ಬಿಡಲೂ ಬಿಡದ ಬೀಡಿನಲ್ಲಿ
ಬೇಕಾಗಿ ನಾನಿಲ್ಲ...
ಬೇಕಾಗಿ ಇದ್ದಾಗ ನೀನಿಲ್ಲ
ಕೈ ಹಿಡಿದು ಬಂದ ಅಪ್ಸರೆ
ಹಸಿವಾದ ಹೃದಯಕ್ಕೆ ಉಣಬಡಿಸಿ
ಕೈ ತುತ್ತು ಕೊಟ್ಟು
ನಸು ನಕ್ಕಿ ಒಂದು ನೋಟ ಬೀರಿತ್ತು
ದಾರಿ ಬೇರೆ ಇದ್ದರೂ ನಾ ಬರುವೆ ಅಂದಳು
ಸಪ್ಪೆ ಮೋರೆಯೊಳು ನಗು ತಂದಳು ಅವಳು
ಕಾರ್ಮೋಡ ಕವಿದಿದೆ ಆದರೂ
ಸಣ್ಣ ಹಣತೆ ಹಚ್ಚಿ ಕಾದಿರುವಳು ಅವಳು
ಏನಿದು ತಳಮಳ ಎತ್ತ ದಿಕ್ಕಿನ ಪಯಣ ಸರಿ ...
-
ಬರೆಯಲು ಬಾಕಿ ಏನೂ ಇಲ್ಲ
ಎಲ್ಲ ನೀ ದೋಚಿರುವಾಗ...
ಫಕೀರನ ಬಳಿ ಬಾಕಿ ಇದ್ದದ್ದೇ
ಒಂದು ಸವಿ ಕಣ್ಣೋಟ
ಒಂದು ಸಿಹಿ ನಗು...
-
ನೆನಪಿದೆಯಾ ...ಬರಿಗಾಲ ಓಟ
ನೆನಪಿದೆಯಾ ...ಕಲ್ಲು ಮಣ್ಣಿನ ಆಟ
ನೆನಪಿದೆಯಾ ...ಹಸಿವಿನ ನೋಟ
ಇದೆಲ್ಲವೂ ಕಲಿಸಿತ್ತು ಜೀವನದ ಪಾಠ
ಕನ್ನಡ ಮಾಧ್ಯಮದಿಂದ ಆಂಗ್ಲ ಮಾಧ್ಯಮ
ಅರ್ಥವಾಗದ ಪಾಠ ಪುಸ್ತಕಗಳು...
ಹರಿದ ಚಡ್ಡಿಯಿಂದ ಮುಕ್ಕಾಲು ಪ್ಯಾಂಟು
ಎಲ್ಲವನ್ನೂ ಪಿಳಿ ಪಿಳಿ ಕಣ್ಣಿನಿಂದ
ಮುಗ್ಧತೆಯಿಂದ ನೋಡಿದ್ದೆ
ಸಾಂಬಾರಿಗೆ ಸಾಲಾಗಿ ಬನ್ನಿ ...ಶಾಲೆಯ ಮಧ್ಯನ್ನದ ಊಟಾ...
ಪಾಠದ ಮದ್ಯೆ ಇದೆಲ್ಲವೂ ಕಲಿಸಿತ್ತು ಪಾಠ..
ಧನ್ಯವಾದಗಳು ...
ಕಲಿಸಿದ ಎಲ್ಲ ಪಾಠ ನೆನಪಿದೆ..
ಇನ್ನೇನಿದ್ದರೂ ಹೊಸ ಅಧ್ಯಾಯ ಬರೆಯ ಬೇಕಿದೆ
-
ಏಳು ಬೀಳು ಸಹಜ ಅಂತಾರೆ ಜನ
ಆದ್ರೆ ಬೀಳೋದನ್ನೆ ಕಾಯ್ತಾ ಇರ್ತಾರೆ
ಕೆಲವರು ಬಿದ್ದಾಗ ಕೈ ಕೊಡ್ತಾರೆ
ಇನ್ನ ಕೆಲವರು ಕೈ ಹಿಡಿತಾರೆ
-
ನೆನಪಿದೆ ...
ಓರೆ ಕಣ್ಣಲ್ಲಿ ನನ್ನ ನೋಡಿದ್ದು ನೆನಪಿದೆ
ಮುಗುಳು ನಗುವಿಗೆ ಕಾರಣವಾದದ್ದು ನೆನಪಿದೆ
ಮುಂಗುರುಳು ಸನಿಹ ಬಯಸಿದ್ದು ನೆನಪಿದೆ
ನೀ ಕಾಣದ ದಿನಗಳ ಬವಣೆ ನೆನಪಿದೆ
ನಡೆದ ಹೆಜ್ಜೆಗಳ ಕುರುಹು ನೆನಪಿದೆ
ನೆನಪಿದೆ...
-
ಬೆರಳುಗಳು ಬೇಡಿದ ಬಯಕೆ
ಕಣ್ಣುಗಳಲ್ಲಿ ಈಡೇರಿಸಿದ್ದೇನೆ
ಎನ್ನೀನು ಕೇಳಬೇಡ
ಕಣ್ಣೀರಿನ ಕೋಡಿ ಹರಿಸಿದ್ದೇನೆ...
-
ನೆನಪಿರುವ ಬಾಲ್ಯ..
ಹರಿದ ಚಪ್ಪಲಿ....
ಯಾರದೋ ಹಾಕಿ ಬಿಟ್ಟ ಕೊಟ್ಟ ಅಂಗಿ
ಬೈಗುಳದ ಮಾತು
ಅನ್ನದ ತಟ್ಟೆಯ ಮುಂದೆ ಬೈಗುಳದ ಮಾತು
ಅಮ್ಮನ ಬೆತ್ತದ ರುಚಿ ದಿನ ಒಂದಕ್ಕೆ ಒಂದರಂತೆ
ಸಂಜೆ ಕಾಣುವ ಅಪ್ಪನ ಮುಖ
ಎರಡು ಬಿಸ್ಕಿಟ್ ಅರ್ಧ ಘಂಟೆ ತಿನ್ನುವ ಸಂಜೆ
ಬೂಟು ಪಾಲಿಶ್ ಚಿಕ್ಕಪ್ಪನ ಆಫೀಸಿಗೆ ತಯಾರಿ
ಬೆಳಗ್ಗಿನ ತೋಟದ ದರ್ಶನ ...
ಕೆಲದಿನ ಕ್ರಿಕೆಟ್ ಕೆಲದಿನ ಈಜು
ವರ್ಷಕ್ಕೊಮ್ಮೆ ಅಜ್ಜನಮನೆ
ಚಿಕ್ಕಮ್ಮನ ಸೆರಗ ಹಿಂದೆ ಮುಂದೆ..
ಕರೆದೆಲ್ಲೆಲ್ಲ ಹೋದದ್ದೇ ...
ಪುಟ್ಟ...ಇಲ್ಲಿ ಬಾ ಅತವಾ ನನ್ನನ್ನ ಯಾರೂ ಅಪ್ಪಿಕೊಂಡ ಅನುಭವ ಇಲ್ಲ...
ಬುಟ್ಟಿಯಲ್ಲಿ ನಿನ್ನೆಯ ಸಾಂಬಾರು... ಹುಳಿಯಾದ ಮಜ್ಜಿಗೆ
ಕರ್ರಗಿನ ಮೈಕಾಂತಿ ಉಬ್ಬು ಹಲ್ಲು...
ಹೂಂ ನೆನಪಿರುವ ಬಾಲ್ಯ
-
ಹತ್ತಿರ ಬರಲು ಎಸ್ಟು ಪ್ರಯತ್ನ ಮಾಡಿದ್ದೆ
ಅದಕ್ಕಿಂತ ಝಾಸ್ಥಿ ಪ್ರಯತ್ನ
ದೂರ ಹೋಗಲು ಮಾಡುತ್ತಿದ್ದೇನೆ!!!
ಭಾರವಾದ ಮನಸ್ಸು ಬಾರದೆ ಕಾದಿದೆ... ಕಾಡಿದೆ
ಎತ್ತೊಯ್ಯಲು ಹರಸಾಹಸ ಮಾಡುತ್ತಿದ್ದೇನೆ!-
ಆಳು ಆಳುವ ಕಾಲ ಸನಿಹದಲ್ಲಿದೆ
ಸೇವಕನಾಗಿ ಸೇವೆ ಮಾಡಿದ್ದಾಯ್ತು
ಇನ್ನೇನಿದ್ದರೂ ಸೇವೆ ಮಾಡಿಸುವ ವ್ಯವಸ್ಥೆ ಮಾಡಬೇಕಿದೆ
ಆಳು ಆಳುವ ಕಾಲ ಸನಿಹದಲ್ಲಿದೆ...
-
ಯಾರಿಗೆ ಹೇಳಲಿ ನಿದ್ದೆ ಬರ್ಲಿಲ್ಲ ...ತುಂಬಾ ಸದ್ದು ಇದೆ...
ಹೊರಗಡೆ ಅಲ್ಲ ಬದಲಾಗಿ ಒಳಗಡೆ....
-