Praveen Kumar   (PK0077)
92 Followers · 88 Following

ನಕ್ಕು ನಗಿಸುತ್ತಲಿರಿ 😊

PK0077_HappySoul.
Joined 15 October 2018


ನಕ್ಕು ನಗಿಸುತ್ತಲಿರಿ 😊

PK0077_HappySoul.
Joined 15 October 2018
15 FEB 2022 AT 9:48

ಅಡಗಿಸಿಟ್ಟಿರುವೆ ನನ್ನೆಲ್ಲಾ
ಭಾವನೆಗಳನ್ನು ಉಡುಗೊರೆಯಾಗಿ
ನಿನಗೆ ಅರ್ಪಿಸಲು!!
ನಿನ್ನ ಒಲವು ನನ್ನದಾಗಿಸುವ
ಅನಿರೀಕ್ಷಿತ ನಿರೀಕ್ಷೆಯೊಂದಿಗೆ
ಕಾದಿದೆ ಪ್ರೇಮಿಗಳ ದಿನಕ್ಕೆ!!
ತಿರಸ್ಕರಿಸಿ ನೀನು ಮುಂದೆ ನಡೆದಾಗ
ಅರಿವಾಯಿತು ಬಚ್ಚಿಟ್ಟ ಭಾವನೆಗಳ
ಮೌಲ್ಯವು ಬರಿ ಶೂನ್ಯವೆಂದು!!

-


21 DEC 2020 AT 21:41

ಕಿರು ಬೆರಳು ಹಿಡಿದು
ಜೊತೆಯಾಗಿ ಬಂದವಳು
ಕಿರಿದಾದ ಪುಟ್ಟ ಕೈಯಿಂದ
ಕಿರು ಬೆರಳು ಹಿಡಿಯುವ
ಕಂದನ ಕರುಣಿಸಿ, ತಾನು
ಅಮ್ಮಳಾಗಿ ನನಗೆ
ಅಪ್ಪನ ಪದವಿಗೆ ಬಡ್ತಿ
ಕೊಡಿಸರುವ ನನ್ನವಳಿಗೆ
ಶುಭಾಶಯದ ವಂದನೆಗಳು!!

-


13 SEP 2020 AT 15:11

ಪ್ರೀತಿಸಿದರು, ಮೊಹಿಸಿದರು
ನಿನಗೆ ಸಿಗುವುದು ಬರಿ
ನೆನಪುಗಳು ಗೆಳೆಯ,
ಕ್ಷಮೆಯಿರಲಿ..!!

-


24 NOV 2018 AT 10:08

ಜಗದಗಲ, ಬಾನಗಲ, ಭೂವಿಯಗಲ
ನನ್ನ ಮನದಗಲ, ತನುವಿನಗಲ
ಕಣ್ಣೋಟ್ಟ ಹರಡಿದಷ್ಟಗಲ, ಅದರಾಚೆಗೆ!!

ನಿನ್ನನೇ ಹುಡುಕಿ ಸುಸ್ತಾಗಿ
ಬಸವಳಿದು ಕುಳಿತಾಗ
ಹೃದಯ ಬಡಿತವು ಸಾರಿ ಹೇಳಿತ್ತು!!

ನಾನಿರುವುದಿಲ್ಲೇ ನಿನ್ನ ಹೃದಯದಲ್ಲಿ
ನಿನ್ನ ಉಸಿರಲ್ಲಿ ಒಂದಾಗಿರುವೆ
ಹುಡುಕದಿರು ನನ್ನ ಬೇರೆಲ್ಲೂ ಎಂದು!!

-


4 NOV 2021 AT 9:34

ಮನೆ ಮನಸ್ಸು ಬೆಳಗುವ
ಪ್ರೀತಿ ವಿಶ್ವಾಸದ ದೀಪಗಳು
ಜಗಮಗಿಸಲ್ಲಿ ನಿಮ್ಮ ಬಾಳಲಿ.

ಸರ್ವರಿಗೂ ಬೆಳಕಿನ ಹಬ್ಬ
ದೀಪಾವಳಿಯ ಶುಭಾಶಯಗಳು.

-


2 NOV 2021 AT 5:57

ಸ್ವಾರ್ಥ ಬದುಕನ್ನು ತೊರೆದು,
ಸಾರ್ಥಕ ಬದುಕನ್ನು ಬಾಳಿರಿ.

ಅರ್ಥವಿರಲ್ಲಿ ಬದುಕಿ ಬಾಳಿದ
ನಿನ್ನೆಯಗಳಿಗೆ, ಬದುಕುವ ನಾಳೆಗಳಿಗೆ.

-


15 OCT 2021 AT 23:47

ಭಾವನೆಗಳು ಎಂದಿಗೂ ಸುಂದರ,
ಹಾಗಂತ ಒಬ್ಬರ ಭಾವನೆಗಳನ್ನು
ನಿಮ್ಮ ಸ್ವಾರ್ಥಕ್ಕಾಗಿ ಬಳಸಬೇಡಿ.

-


25 JUL 2021 AT 15:40

ಪ್ರೀತಿಸುವುದು ಸುಲಭ
ದ್ವೇಷಿಸುವುದು ಸ್ವಲ್ಪ ಕಷ್ಟ
ಪ್ರೀತಿಸಿದವರನ್ನು ದ್ವೇಷಿಸುವುದು
ಕಡುಕಷ್ಟ ಈ ಹೃದಯಕ್ಕೆ..!!

-


25 JUL 2021 AT 15:10

If you get the feel of you are being used by the people around you, chill and say that you are useful to someone in their need.

Be The Person Who You Are
And Don't Try to Become One
Of those USER.

-


19 JUL 2021 AT 11:09

ನಮ್ಮವರು ಹಲವರು
ನನ್ನವರು ಕೆಲವರು
ಬಾಳ ಪಯಣದಲ್ಲಿ
ಕೊನೆಯಲ್ಲಿ ಉಳಿದವರು
ನಿನ್ನವರು, ಕೊನೆ ಸೇರಲು
ಜೊತೆ ಪಯಣಿಸಿದವರು
ನಮ್ಮವರು...!!

-


Fetching Praveen Kumar Quotes