"ಹಣಕ್ಕೂ ಗ್ರಹಣದ ದೋಷ ಆವರಿಸಿದ್ದರೆ
ದರ್ಬೆ ಕೂಡ ದುಬಾರಿಯಾಗುತ್ತಿತ್ತು"-
Habitual Writer
Frequent Traveller!!
Connect Me on Instagram "Puneet... read more
ಮೌನ ಒಂದು ಆಭರಣವಂತೆ,
ಮೌನವನ್ನು ಖರೀದಿಸಲು, ಮಾತುಗಳನ್ನ ಮಾರಿದೆ,
ಖರೀದಿಸಿದ ಆಭರಣವನ್ನ ಧರಿಸಿದ ಮೇಲೆ,
ಮಾತಾಡುವುದನ್ನೇ ಮರೆತೆ!-
ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಪ್ರಕೃತಿ ಸೊಬಗನ್ನ
ಕಣ್ತುಂಬಿಕೊಳ್ಳುವುದೆ ಮಜ,
ಇದನ್ನ ಕಂಡಾಗ ನಮಗೂ ಹಕ್ಕಿಯಂತೆ ಹಾರುವ
ಬಯಕೆ ಮೂಡೋದು ಸಹಜ!!-
RCB ಸೋಲಲೆಂದು ವಿಕೃತ ಮನಸ್ಸಿನಿಂದ
ಆಶಿಸಿದವರು ಕೆಲವರು,
RCB ಗೆಲ್ಲಲೆಬೇಕೆಂದು ನಿಷ್ಕಲ್ಮಷ ಮನಸ್ಸಿನಿಂದ
ಪ್ರಾರ್ಥಿಸಿದರು ಹಲವರು,
ಪ್ರಾರ್ಥನೆಗೆ ಸಿಕ್ಕ ಪ್ರತಿಫಲ,
18 ವರ್ಷದ ಕಾಯುವಿಕೆಗೆ ಮುಕ್ತಿ,
RCBಗೆ ಅವರ ಅಭಿಮಾನಿಗಳೇ ಶಕ್ತಿ,
ಕೂಗಿ ಕೂಗಿ ಹೇಳುವುದು ಒಂದೇ
ಈ ಸಲ ಕಪ್ ನಮ್ಮದೇ!!!-
ಬಿಸಿಲ ಬೇಗೆಗೆ ಬೆಂದು ಬಳಲಿತ್ತು ಇಳೆ,
ಮೋಡಗಳ ಡಿಕ್ಕಿಯಿಂದ ಮೊಳಗಿತ್ತು ಗುಡುಗಿನ ರಣಕಹಳೆ,
ಮುಂಗಾರಿನ ಮುನ್ನುಡಿ ಕೊಟ್ಟ ಮಳೆ,
ಮಳೆ ಬಂದರೆ ಉಕ್ಕಿ ಹರಿಯುವುದು ನದಿ, ಹೊಳೆ,
ಹಚ್ಚ ಹಸಿರ ಪ್ರಕೃತಿ ಸೌಂದರ್ಯದಿಂದ ಭೂಮಿಗೂ ಒಂದು ಕಳೆ!-
ಸಮಯ ಕಳೆದುಹೋದರೆ ಮತ್ತೆ ಗಳಿಸಲಾಗದು,
ಸಮಯವನ್ನ ಸರಿಯಾಗಿ ಬಳಸಿ
ಸಂಪತ್ತು ಗಳಿಸಬಹುದು,
ಸಂಪತ್ತನ್ನ ಬಳಿಸಿ ಸಮಯವನ್ನ
ಗಳಿಸಲಾಗದು!-
ನಗುವೆಂಬ ಕಿರಣದಿಂದ ಸದಾಕಾಲ
ಪ್ರಕಾಶಿಸಲು ಬೇಕಿಲ್ಲಾ ಯಾವದೇ ಕಾರಣ!
ನಗುವೆಂಬುದು ಪ್ರತಿಯೊಬ್ಬರೂ ಧರಿಸಬೇಕಾದ
ಅಮೂಲ್ಯವಾದ ಆಭರಣ!
-