19 MAY 2019 AT 9:10

ಉದರ ನಿಮಿತ್ತಂ ಬಹುಕೃತ ವೇಷಂ..
ಹೊಟ್ಟೆ ಎಂಬೋದು ಬಲು ಕೆಟ್ಟದು,ಅದ ತುಂಬಿಸಲು ನಡೆಯುತಿದೆ ಹಲವು ಕಸರತ್ತು.
ಕಲೆಯನ್ನು ಪಣಕ್ಕಿಟ್ಟು,ನಾದ ಸ್ವರದ ಗಾನ ಅವಳ ಮನ ತಟ್ಟೆ
ಬಸವನೊಂದಿಗೆ ಬಂದ ಅಜ್ಜನ
ಜೋಳಿಗೆಗೆ ಬೀಳುವುದು ಜೋಳದ ಹಿಟ್ಟು,ಇಲ್ಲವೆ ಜೋಳದ ರೊಟ್ಟಿ.ಸಾಲಂಕೃತನಾದ ಬಸವನು
ಹಾಕುವ ಗೋಣು,
ಅವನಾಶಿರ್ವಾದ ಅವಳ ಎದೆ ತಟ್ಟೆ ರೊಕ್ಕದ ಬಹುಮಾನ.
ನಗುವ ಮೊಗದ ಅವ್ವನು ರಂಗಕರ್ಮಿ ತುತ್ತಿನ ಚೀಲ ತುಂಬಿಸಲು ಬಳಿಯುತಿಹಳು ಜೋಳದ ರೊಟ್ಟಿ.ಒಲೆಯ ಮುಂದೆ ಕೂತವಳಿಗೆ ಮನದಲ್ಲಿ ಬೆಂಕಿಯಿದ್ದರು,ಮೊಗದ ಮೇಲೆ ಕಲಾವಿದನ ಹಾಡಿಗೆ ಮೂಡಿದೆ ಬೆಳದಿಂಗಳ ನಗುವು.ಅವನಿಗೆ ಕಾಣಿಕೆ ನೀಡುವ ಮನವು.ಏಕೆಂದರೆ ಅವಳಿಗೂ ಅರಿವಿದೆ ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು.

- ಪುಷ್ಪಾ