿದೆ ದಿನ ದಿನ
ಕಡೆಗು ಬಂದೊದಗಿತು ಆ ಶುಭಗಳಿಗೆ
ಇರುಳೆಲ್ಲ ನಿದ್ದೆ ಇರದೆ ಬಳಲಿಕೆ ಕಣ್ಣಿಗೆ
ಮಾತು ಮರೆತೆ ನಿನ್ನ ಕಿರುನಗೆಯ ನೋಡಿ
ಕಳೆದು ಹೋದೆನು ತಿಳಿಯದೆ ನೀ ಮಾಡಿದ ಮೋಡಿ
ತೇಲುತಿರುವೆ ನಿನ್ನ ಪ್ರೀತಿಯ ಕಡಲಲಿ
ಬೆಚ್ಚಗಾದೆ ನಾ ನಿನ್ನ ಪ್ರೇಮದ ತೆಕ್ಕೆಯಲಿ
ಜೊತೆಯಾಗಿ ಬಾಳುವ ಪ್ರೀತಿಯ ಹಂಚುತಾ
ಪ್ರೇಮದ ಪಾಠವ ಜಗತ್ತಿಗೆ ಸಾರುತ-
Enough of being strong
Enough of being fake
Tired of acting fine
Tired of all the fake smiles
I can't take it now
I am not strong enough
I am done🙂
Somewhere I lost me
Searching for the peace
Lost all the happiness
Finally you won and my soul died-
ಸುತ್ತ ಕೆಂದಾವರೆ ಪರಿಮಳವ ಸೂಸಲು
ಇತ್ತ ಮನದಲಿ ಖುಷಿಯ ಸ್ಪರ್ಶವಾಗಲು
ಮೂಡುತಿದೆ ಮಂದಹಾಸ ತನಗರಿವಿಲ್ಲದೆ-
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ನೋವು ನಲಿವಿನ ಈ ಪಯಣದಲಿ
ಪಡೆದುಕೊಂಡ ಪುಣ್ಯವೆಷ್ಟೋ
ಕಳೆದುಕೊಂಡ ಪಾಪವೆಷ್ಟೋ-
ನನ್ನ ಮುಗುಳು ನಗೆಯಲಿ ನೋವನು ಮರೆತಳು
ತೊದಲು ನುಡಿಯಲಿ ಸಂತೃಪ್ತಿಯ ಅನುಭವಿಸಿದಳು
ಬಾನ ಚಂದಿರನ ತೋರಿಸಿ ತುತ್ತು ತಿನಿಸಿದಳು
ನನ್ನ ಗೆಲುವನು ಸಂಭ್ರಮಿಸಿದಳು
ನನ್ನ ಕಣ್ಣಲೊಂದು ಹನಿ ಬಿದ್ದರೆ ಮರುಗಿದಳು
ಅವಳ ಬದುಕನು ನನಗಾಗಿ ಮುಡಿಪಿಟ್ಟಳು
ನಿಸ್ವಾರ್ಥ ಪ್ರೀತಿಯ ಧಾರೆ ಎರೆದಳು
ಬಾಳ ಪಯಣದಲಿ ನೆಚ್ಚಿನ ಸ್ನೇಹಿತೆಯಾದಳು
ಪದಗಳು ಸಾಲದು ಮಾಡಲು ನಿನ್ನ ಗುಣಗಾನವ
ಅಮ್ಮ, ಹೇಗೆ ತೀರಿಸಲಿ ನಾ ನಿನ್ನ ಋಣವ
ಜನುಮ-ಜನುಮಗಳ ಅನುಬಂಧವಿದು
ಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂಧವಿದು-