ಕಿವುಡು ಸಮಯದ ಮುಂದೆ ಕಿರುಚಾಡಿ ಕರೆದರೆನಂತೆ,
ತಿರು ತಿರುಗಿ ಬರಬಹುದೇ ಎರೆಡೆಜ್ಜೆ ಮುಂದೆ,
ಕಿವುಡು ಸಮಯದ ಜೊತೆಗೆ ನುಲಿದಾಡಿ ನಡೆಡೊಡನೆ, ಹಿಂದೆ ಬೀಳದೋದರೂ ನೀನಿರುವೆ ಮುಂದೆ,
ಸಮಯವದು ಕಿವುಡು, ಕುಂಟತಾನಲ್ಲ.
ಅರಿತರಿತು ಹೆಜ್ಜೆಯನಿಡು ಸುತ್ತೆತ್ತಲೂ ನೀ ನೋಡುತ
ನಗು-ಅಳುವಿಗೆ ಪಿಸುಗುಡುತ...ನಿನದಾರಿಯ ಬೆಂಬಲಿಸುತ...
RKR Thoughts-
ವ್ಯಕ್ತಿಗಳು ಆದರ್ಶವಲ್ಲ.
ಆದರ್ಶಗಳನ್ನು ಆಲೋಚನೆಯನ್ನು ಆರಿಸಿಕೊಂಡು
ಆ ಆದರ್ಶಗಳನ್ನು ಅಳವಡಿಸಿಕೊಂಡು
ವ್ಯಕ್ತಿತ್ವ ವಿಕಸನಗೊಳಿಸಿದ್ದಲ್ಲಿ
ಆದರ್ಶಗಳೇ ವ್ಯಕ್ತಿಯನ್ನು ಇತರರಿಗೆ ಆದರ್ಶಗೊಳಿಸುತ್ತೆ....
ವ್ಯಕ್ತಿತ್ವವಿಕಸನವೇ ಆದರ್ಶ ಸೂತ್ರ..
RKR Thoughts.-
ಜನರೊದ್ದಾರಕ್ಕಾಗಿಯೇ
ನಿಂತಿರುವನಿ ಸಂತ
ಅಹಂ ಆಡಂಬರವನ್ನು
ಸುಟ್ಟು ಹಾಕಿ ತಾ ಕುಂತ
ನೂರು ಅವಮಾನಕ್ಕಿಂತ
ಅಭಿಮಾನಕ್ಕೆ ಮನಸೋತ
ಜಗದೊದ್ದಾರವೇ ಈತನ ಸಿದ್ಧಾಂತ.
ಬದುಕಿದ್ದೇ ಬಡವರಿಗೆ ಬೆನ್ನೆಲುಬಾಗಿ
ಆಶಕ್ತರಿಗೆ ಆಶಾಕಿರಣವಾಗಿ
ನೊಂದವರಿಗೆ ಹೆಗಲು ನೀಡಿ ಬಂಧುವಾಗಿ
ಅಭಿಮಾನಿಯಾಗಿರುವೆ ಈ ನನ್ನ ದೇವನಿಗೆ
ಅವಮಾನಿಸುವವಗೂ ಆಶೀರ್ವಾದವನ್ನೇ ನೀಡಬಯಸುವ
ಪರಮಾಪೂಜ್ಯ ಪರಮಾತ್ಮ ಖಾವಂದರಿಗೆ 🙏🏻
RKR Thoughts-
ಬದುಕು ತಿರುಗುವ ಚರಕ, ತಿರುಗಿಸು ನಿಂಜೀವ ಜಾರುವತನಕ,
ಪೊರಕೆಯಂತದ ಕಟ್ಕೋ ನೋವಗುಡಿಸುವತನಕ,
ಸ್ವಚ್ಛವಾಗಿಸಿಕೋ ನಿನ್ನಮನಗುಡಿಯ ತಿರಕ,
ಅಟ್ಟಅಹಂಕಾರವದು ನಿನ್ನಲ್ಲಿ ತೀರುವತನಕ,
ಗಟ್ಟಿಗಳಿಸಿಕೋ ತಾನು ತನ್ನವರತರ್ಕ, ಮೂಢನಂಬಿಕೆಹೊರತ ಚಿಂತಿಬಿತ್ತುವತನಕ,
ತವಕತವಕದಿ ತಾನುತoಮ್ದೇದು ಬದುಕ, ಸಾಗಿಸಾಗಿಸೋಲೇ ಮೈಮಣ್ಣಸೇರುವತನಕ...
RKR Thoughts
-
ಬಿಸಲಿಗೆ ಬೆವರದ
ಚಳಿಯಲಿ ನಡುಗದ
ಮಳೆಯಲಿ ನೆನೆಯದ ದೇಹಕ್ಕೆನಿದೆ ಸುಖ.
ಕಷ್ಟಕೆ ಕರುಗದ
ನೋವಿಗೆ ಮರುಗದ
ನಗು-ಸೇರದ ಬದುಕಿಗಿಲ್ಲವೊ ಸಾರ್ಥಕ.
-
ಬದುಕೇ ನೀನೇಷ್ಟು ಸುಂದರ.
ಭವ್ಯತೆಯ ಸಂಕೋಲೆಗಳ
ಭಾವಯಾನದ ಪಯಣದಂತೆ
ಕ್ಷಣ ಕ್ಷಣಕೂ ನೀನೀಡುವ ಕೌತುಕವೇ ಒಲುಮೆಯ ಔತಣ.
ಅಲ್ಲೊಂದು ಇಲ್ಲೊಂದು ನಿಲ್ದಾಣ
ಬರೀ ಮಾತಿಗೆ ಸಾಲದದರ ಭಿನ್ನ
ನಿನ್ನೆದುರು ಸತ್ತುಬೀಳುವುದು ಮೌನ.
ಪದಗಳಿರದೇ ವರ್ಣಿಸಲು ನಿನ್ನ
ಬದುಕೇ ನೀನೇಷ್ಟು ಸುಂದರ.-
ವೇದನೆಯನ್ನ ನಿವೇದನೆ ಮಾಡಿಕೊಂಡರೆ
ರೋಧನೆಯಿಂದ ದೂರಾಗಬಹುದು.
ಇಲ್ಲವಾದರೆ ಕಾಲಕ್ರಮೇಣ ರೋಧನೆ ರೋಗವಾಗಿ
ಮೇಣದಂತೆ ಜೀವ ನೋವಲ್ಲೇ ಕರಗುತ್ತದೆ..
ಆತ್ಮವಂಚನೆಗಿಂತ ಬಲಿಷ್ಠ ವಂಚನೆಯಿಲ್ಲ.-
ಭಾವಯನವದು ಅದ್ಭುತ
ಭ್ರಮೆಯ ದಾರಿದ್ರ್ಯ ಭಕ್ಷ್ಯತೀ ನಿದ್ರ್ಯ
ಅತಿಯಾದ ಕಲ್ಪನೆಯ ಕೆರೆಯ ಅಂಗಳದಲ್ಲಿ
ಕೊರಗುತ್ತಾ ಕೂತಿರುವ ಕಪ್ಪೆಯ ಧನಿಯೇ ಅದ್ಭುತ-
ಖುಷಿಯಾಗಿರಿ,
ಕಳೆದುಕೊಂಡವರು ಕೊರಗುವಹಾಗೆ,
ನೆನಪಿಸಿಕೊಂಡು ನರಳುವ ಹಾಗೆ,
ಮರೆತವರಿಗೆ ಮತ್ತೆ ಮತ್ತೆ ನೆನಪಾಗುವ ಹಾಗೆ,
ಮೆತ್ತಗೆ ಮತ್ತದೇ ಹೆಗಲಿಗೆ ಒರಗಿ ಕರಗುವಹಾಗೆ.
-
ಇನ್ನೊಬ್ಬರ ಜೀವನದಲ್ಲಿ ಕಡ್ಡಿ ಆಡಿಸುವುದನ್ನು ಬಿಟ್ಟು
ಬೇರಾವುದೇ ಕೆಲ್ಸ ಮಾಡಿದ್ರೂ ಸಹ
ನೀವು ನೆಮ್ಮದಿಯಿಂದ ಬದುಕಬಹುದು..
ಮತ್ತೊಬ್ಬರನ್ನ ಆಡಿಕೊಳ್ಳಲು ಕೂಡಿಟ್ಟ ಸಮಯವನ್ನು
ನಿಮ್ಮ ಏಳಿಗೆಯ ಚಿಂತನೆಗಾಗಿ ಕಾಯ್ದಿಡಿ..
ಬದುಕು ಬದಲಾಗಬಹುದು..
-