ಕೆಲ ಮಂದಿಗೆ ವ್ಯವಹಾರದ ಭಾಷೆ ಬಿಟ್ರೆ, ಭಾವನೆಗಳ ಭಾಷೆ ಅರ್ಥವಾಗ್ವಲ್ದು
ವ್ಯವಹಾರದಲ್ಲೇ ಮಾತಾಡೋರು
ಭಾವನೆಗಳ ಭಾಷೆಗೆ ಎಷ್ಟು ಬೆಲೆ ಕೊಡ್ಬೋದು..?
ಪ್ರತಿಮಾ......✍️-
ಪದಗಳ ಜೊತೆಗಿನ ಅಲೆದಾಟ
ಸುರುಳಿಯಲಿ ಸುತ್ತಿದ ಸುಳಿದಾಟ
ಸುಳಿಯೊಳು ಸಿಲುಕಿದ ಸೆಣೆಸಾಟ
ಕಾಣದೂರಿನಲ್ಲಿ ಭಾವರಹಿತ ನರಳಾಟ
ಇದ್ದೂರಲ್ಲೇ ಇದ್ದರೆ ಆಗದು ಪರದಾಟ
ಭಾವನೆಗಳ ನಡುವೆ ಇರದು ಹೊಡೆದಾಟ
ಅಂತ್ಯವಾಗುವುದೆಂದು ನಿನ್ನ ಹುಡುಕಾಟ?
ಪ್ರತಿಮಾ...✍️-
ತಮ್ಮ ಬಗ್ಗೆಯೇ ಸ್ಪಷ್ಟತೆ ಇರದ ವ್ಯಕ್ತಿಯು ಆಡುವ ಮಾತು, ಮಾಡುವ ಕೃತ್ಯ ಕುದಿಯುವ ನೀರಲ್ಲಿ ಕಾಣುವ ಪ್ರತಿಬಿಂಬದಂತೆ..
ತಾವೇನು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದ ದುಃಖಿತರು...-
ನಮ್ಮಲ್ಲಿರುವ ಸಕಾರಾತ್ಮಕ ಕಂಪನಗಳ ಪ್ರಭಾವ...
ನಕಾರಾತ್ಮಕ ಅಲೆಗಳು ನುಗ್ಗಿ ಬಂದು ಧನಾತ್ಮಕ ಚಿಂತನೆಗಳನ್ನು ಕೆಡಿಸುವ ಪ್ರಯತ್ನ ಮಾಡದಂತಿರಬೇಕು.
ಪ್ರತಿಮಾ ....✍️-
ಧಿಮಾಕ್ ಇದ್ದಲ್ಲಿ ಪ್ರೀತಿ ನಿಲ್ಲಲ್ಲ,
ದಿಮಾಗ್ ಇದ್ದಲ್ಲಿ ಧಿಮಾಕ್ ಇರಲ್ಲ.
ಪ್ರೀತಿ ಬೇಕು ಅಂದ್ರೆ ಧಿಮಾಕ್ ಬಿಡಿ ,
ದಿಮಾಗ್ ಇಟ್ಕೊಂಡ್ ಪ್ರೀತಿ ಮಾಡಿ.
ಪ್ರತಿಮಾ ಭಟ್ ...✍️
-
ಕಳೆದುಕೊಳ್ಳುವುದಾದರೆ ಖುಷಿಯಿಂದ ಕಳೆ
ನಿನ್ನಲ್ಲಿರುವ ದುರ್ಗುಣಗಳನ್ನು ,
ಬುಡಸಮೇತ ನಶಿಸಿಹೋಗುವಂತೆ.
ಪಡೆದುಕೊಳ್ಳುವುದಾದರೆ ಖುಷಿಯಿಂದ ಪಡೆ
ನೀ ಕಂಡ ಸದ್ಗುಣಗಳನ್ನು,
ಪೋಷಿಸಿ, ಅದು ಮರವಾಗುವಂತೆ.
ಪ್ರತಿಮಾ ಭಟ್..... ✍️
-
ಅಲ್ಬಮ್ ಅಳ್ಸೋದ್ರೂ,
ಮೊಬೈಲಲ್ಲಿ ಮರೆಯಾದ್ರೂ,
ಫೋಟೋಸ್ ಫೇಡಾದ್ರೂ,
ಮನಸಲ್ಲಿ ಮನೆಮಾಡಿದ
ಕನಸು ನನಸುಗಳ ನೆನಪುಗಳು
ಹಳಸದೆ, ಅಳಿಯದೆ,
ಹಚ್ಚಹಸುರಾಗೇ ಉಳಿಯುವವು.
ಪ್ರತಿಮಾ ....✍️-
ಪರರ ನಿಂದಿಸುವ ಮುಂಚೊಮ್ಮೆ
ಯೋಚಿಸು ಓ ಮನವೆ...
ಓ ಮನವೆ..ಯೋಚಿಸು ನೀ ಇನ್ನೊಮ್ಮೆ.
ನಿಂದಿಸುವ ಭರದಲ್ಲಿ, ನಿನ್ನವರ ಎದುರಲ್ಲಿ,
ನಿನ್ನ ವ್ಯಕ್ತಿತ್ವದ ರೂಪ ಕುರೂಪವಾಗದಿರಲಿ.
ನಿನ್ನ ನಂಬಿಕೆಯ ಕನ್ನಡಿ ಬಿರುಕಾಗದಿರಲಿ.
ಪ್ರತಿಮಾ ಭಟ್.....✍️
-
ಅಪ್ರಿಯ ಸತ್ಯ
ಪ್ರಿಯರಾದವರಿಗೆ ಅಪ್ರಿಯವಾಗುವುದಾದರೆ,
ಅಂಥ ಸತ್ಯ
ಸುದ್ದಿಯಾಗದೇ ಸುಮ್ಮನಿರುವುದೇ ಲೇಸು.-
ಹಣ ಕಂಡ್ರೆ ಗುಣ ಮರೆಯೋ ಕಾಲ...
ಲಾಭ ಸಿಕ್ರೆ ಸಂಬಂಧ ಕಳ್ಕಳೋ ಕಾಲ...
ಸತ್ಯ ಮುಚ್ಚಲು ತಪ್ಪು ಹೊರಿಸೋ ಕಾಲ...
ಸ್ವಾರ್ಥಕ್ಕೆ ಪರ ನಿಂದೆಯ ಮಾಡುವ ಕಾಲ...
ಪ್ರಭಾವಿತರು ಇದ್ದಲ್ಲಿ ಮುಗಿಬೀಳುವ ಕಾಲ.
ಪ್ರತಿಮಾ ...✍️-