ನನ್ನವರೆಂದು ತಿಳಿದು ನನ್ನತನವ ನಿನ್ನೊಂದಿಗೆ ಹಂಚಿಕೊಂಡೆ.
ನನ್ನತನವ ಮರೆತು ನೀ ನಿನ್ನತನಕೆ ಹೊಂದಿಕೊಂಡೆ.
ನೀ ದೂರವಾದದ್ದು ನೋಡಿ ಊರಿಂದ ದೂರವಾದೆ ಎಂದುಕೊಂಡೆ.
ದೂರವಾದ ನಿನಗೆ ನಾ ಭಾರವಾದೇ ಎಂದು ಅರಿವಾದ ಈ ಮನ ಭಾರವಾಗುವ ಬದಲಿಗೆ ದೂರವಾಗುವುದು ಒಳಿತು ಎಂದು ನಾ ದೂರವಾದೆ..
-
ಜಗವ ಬೆಳಗುವ ಸೂರ್ಯನಿಗೂ ಬಿಟ್ಟು ಬಿಡದ ಗ್ರಹಣ.
ಒಲವ ಪಡೆದ ಹೃದಯಕೆ ಬಿಟ್ಟು ಬಿಡಬೇಕಾದ ಗ್ರಹಣ.
ತೀರಿಸಲಾಗದು ನಿನ್ನೋಲವ ಸಾಲ.
ಬರಲಿ ಬಡ್ಡಿ ಸಮೇತ ಒಲವ ತೋರಿ ತೀರಿಸುವ ಕಾಲ.
ನಾ ನಿನ್ನ ಒಲವ ಸಾಲಗಾರ
ಮಾಡಿಬಿಡು ನಿನ್ನ ಮನದ ಸಾಹುಕಾರ..☺️
-
ಇವರದ್ದು ಅಕಾಲಿಕ ಸಾವು
ಆದ್ರೆ ಎಲ್ಲರಿಗೂ ಸಹಿಸಲಾಗದ ಸಾರ್ವಕಾಲಿಕ ನೋವು.
ಇವರದ್ದು ಸದಾ ನಗುಮುಖ.
ಆದ್ರೆ ಅರ್ಥವಾಗಲಿಲ್ಲ ಆ ದೇವರದ್ದು
ಇವರ ಜೀವನದಲ್ಲಿ ಯಾವ ತರಹದ ಲೆಕ್ಕ..
ಸಂಸಾರದಲ್ಲಿ ಪ್ರೇಮ ಜೀವಿ.
ಎಲ್ಲರೊಡನೆ ಸ್ನೇಹ ಜೀವಿ.
ಇನ್ನೂ ಬರೀ ಅಮರ ನೆನಪು*ಚಿರಂಜೀವಿ*...😟
💐•ಸದ್ಗತಿ•💐-
ಈ ನಡುವೆ ಮನದಿ ಮೋಡ ಕವಿದು ಕತ್ತಲಾಗಲು
ಕಾರಣ ನೀ ದೂರವಾಗಿ ಅಮಾವಾಸ್ಯೆ ಈ ಮನಕೆ ಹತ್ತಿರವಾಗಲು..
ಕವಿದ ಮೋಡ ಸುರಿದು ಮಳೆ ಹನಿಯಾಗಲು
ಒಮ್ಮೆ ಅನಿಸಲು ಮರುಗಳಿಗೆ ನೀ ಬಂದೆ ಬರುವೆ ಕತ್ತಲಾದ ಒಲವ ಮನಕೆ ಬೆಳಕಿನ ರೂಪದ ಹುಣ್ಣಿಮೆಯಾಗಲು-
ಮೊದಲು ನೋಡಿದ ಅವಳ ಅಂದದ ಕಣ್ಣು,
ಅಳತೆ ಮಾಡಿದಂತಿರುವ ಮೂಗು,
ಅವಳು ನನಗೆ ಹೇಳುವ ತಿಳುವಳಿಕೆ ಮಾತು,
ಅವಳು ಸಂಸಾರದ ಭಾರ ಹೊರುವ ಕಲೆ,
ಸಮಯವ ಸರಿದೂಗಿಸುವ ಗುಣ,
ಅವಳದ್ದು ಹೇಳಲಾಗದ ತಾಯಿಯ ಸಂಬಂಧ,
ಅದು ಜನುಮದ ಋಣಾನುಬಂಧ,
ನನಗಿವೆಲ್ಲವು ನನ್ನ ಜೀವನದ ಆಕರ್ಷಕವಾದ ಸಂಗತಿಗಳಾಗಿ ಮಾರ್ಪಟ್ಟಿವೆ...☺️-
ವಿಚಾರ ಮಾಡುವ ವಿಚಾರವಂತರಾಗಿ
ಕಾರ್ಯಗಳನ್ನು ರೂಪಿಸಿ ಕ್ರಿಯಾಶೀಲರಾಗಿ.
ಮನದ ಜ್ಞಾನ ದೇಗುಲದಲ್ಲಿನ ಜ್ಯೋತಿಯಾಗಿ ಜಗತ್ತಿಗೆ ಹೊರಹೊಮ್ಮುವಿರಿ-
ಒಲವ ಸ್ನೇಹಿತೆಯಾಗಿ ಬಂದ ಅವಳ,
ಅವಳೋಲವ ಮರೆತು ಸಾಗಲೇ
ಇಲ್ಲ ನನ್ನೆ ನಾ ಮರೆತು ಹೋಗಲೇ...
ಪ್ರಯತ್ನಿಸಿದೆ ನಾ ಮರೆಯಲು
ಅವಳೋಲವು ಮತ್ತೆ ನೆನಪಾಗಿ ನನ್ನ ಮನವ ಕೊರೆಯಲು...
ಕೆಟ್ಟ ದಾರಿಯ ಸರದಾರ ನಾನು
ಒಲವ ತೋರಿ ಸರದಾರನ ಸರಿದಾರಿಗೆ ದೂಡಿದವಳು ನೀನು...
"ಈ ಕೆಟ್ಟ ಷೇರುದಾರನಲ್ಲಿ ಒಳ್ಳೆಯತನದ ಬಂಡವಾಳವ ಹೂಡಿದವಳು ನೀನು
ನಿನ್ನ ಒಳ್ಳೆಯತನದ ಸಾಲವನ್ನು ನಿನ್ನ ಮನದ ಸಾಲಲ್ಲಿ ನಿಂತು ಕೇಳಲು ಬಂದವ ನಾನು"-
ಆ ಗಳಿಗೆ ಅಮೂಲ್ಯ, ಜೀವಿ'ಗಳಿಗೆ'
ನೀ ಬರಬೇಕು ನಾ ನೆನೆದ ಮರು'ಗಳಿಗೆ'
ಕ್ಷಮೆ ಇರಲಿ ನನ್ನೆಲ್ಲಾ ತಪ್ಪು'ಗಳಿಗೆ'
ಇನ್ನು ಬೆಲೆ ಕೊಡುವೆ ನಿನ್ನ ಮಾತು'ಗಳಿಗೆ'
ಸ್ಪಂದಿಸುವೆ ನಿನ್ನೇಲ್ಲ ಭಾವ'ಗಳಿಗೆ'
ಉತ್ತರಿಸು ನನ್ನ ಪ್ರಶ್ನೆ'ಗಳಿಗೆ'
ಕಾಯುವೆ ನಿನ್ನ ಉತ್ತರ'ಗಳಿಗೆ'-
ನೀ ಇಲ್ಲದೆ ಆಗಲು ನೋವು
ಆಗದೇ ಇರಲು ನಲಿವು..
ಹಿಡಿದಂತೆ ನೀ ನನ್ನ ಕಿರುಬೆರಳು
ನೋಡಿದಾಗ ಅದು ಬರೀ ನೆರಳು..
ನೀ ಬಂದರೆ ಆಗುವದು ಮನದಿ ಕ್ರಾಂತಿ.
ಆದರೆ ನೀ ಬರುವೆ ಎಂಬುದು ನನ್ನ ಬ್ರಾಂತಿ..
ಬಾ, ಬಂದು ಮಾಡದಿದ್ದರೂ ಕ್ರಾಂತಿ
ಕೊಂಚವಾದರೂ ಕೊಡು ಈ ಮನಕೆ ಶಾಂತಿ....🥰❣️-
ಅಂದು ಕೊಂಡಿರುವನು ಒಬ್ಬ ಪೆದ್ದ ಜಾಣ.
ನೀನಿಲ್ಲದೇ ಅವನು ಸ್ವರವಿಲ್ಲದ ರಾಗ.
ಬೇಕಿಹುದು ಅವನಿಗೆ ನೀನ್ನೋಟ್ಟಿಗೆ ಇರಲು ಜಾಗ.
ಎಲ್ಲರಿಗಾಗಿ ಮಾಡುತ್ತ ತ್ಯಾಗ.
ಮಾಡುತಿಹಳು ಸುಂದರಿಯ ಸೋಗ.
ಅವಳ ಒಲವ ಮೂರ್ತಿಯ "ರೂಪ" ನೋಡಲು ಜಗಸೋಜಿಗ.☺️🥰🤗-