ಮೊನ್ನೆ ರಾತ್ರಿಯಿಂದಲೂ ನನ್ನ ಜನ್ಮದಿನಕ್ಕೆ ಹಾರೈಕೆಗಳ ಸುರಿಮಳೆ ಸುರಿಸಿದ್ದೀರಿ, ಥೇಟು ಬಿಡದೇ ಸುರಿಯುತ್ತಿರುವ ಈ ವರ್ಷಧಾರೆಯಂತೆಯೇ. ನಿಮ್ಮಗಳ ಹಾರೈಕೆ ನನ್ನ ಮತ್ತಷ್ಟು ಆರ್ದ್ರಗೊಳಿಸಿದೆ...
ಮತ್ತೇನಿಲ್ಲ, ಆಯಸ್ಸಿನಲ್ಲಿ ಮತ್ತೊಂದು ವರುಷ ಕಡಿಮೆಯಾಗಿದೆ. ಜವಾಬ್ದಾರಿಗಳು ಹೆಚ್ಚಿವೆ. ಯಾವತ್ತೂ ಹುಟ್ಟುಹಬ್ಬಕ್ಕಂತ ಏನೂ resolutions ತಗೊಂಡಿಲ್ಲ. ಆದ್ರೆ ಈ ವರ್ಷ ಒಂದಷ್ಟು ನಿರ್ಧಾರ ತಗೊಂಡಿದ್ದೀನಿ. ನನ್ನ ನಾನು ಕಂಡುಕೊಳ್ಳದಷ್ಟು ಕಳೆದು ಹೋಗಿದ್ದೀನಿ. ಮತ್ತೆ ನನ್ನ ಹುಡುಕಿಕೊಳ್ಳುವ ನಿರ್ಧಾರ, ನನ್ನ ನಾನು ಪ್ರೀತಿಸಿಕೊಳ್ಳುವ ನಿರ್ಧಾರ, ಆದಷ್ಟೂ ಕೋಪ ಕಡಿಮೆ ಮಾಡಿಕೊಂಡು ಎಲ್ಲ ಸಮಯದಲ್ಲೂ ಸಮಾಧಾನದಿಂದಿರುವ ತೀರ್ಮಾನ ತಗೊಂಡಿದ್ದೀನಿ. ಸಾಧ್ಯ ಆದ್ರೆ ಮೊದಲಿನ ಹಾಗೆ ಪುಸ್ತಕ ಓದಬೇಕು. ಅಕ್ಷರಗಳು ಮತ್ತೆ ಕೈ ಹಿಡಿಯಬಹುದೇನೋ? ಎದೆಯಲ್ಲಿ ಕವಿತೆಯೊಂದು ಅರಳಬಹುದೇನೋ? ಗೊತ್ತಿಲ್ಲ. ಸದ್ಯಕ್ಕೆ ಓದು, ಬರಹ ಯಾವುದೂ ಸಾಧ್ಯವಾಗ್ತಿಲ್ಲ. ಓದು ಅನ್ನೋದು ನನ್ನ ಪಾಲಿಗೆ ಧ್ಯಾನ, ಆ ತನ್ಮಯತೆ, ಅಂತ ಮನಸ್ಥಿತಿ ಸದ್ಯಕ್ಕಿಲ್ಲ. ಉಳಿದಂತೆ ಬದುಕು ಹೇಗೆ ಕರೆದೊಯ್ಯುತ್ತೋ ಹಾಗೆ ಬದುಕೋದು ರೂಢಿಯಾಗಿದೆ ಈಗ.
ಈ ಬದುಕು ಕೊಟ್ಟಿದ್ದೆಲ್ಲವನ್ನೂ ಖುಷಿಯಿಂದಲೇ ಸ್ವೀಕರಿಸ್ತೀನಿ. ನನ್ನ ಒಂದಷ್ಟು ಅವಗುಣಗಳನ್ನು ಆದಷ್ಟೂ ತಿದ್ದಿಕೊಳ್ತೀನಿ. ನಕಾರಾತ್ಮಕ ಯೋಚನೆಗಳನ್ನೆಲ್ಲ ಕಡಿಮೆ ಮಾಡ್ಕೋತೀನಿ. ಮತ್ತಷ್ಟು ಗಟ್ಟಿಯಾಗ್ತೀನಿ. ಈ ಕ್ಷಣ ಉಸಿರಾಡ್ತಾ ಇದ್ದೀನಿ ಅಂದ್ರೆ ಅದಕ್ಕೆ ಕಾರಣವಾದ ಎಲ್ಲಕ್ಕೂ ಧನ್ಯವಾದ...
ನನ್ನ ಜನ್ಮದಿನದಂದು ಒಂದರೆ ಕ್ಷಣ ನನ್ನ ನೆನಪು ಮಾಡಿಕೊಂಡು ಚಂದಗೆ
ಹಾರೈಸಿದ ಎಲ್ಲರಿಗೂ ಪ್ರೀತಿ ....🙏❤️
#ಯು-
ಮನಸಿನಲಿ ಉದಯಿಸಿದ ಭಾವನೆಗಳಿಗೆ
ರೂಪವನು ನೀಡುವುದು ಕವಿತೆ
ತನುವಲಿ ಮೂಡಿದ ಆಯಾಸವನು
ಸರಿಪಡಿಸಿ ತೀಡುವುದು ಕವಿತೆ
ಧನಕನಕಕೆ ಸಮವಾದದು ಧರೆಯಲಿ
ಕವನಕಾಂತಿ ಒಂದೇ ತಿಳಿದಿದೆಯೇ
ಕನಲಿಕೆಯ ಕಳೆದು ಮನುಜಮತಿಗೆ
ವಿನೋದ ತೋಡುವುದು ಕವಿತೆ
ಇನತಾನು ಉಷಾಕಾಲದ ಬೆಳಕನು
ಪಸರಿಸಿ ಮುದವನು ಕೊಡುವಂತೆ
ಭಾನುತೇಜ ಹರಡಿಸಿ ರಸಿಕಸುಜನರ
ಎದೆಯಲಿ ಹೂಡುವುದು ಕವಿತೆ
ಸೋಮನ ಶೀತಲ ತೋಷವನು
ತರುವುದು ಲೋಕದಲಿ ನೂರಾರು
ಭಾಮೆಯ ಸರಸದಂತೆ ಸಮೀರ
ಸುಖಗೀತೆ ಹಾಡುವುದು ಕವಿತೆ
ಕವಿಗಳು ಕಂಡಿರುವ ಕನಸುಗಳ
ನನಸಾಗಿಸುವ ದಾರಿಯಿದು ಮುರಳಿ
ಕಿವಿಗಳಿಗೆ ಆನಂದ ಹುರುಪನು
ಕರುಣಿಸಲು ಬೇಡುವುದು ಕವಿತೆ
#ಯು-
ಹೊಸವರ್ಷದ ಹೊಸ್ತಿಲಲ್ಲಿ...
ವರ್ಷದ ಕೊನೆಯ ಪುಟವನ್ನು ತೆರೆದಿದ್ದೇನೆ
ಕಣ್ಣ ಮುಂದಿದೆ ಹೊಸವರ್ಷದ ಬೆಳಕು
ಯೋಚಿಸುತ್ತಾ ಕುಳಿತೆ ಹಳೆಯ ನೆನಪುಗಳ ಪುಟ ತೆರೆದು
ಒಂದೊಂದೇ ಪುಟ ತೆರೆದು ಇಣುಕಿದೆ
ಸಂತೋಷದ ಗಳಿಗೆಗಳಿಗೆ ಗಾಳ ಹಾಕುತ್ತಾ....
ಒಂದೇ ಒಂದು ಪುಟವೂ ದೊರೆಯಲಿಲ್ಲ,
ಪುಟವಿರಲಿ ಜೀವನ ಕಾವ್ಯದ ಒಂದು ಸಾಲಿನಲ್ಲೂ
ಸಿಗದು ಸುಖ-ನೆಮ್ಮದಿಯ ಪದಗಳು
ಎಲ್ಲವೂ ನೋವಿನ ಗೆರೆಗಳೇ!
ಶೋಕಗೀತೆಯ ಸಾಲುಗಳೇ!
ಸ್ವಾರ್ಥ,ದುರಾಸೆ,ತಾತ್ಸಾರ,ಮತ್ಸರ
ಮಾಸಗಳ,ಋತುಗಳ ದಾಟಿ ಬಂದಿದ್ದೇನೆ
ಹೊಸ ಉತ್ಸಾಹದಿ,ಹೊಸ ಆಕಾಂಕ್ಷೆಯಿಂದ
ಎಲ್ಲವನ್ನೂ ಮೂಲೆಗೆ ತಳ್ಳಿದ್ದೇನೆ
ಸೋಲುಗಳಿಂದ ಪಾಠ ಕಲಿತಿದ್ದೇನೆ
ಹೊಸ ಭರವಸೆಯಿಂದ ಸ್ವಾಗತಿಸಲು ನಿಂತಿದ್ದೇನೆ
ವರ್ಷದ ಕೊನೆಯ ಪುಟದಲ್ಲಿ
ಹೊಸವರ್ಷದ ಹೊಸ್ತಿಲಲ್ಲಿ.....
#ಯು-
ನೀ ಜೊತೆ ಇಟ್ಟ ಪ್ರತಿ ಹೆಜ್ಜೆಗಳು ಪ್ರೀತಿಯ ಸಂಕೇತದ
ಗುರುತುಗಳು..!
ನಿನ್ನ ನೆನಪುಗಳು ಕಾಡಿ ಕಾಡಿ ಭಾರವಾಯಿತು ಮನ
ನೀ ಇಲ್ಲದೇ ಹಾಕಿದ ಹೆಜ್ಜೆಗಳು..!!
#ಯು-
ದಣಿವು ಅವಳಿಗೆ ಅರಿಯದು
ಒಂಭತ್ತು ತಿಂಗಳು ಹೋತ್ತುಕೊಂಡು
ಕಾಯುವವಳು ಅವಳು..!
ಕರುಳು ಕುಡಿಯ ನೋಡಲೆಂದು
ಎಷ್ಟು ಸಮಯ ಕಾಯಿಸಿದರೂ
ತಾಯಿಯ ತಾಳ್ಮೆಗೆ ಕೊನೆಯಿಲ್ಲ
ಎಂದೆಂದೂ..!!❤️
#ಯು-
ಅಂದು ನಿನಗೆ ಯಾರಿಲ್ಲ
ನನ್ನ ಹೊರತು ಎಂದು ಅಪಹಾಸ್ಯ
ಮಾಡುತ್ತಿದ್ದ ನನ್ನ ನೆರಳು...!
ಇಂದು ಎಲ್ಲಾರು ಇದ್ದರು ನಿನಗಾಗಿ
ನಾ ಇದೀನಿ ಅಂತ ಒಬ್ಬರು ನಿನ್ನಿಂದೆ
ಬರಲಿಲ್ಲ ಎಂಬ ಸತ್ಯವ ತಿಳಿಸಿದೆ...!!
#ಯು-
ಹೇಗಿದ್ದೀಯಾ,ಏನ್ ಮಾಡುತ್ತಿದ್ದೀಯಾ,ಊಟ ಆಯ್ತಾ,
ಎಲ್ಲಾ ಓಕೆ ನಾ, ಸರಿ ನಾ,ಏನಾದ್ರೂ ಇದ್ರೆ ಹೇಳು,
ಏನಾದ್ರು ನಾನಿದ್ದೀನಿ,ನೀ ಜೊತೆಗೆ.ನೀ ಚನ್ನಾಗಿರು ಸಾಕು .
ಇಷ್ಟೇಲ್ಲಾ ಪ್ರಶ್ನೆ, ಆಡಿದ ಮಾತುಗಳಿಗೆ ಪ್ರತಿಯುತ್ತರ
ಕೊಡದೆ ಹೊರಟವಳಿಂದ ಮಾತು ಕಸಿದು ಹೋದೆಯಲ್ಲ
ದೂರವಾಗುವ ಇಚ್ಛೆ ಇದ್ದವನು ಇಷ್ಟೇಲ್ಲಾ ಕಾಳಜಿ ಪ್ರೀತಿ
ಕೊಡಬೇಕಿತ್ತೇ ಎಂದು ಹೇಳಲಲ್ಲಾಗಾದ
ಕೇಳಲಲ್ಲಾಗಾದ ಅಸಹಾಯಕತೆ ನನ್ನದು...
ಅಂದು ಕುರುಡಾದ ಸ್ನೇಹ, ಪ್ರೀತಿಗೆ ಬೆಳಕು ಸಿಕ್ಕಿದೆ ಮತ್ತೆ
ಏನಾನು ಅಂದಾಜು ಮಾಡದಿರೆಂದು ತಿಳಿ ಹೇಳುತ್ತೀದೆ
ನೋವಿನಲ್ಲಿ ಬೆಂದು ನೆಲಕ್ಕೆ ಬಿದ್ದು ಇಗಾಷ್ಟೆ ಎದ್ದೆಳುತ್ತೀರುವ
ಮನಸ್ಸು...
#ಯು-
"ಅನುಮಾನ" ಮತ್ತು "ಅವಮಾನ" ಬರೀ ಒಂದಕ್ಷರ ವ್ಯತ್ಯಾಸವಿರುವ ಈ ಪದಗಲಿಗೆ ಸಾವಿರಾರು ಹೃದಯದಗಳು ಛಿದ್ರ ಮಾಡುವಷ್ಟು "ಶಕ್ತಿ" ಇದೆ...!
#ಯು-