"ಪ್ರಾಣಿಗಳಾಗಲಿ ಪಕ್ಷಿಗಳಾಗಲಿ
ಸಕಲ ಜೀವಜಂತುಗಳಾಗಿರಲಿ
ಅವುಗಳಿಗೆ ತಮ್ಮದೇ ಆದ
ಸ್ವಾಭಿಮಾನ ಸ್ವಾಭಾವಿಕವಾಗಿರುತ್ತದೆ
ಈ ಜಗದ ಸೃಷ್ಟಿಯ ದೃಷ್ಟಿಯಲಿ
ಎಂಬುದಂತು ನಿತ್ಯ ಸತ್ಯ..."
ನೋಡೆಂದ ಹಿರಿಯ.-
"ನಿನ್ನ ಕುಡಿ ನೋಟದ
ಸವಾಲಿಗೆ ನಾ ಏನೆಂದು
ಜವಾಬು ಕೊಡಲಿ ಸಖಿ...?
ಯಾವತ್ತೂ ನೀ ಇರಲು
ಹಸಿರುಸಿರಾಗಿ ಮನದಂಗಳದಿ
ಹೃದಯದ ಮಿಡಿತವಾಗಿ...!
ನೀ ಇರುವೆ ಎಂದು
ಜೀವನದುದ್ದಕ್ಕೂ ಒಲವಾಗಿ
ಬಾಳುವ ನಾವು ಜೊತೆಯಾಗಿ..."-
"ನಿನ್ನೊಲವ
ಆಲಿಂಗನದೊಳು,,,
ಭುಜ ಬಲದ
ಆಸರೆಯೊಳು,,,
ಮನದಾಳದ
ಮಾತುಗಳು,,,
ಹೃದಯ ಬಡಿತದ
ಮಿಡಿತದೊಳು,,,
ಪ್ರೇಮ ಪ್ರಣಯ
ಪ್ರಸಂಗಗಳು..."-
"ರಚಿಸಿದ ಕಥೆ ನನ್ನದಾದರೇನು
ಅದರೊಳು ಅಡಗಿದ ಬಿಂಬವು
ಪ್ರತಿ ಪುಟದೊಳಿರಲು ನೀನು...
ಮನದೊಳು ಅರಳಿದವು
ಭಾವನೆಗಳ ಬರಹಗಳವು
ನಿನ್ನೊಲವ ನಾಮಾಂಕಿತವು...
ಓದೊಲವ ಧಾವಂತದೊಳು
ಮರೆಯದಿರು ನನ್ನಯ ನೀನು
ಅರಿವಿನಲಿ ಬರೆದಿರಲು ನಾನು..."-
"ಪುಸ್ತಕಗಳ ಗೋಪುರವ ಹೊತ್ತ
ಕತ್ತೆಗೂ ಮಸ್ತಕದಿ ಅರಿವಾಯಿತಂತೆ
ಹೊತ್ತಿಗೆಯೊಳಗೆ ಅಡಗಿದ
ದಾರ್ಶನಿಕತೆಯ ಜ್ಞಾನೋದಯ..."
ನೋಡೆಂದ ಹಿರಿಯ.-
"ಕಲ್ಪನೆಗೆ ನಿಲುಕದ
ಪಕ್ಷಿನೋಟದ
ಕಲೆಗೆ ಪ್ರೋತ್ಸಾಹದಿ
ಬೆಲೆ ನೀಡುವ
ಮೂಲಕ ನೆಲೆಯ
ಕಾಣಬಹುದು..."
ಎಂದ ಹಿರಿಯ.-
"ಮಿತ ಬಳಕೆ,
ಹಿತ ಗಳಿಕೆಯಲ್ಲಿರಲಿ
ನಿತ್ಯವೂ ಜೀವನದ
ದಿನ ಬಳಕೆಯ
ಪೀಠಿಕೆ..."
ನೋಡೆಂದ ಹಿರಿಯ.-
"ಆಗಸದ ಅಂಗಳ
ನಲಿವಿನ ಮನಗಳ
ಒಲವಿನ ಕನಸುಗಳ
ಈಡೇರಿಕೆಯಲಿ ಬಯಕೆಗಳ,,,
ಆಸರೆಯಲಿ ಆಕಾಂಕ್ಷೆಗಳ
ಹೊಂದಾಣಿಕೆಯ ಭಾವನೆಗಳ
ಸ್ಪಂದನೆಯ ಸವಿ ನೆನಪಿನಂಗಳ
ನಲಿವಿನಲಿ ದಿಗಂತದಿ ಪ್ರೇಮಿಗಳ..."-
"ಒಡಲಾಳದ ಕುಡಿಗಾಗಿ
ರಕ್ಷಣೆಯ ಬಿಸಿಯುಸಿರಲಿ
ಹತ್ತಮ್ಮಳ ಮನದಳಲಿನ ಕೂಗು,,,
ದಣಿವರಿಯದ ದುಡಿತದಿ
ಗಳಕೆಯಲಿ ಬಂದ ಒಲವಿನಲಿ
ಹೊಂದಿಕೊಳ್ಳುತಲಿ ಬದುಕಿಗು,,,
ಮಗುವಿನ ಲಾಲನೆ ಪಾಲನೆ
ಪೋಷಣೆಯಲಿ ಪೊರೆಯುವ
ದೇವತೆಯಂತಿಹಳಮ್ಮ ಬಾಳಿಗು..."-