ಪ್ರಿಯಾರಾಗ   (ಪ್ರಿಯಾರಾಗ)
133 Followers · 51 Following

ಹೇಳಲಾಗದೆ ಉಳಿಯೋದು ನೂರೊಂದು..
Joined 2 October 2018


ಹೇಳಲಾಗದೆ ಉಳಿಯೋದು ನೂರೊಂದು..
Joined 2 October 2018

ಭಾವಗಳ ಸಮುದ್ರಗಳಿಂದೆದ್ದು
ಚಂಗನೆ ಹಾರಿ ಅಪ್ಪಿ ತೋಯಿಸಿದಂತೆ
ಮುಂಚೆ ಇದ್ದ ಕನವರಿಕೆಗಳೆಲ್ಲ ಬರೀ ಸೊನ್ನೆ
ಅದೊಂದಿತ್ತು ಕನಸು ಮುರಿದ ಜೋಪಡಿಯೊಳಗೆ
ಮುಂಜಾನೆ ಪುಟ್ಟ ಮಗುವಿನ ಆಕಳಿಕೆಯ ಸದ್ದಿನಂಥದ್ದು;
ಇನ್ನು ಮುಂದೆ ತಾಯಿ ಪ್ರಪಂಚ
ಕಣ್ಣಲ್ಲೇ ಹುಟ್ಟಿ ಮನಸಿನಾಳಕ್ಕೆ ಸಾಯೋದು ಪ್ರೀತಿಗಷ್ಟೇ ಗೊತ್ತು, ದೇವರ ಅದ್ಭುತಗಳಿಗೊಂದು ಸಲಾಮ್!!
ಜೀವ ವೀಣೆ ಮಿಡಿದಷ್ಟು ನಾದ ಮುಗಿಯಲೇ ಇಲ್ಲ,
ಅದು ನಮ್ಮಿಬ್ಬರ ಜೀವದ ಗುಟ್ಟಾಗಿತ್ತು
ಮುಗಿದಂತಿದ್ದ ಕನಸುಗಳಿಗೆ ಮಹೂರ್ತ ನೀಡಬೇಕಿನ್ನು
ಪ್ರೀತಿಗೆಂಥ ಹೆಸರು ಹೇಳು?,ಪ್ರತಿ ಜನುಮದ ಗಂಟಿಗೆ ಒಲವಾಗಲಿ ಸ್ಫೂರ್ಥಿ ಇನ್ನೂ...

-



ನಾನೆಂದು ದೇವರನ್ನು ಕಾಣಲಿಲ್ಲ
ನಿನ್ನಲ್ಲೇ ದೇವರನ್ನು ಕಂಡೇನಲ್ಲ
ಏನೆಂದು ಬಣ್ಣಿಸಲಿ ದೇವರ (ನಿನ್ನ )ನ್ನು
ಮುಗ್ಧ ನಗುವಿನ ಮೋಹಕ ರೂಪಕ್ಕೆ ಮನಸೋಲದವರಾರು?!
ದೇವರೇ ದೇವರಿ(ನಿನ)ಗೆ ಸರಿಸಾಟಿಯೇನು??
ನನ್ನೆಲ್ಲ ನೆಮ್ಮದಿಯ ತಾಣ ನೀನು
ಜೀವನದ ಪರಮ ಗುರಿ ನೀನೆ..
ಎಂದೆಂದೂ ಮುಗಿಯದ ಪ್ರೇಮ ಬಂಧನದ ಕುರುಹು ನೀನು
ಅಳುವಿನಲ್ಲೂ ನಗುವ ಮೂಡಿಸುವ ಹುಣ್ಣಿಮೆ ಚಂದಿರನ ಮೊಗದವನು
ಕೈಗಳೆರಡು ಚಾಚಿ ಆಕಾಶಕ್ಕೆ ಏಣಿ ಇಟ್ಟಾಗಿದೆ,
ಮಮತೆಯ ಮೆಟ್ಟಿಲು ದೊಡ್ಡದಿದೆ;ಹತ್ತು ಬಾ ಮುಟ್ಟೋಣ ಆಕಾಶವೆಂಬ ತೊಟ್ಟಿಲ್ಲನ್ನು..

-


26 APR 2023 AT 19:50

ಖಾಲಿ ಆಕಾಶವೀಗ ನಕ್ಕಂತಾಯಿತು
ನಕ್ಷತ್ರಗಳಿಗೂ ಮುನಿಸಾಗಿದೆ
ಚಂದ್ರನಿಗೀಗ ಬೇಸಿಗೆ ರಜೆ
ಅಮ್ಮ ತುಂಬಿದ ಮಡಿಲಿಗೀಗ ಒಬ್ಬಂಟಿಯ ಗುರುತು
ಕಾಣದ ಊರಿಗೀಗ ಒಂದೇ ಚಂದಿರ, ಅವನು ಕಾಣುತ್ತಿಲ್ಲವೀಗ..
ಬಾಯರಿಕೆಗೊಂದಿಷ್ಟು ಗುಟುಕು, ಜೀವಕ್ಕೀಗ
ಅದರದ್ದೇ ಹೊಳಪು..
ಅಮ್ಮ ನಿನ್ನ ಮಡಿಲಿನ ಒಣದೆಲೆಯ ಗಂಧ
ತಿರುತಿರುಗಿ ಬಂತು ನೋಡು ನನ್ನೆದೆಯ ಕಡೆಗೆ
ಕಿಟಕಿಯಲ್ಲಿ ಕಂಡ ಆ ಒಂಟಿ ಮುಖ
ಮನ(ರ )ದ ನೆರಳೊಂದಿಗೆ ಸ್ನೇಹ ಬೆಳೆಸಿಕ್ಕೊಳ್ಳಬೇಕೀಗ!

-


22 OCT 2022 AT 14:38

ಎಲ್ಲಿಗ್ ಹ್ವಾರು ನಮ್ ಕುಂದಾಪ್ರ ಕನ್ನಡ ಬಿಟ್ ಕೊಡುಕ್ ಆತಿಲ್ಲ ಅಲಾ.. ಕುಂದಾಪ್ರ ಕನ್ನಡಕೊಂದು ಜೈ🙏

-


10 MAY 2022 AT 17:27

ಹೃದಯ ಯಾಕೆ ಅಗಾಧವಾಗಿ ಕಂಪಿಸೋದು ಹೇಳು
ನಿನ್ನ ಪ್ರೇಮ ಸನಿಹ ಯಾಕೆ ಹಾತೊರೆಯೋದು ಹೇಳು
ಮೊರೆಯೊಂದು ದೇವರಿಗೆ ಕೇಳದೇನು ಹೇಳು
ಅಗೋಚರ ಪ್ರೇಮವೊಂದು ಸಾಗರದಂತೆ ವ್ಯಾಪಿಸಿದ್ದು ನಿನ್ನ ಸನಿಹ ಸಹ್ಯವಾಗಿ, ತೊಳಲಾಟವೇ ಮುಗಿದುಹೋಗಿ ಅಳತೆ ಮೀರಿ ಬೆಳೆದು ನಿಂತ ಪ್ರೇಮ ಮೂರ್ತಿ ನೀನು..
ಜನ್ಮ ಎಂಬ ಹಂಗು ತೊರೆದು ಕ್ಷಣ ಬಿಡದೇ ಪ್ರೀತಿಸುವ ಪ್ರೇಮವೆಂದರೆ ನೀನೇ..

-


9 MAR 2022 AT 17:12

ನೀನು ಸಿಗುವುದಿಲ್ಲ..
ಬಿದ್ದು ಎದ್ದರೂ ನಿನ್ನ ಕೈಯ ಆಸರೆ ಸಿಗಲಿಲ್ಲ
ನೋವ ತುಂಬಿ ಅತ್ತರೂ ಸಾಂತ್ವನವ ನೀನು ತಿಳಿಸಲಿಲ್ಲ
ಕಣ್ಣ ಬಿಂಬ ತಿಳಿಯಲಿಲ್ಲ ನಿನಗೆ
ಉಳಿಕೆ ಕಂಡ ಬೆರಳಣಿಕೆ ಖುಷಿಗಳ ಮೀಸಲಿಡಲೆ ಹಾಗೆಯೇ
ಆದರೂ ನೀನು ಸಿಗುವುದಿಲ್ಲ ಸಿಗಬೇಕೆಂಬ ಇರಾದೆಯು ನನಗಿಲ್ಲ

-


17 FEB 2022 AT 9:04

ಎಷ್ಟೇ ವಿರೋಧವಿರಲಿ ನೀನಿರುವ ಜಗತ್ತು ಸ್ವರ್ಗ ಎನಲೇ...
— % &

-


14 FEB 2022 AT 9:35

ತ್ಯಾಗಕ್ಕೆ ಬೆಲೆ ಇದೆಯೇ..!!— % &

-


29 JAN 2022 AT 22:57

ತೇಪೆ ಹಚ್ಚುವ ಗೋಡೆಗೆ ಬಣ್ಣ ಕುಸುರಿಯ ತೃಷೆ
ಬಾಗಿ ನಿಂತ ಕಂಬವು ಉರುಳಿದ ಮರದ ಕುರುಹು
ಬಾನಿಗಂಟಿದ ಸೋಗೆಗೆ ಸುರಿವ ಬೆಳದಿಂಗಳ ಬೆಳಕು ..
ಮೌನ ತಬ್ಬಿದ ನೆಲಕೆ ಬೇಲಿ ಗುಂಟದ ಹಾದಿ..
ಕಾಯ್ವ ಕಂಗಳ ಕನಲಿಗೆ ಹಸಿಯ ಬೆಂಕಿಯ ತುಣುಕು..
ಬರಲಿವೆ ಮುಂದೆ ಇನ್ನು..ಸಿಗದ ನಿನ್ನೆಗಳು
ಬೀಸಣಿಕೆಯ ಗಾಳಿಗಳು..

-



ಖಾಲಿ ಬುಟ್ಟಿಯೊಳಗೆ |ಹೆಕ್ಕಿ ಹೆಕ್ಕಿ ತುಂಬಿದ್ದು|
ಮನದೊಳಗಿನ ಮಾತು |ಪುಕ್ಕವಾಗಿ ಹಾರಿತು ||

-


Fetching ಪ್ರಿಯಾರಾಗ Quotes