4 AUG 2019 AT 19:57

'ವಿರಹ ಗೀತೆ'

ಹೊತ್ರಂಟೆಯೇ ಮನೆಗೆ ಬಂದೆ
ಮೈಸೂರ್ ಪಾಕ್ ಮಲ್ಲಿಗೆ ಹೂ ತಂದೆ
ಸ್ನಾನ ಮಾಡ್ಕೊಂಡ್ ಸೆಂಟ್ ಹೊಡ್ಕೊಂಡು ಕಾದೆ
ನನ್ನ ಕಣ್ಣಿಗೆ ಕಾಣದೆ ನನ್ನ ಕೈಗೆ ಸಿಗದೆ ಎಲ್ಲೇ ಹೋದೆ
ನನ್ನ ಮುದ್ದಿನ ಹೆಂಡತಿ ನನ್ನ ಮುದ್ದಿನ ಹೆಂಡತಿ...
ನನ್ನ ಚಂದದ ಹೆಂಡತಿ ನನ್ನ ಅಂದದ ಹೆಂಡತಿ...

ರಾತ್ರಿಪೂರ ನಿದ್ದೆ ಇಲ್ಲದೆ
ಹೊರಳಿ ಹೊರಳಿ ನರಳಿದೆ
ವಿರಹದ ಉರಿ ತಾಳದೆ
ಸಿಹಿ ದ್ರಾಕ್ಷಿ ತಿನಿಸದೆ
ನನ್ನ ಉಪವಾಸ ಕೆಡವಿದೆ
ಸನಿಹ ನೀ ಇಲ್ಲದೆ
ನನ್ನ ಮುದ್ದಿನ ಹೆಂಡತಿ ನನ್ನ ಮುದ್ದಿನ ಹೆಂಡತಿ...
ನನ್ನ ಚಂದದ ಹೆಂಡತಿ ನನ್ನ ಅಂದದ ಹೆಂಡತಿ...

ಆಸೆಗಳು ಮಿತಿ ಮೀರಿದೆ
ಅರಳಿ ಅರಳಿ ಕೆರಳಿದೆ
ಈಡೇರದೆ ಮುಕ್ತಿ ಸಿಗದೆ
ನುಗ್ಗೆಕಾಯಿ ಅಂತೆ ಆಗಿದ್ದೆ
ತೊಂಡೆ ಕಾಯಿ ಆಗೋದೆ
ನಿನ್ನ ಮೋರೆ ಕಾಣದೆ
ನನ್ನ ಮುದ್ದಿನ ಹೆಂಡತಿ ನನ್ನ ಮುದ್ದಿನ ಹೆಂಡತಿ...
ನನ್ನ ಚಂದದ ಹೆಂಡತಿ ನನ್ನ ಅಂದದ ಹೆಂಡತಿ...

- ಪಿ.ಆರ್.ಪ್ರದೀಪ್ ಕುಮಾರ್