Pratheek   (Pratheek)
256 Followers · 218 Following

🖤ಅನಂತದಲ್ಲಿ ಏಕಾಂತ🖤 l love agriculture. From:Mangalore, Karnataka.
Joined 11 December 2018


🖤ಅನಂತದಲ್ಲಿ ಏಕಾಂತ🖤 l love agriculture. From:Mangalore, Karnataka.
Joined 11 December 2018
10 FEB 2022 AT 18:51

ಮಂದಹಾಸ, ಮುಗುಳು ನಗೆಯ ಇನ್ನೆಲ್ಲಿ ಕಾಣಲಿ
ಆ ಮೊಗವೆ ಕಾಣದಾದಾಗ!
ಜೀವನ-ಕಥೆ ಪಾಠಗಳ ಇನ್ನೇನು ಕೇಳಲಿ
ಆ ಧ್ವನಿಯೇ ಕೇಳದಾದಾಗ!
ತಿಂಡಿ-ತಿನಿಸುಗಳ ಇನ್ನೆಲ್ಲಿ ಹುಡುಕಲಿ
ಆ ಜೋಳಿಗೆಯೇ ಇಲ್ಲವಾದಾಗ!
ತುಂಟಾಟದ ಉಪಟಳ ಇನ್ನಾರಿಗೆ ನೀಡಲಿ
ನೀವೇ ಮರೆಯಾದಾಗ!— % &

-


2 SEP 2021 AT 0:52

ಇಲ್ಲ ಮನುಜ ಇಲ್ಲಿ ನಿನ್ನ
ಒಳ್ಳೆಯತನಕ್ಕೆ ಬೆಲೆ,
ಇದು ಸ್ವಾರ್ಥಗಳಿಂದ ತುಂಬಿ
ತುಳುಕುತ್ತಿರುವ ನೆಲೆ.. !
ಇಲ್ಲ ಮನುಜ ಇಲ್ಲಿ ನಿನ್ನ
ಕಠಿಣ ಶ್ರಮಕ್ಕೆ ಬೆಲೆ,
ಇದು ಗೋಸುಂಬೆಗಳು ಬಣ್ಣ
ಬದಲಿಸೊ ನೆಲೆ..!
ಇಲ್ಲ ಮನುಜ ಇಲ್ಲಿ ನಿನ್ನ
ಸೋತ-ಪೆಚ್ಚುಮೋರೆಗೆ ಬೆಲೆ,
ಇದು ಒಳಮನಸ್ಸಿನಾಟದ
ಗೆಲುವಿನ ನೆಲೆ..!
ಇಲ್ಲ ಮನುಜ ಇಲ್ಲಿ ನಿನ್ನ
ನಿಷ್ಕಲ್ಮಶ ಮನಸ್ಸಿಗೆ ಬೆಲೆ,
ಇದು ಎಲುಬಿಲ್ಲದ ನಾಲಿಗೆಯ
ಹೊರಳಾಟಕ್ಕೆ ತಲೆಬಾಗುವ ನೆಲೆ..!
ಇಲ್ಲ ಮನುಜ ಇಲ್ಲಿ ನಿನ್ನ
ಮುಗ್ಧತೆಗೆ ಬೆಲೆ,
ಇದು ಕೃತಕ ನಗೆಗೆ
ಮರುಳಾಗೊ ನೆಲೆ..!

-


17 MAY 2021 AT 23:33

Thank you for the Rose 🌹 gift

-


2 MAY 2021 AT 22:12

my mistakes and failures!

-


8 JAN 2021 AT 13:36

ನಾ ಮೀನು ನೀ ನೀರು,
ನನ್ನೀ ಉಸಿರಿಗೆ ನೀನೇ ಆಸರೆ..
ನನ್ನೆಲ್ಲಾ ಕನಸಿಗೆ ನಿನ್ನದೇ ಸಹಕಾರ..
ನನ್ನೀ ಪಯಣಕೆ ನೀನೇ ದಾರಿದೀಪ..
ನನ್ನೆಲ್ಲಾ ನೋವುಗಳಿಗೆ ನಿನ್ನದೇ ಸಾಂತ್ವಾನ..
ನನ್ನೀ ಎದೆಬಡಿತಕೆ ನೀನೇ ಆಧಾರ..
ನನ್ನೆಲ್ಲಾ ಯಶಸ್ಸಿಗೆ ನಿನ್ನದೇ ಹಾರೈಕೆ..
ನನ್ನೀ ಜೀವಕೆ ನೀನೇ ಆಶ್ರಯ..!
ನಾ ನೀರು ನೀ ಮೀನು..!!

-


5 NOV 2020 AT 19:23

ನನ್ನದೊಂದು ಪಯಣ...
ಮರಳುಗಾಡಿನಲ್ಲಿ.,
ಜೊತೆಗಾರನಾಗಿ ನೆರಳು
ಸಹಕರಿಸದ ಸುಡು ಬಿಸಿಲಿನಲ್ಲಿ.,
ಹಿಂದೊಂದು ಕಾಲದ
ಕಷ್ಟದ ಕಹಿ ನೆನಪುಗಳಲ್ಲಿ.,
ಕಂಡೆ ನಿನ್ನ ಕೊಲ್ಮಿಂಚಿನ ಕಣ್ಣೋಟವ
ಆ ಬಿರುಬಿಸಿಲಿನಲ್ಲಿ.,
ಪಡೆದೆ ನಿನ್ನ ಕೆಂದುಟಿಯ ನಗುವ
ನನ್ನಾಸೆರೆಯಾಗಿ.,
ಬಂದೆ ನೀ ನನ್ನ ಬಾಳಿನ ತೇಜಸ್ವಿನಿಯಾಗಿ..!

-


4 OCT 2020 AT 14:45

Hard work is the only thing which is not going to hurt you.,
It stays with you forever.,
Everything else is a temporary..!!

-


7 AUG 2020 AT 10:39

ಸರಿಯಲ್ಲವೆಂದು ತಿಳಿದರೂ
ಹೇಗಿರಬಹುದೆಂಬ ಕುತೂಹಲ..
ಹೊರಟುಬಿಡಲೇ ಎಂದರೆ
ಇನ್ನೊಂದು ಘಳಿಗೆಗೆ ಕಾಯುವಿಕೆ..
ಕ್ಷಮಿಸಿಬಿಡುವೇ ಎಂದರೂ
ನಾನೇ ಏಕೆ ಅನ್ನೊ ಅಹಂ..
ಕೇಳಿಬಿಡಲೇ ಎಂದರೆ
ತಪ್ಪುತಿಳಿಯಬಹುದೇ ಎನ್ನೋ ಕಳವಳ..
ಇಂದೇ ಮಾಡಿ ಮುಗಿಸುವೆ ಎಂದರೂ
ನಾಳೆ ಇದೆ ಅನ್ನೊ ಆಲಸ್ಯ..
ಯುದ್ಧ,ಮೌನ ಮನಸ್ಸಿನೊಳಗೊಂದು ಘೋರ ಯುದ್ಧ..!!

-


28 JUL 2020 AT 22:17

ನೀ ಕಸಿದುಕ್ಕೊಂಡು ಹೋದೆ..!

-


27 JUL 2020 AT 14:39

ನೀರ ಮೇಲಿನ ಗುಳ್ಳೆ ತಾನಾಗಿದ್ದರೂ
ಇಡೀ ಸಮುದ್ರವೇ ತಾನೆಂಬ ಹುಚ್ಚು ಭ್ರಮೆ..
ಪಂಚಭೂತಗಳಲಿ ಲೀನವಾಗುವ ದೇಹ ತನ್ನದಾದರೂ
ತಾನೊಬ್ಬನೇ ಶಾಶ್ವತವೆಂಬ ಕೀಳು ಕಲ್ಪನೆ..
ಸಾಕೇನಿಸುವಷ್ಟು ಇದ್ದರೂ
ಇನ್ನಷ್ಟು ಬೇಕೆನ್ನುವ ದುರಾಲೋಚನೆ..
ಕೊಡಲು ತಂದಿದ್ದೇನಿಲ್ಲವಾದರು
ಅವರು ಪಡೆದಿದೆಲ್ಲ ತನ್ನಿಂದಲೇ ಎನ್ನೋ ಸಂಕುಚಿತ ಭಾವನೆ..
ಇದು “ಮನುಜ ಮನದ ಒಳಗನ್ನಡಿ"

-


Fetching Pratheek Quotes