prasad hegde   (PRASAD HEGDE)
72 Followers · 295 Following

Joined 4 January 2021


Joined 4 January 2021
23 JAN 2022 AT 8:31

ಇನಿಯನ ಬಾಹುವಿನಲ್ಲಿ ಒರಗುವ ಕನಸು
ಅವಕಾಶದ ನಿರೀಕ್ಷೆಯಲ್ಲಿ ತವಕಿಸಿದೆ ಕಣ್ಣೆರಡು

-


17 FEB 2021 AT 13:00

ಹೃದಯದ ಮಾತು ಕೇಳಲು ಮಾತು ಬೇಕಂತ ಇಲ್ಲ..
ಕಾರಣ‌‌‌‌.‌‌‌..
ಮಾತಿಗಿಂತ ಮೌನವೆಂದರೆ ಹೃದಯಕ್ಕೆ ಬಲು ಇಷ್ಟ..
ಮೌನದ ಸಂಭಾಷಣೆಯಲ್ಲೆ ಹೃದಯ ಹೆಚ್ಚು ಆಹ್ಲಾದ ಆಗುವುದು...

-


18 JAN 2022 AT 9:44

ದೀಪ ಬೆಳಗಲು ಕಾರಣವಾಗಿತ್ತು
ಒಂದು ಮೇಣದ ಬತ್ತಿ
ದೀಪ ಬೆಳಗಿದ ಬಳಿಕ
ಮೇಣದ ಬತ್ತಿ ಒಬ್ಬಂಟಿಯಾಗಿ
ಮೂಲೆಯಲ್ಲಿ ಬಿದ್ದಿತ್ತು ...

-


18 JAN 2022 AT 9:29

ನೆರಳ ಕೊಡುವ ಮರದ ಆಶ್ರಯವನ್ನು ಪಡೆದ ಮನುಜ
ನೆರಳ ಕೊಟ್ಟ ಮರ ಬಿಸಿಲಿಗೆ ಮೈಯೊಡ್ಡಿದ್ದನ್ನ ಮರೆತ
ಮರಕ್ಕೆ ತಿಳಿದಿರಲಿಲ್ಲ ಮನುಜನ ಸ್ವಭಾವ
ಮನುಜನಿಗೆ ಮರಕ್ಕೇನು ಗೊತ್ತು ಅನ್ನುವ ಜಂಭ

-


12 JAN 2022 AT 18:24

ರೆಕ್ಕೆಯನ್ನು ಕತ್ತರಿಸಲು ಪ್ರಯತ್ನಿಸಿದವರೆಷ್ಟೋ , ಹಿಂಬದಿಯಿಂದ ಬಾಣ ಬಿಟ್ಟವರೆಷ್ಟೋ , ಪಕ್ಷಿ , ಪಾಪ ಎಂದು ಬಿಡದೆ ಬಂಧಿಸಲು ಪಣತೊಟ್ಟವರೆಷ್ಟೋ..ಆದರು ಬದುಕುವ ಹಂಬಲ , ಹಾರಲು ಆಗದಿದ್ದರೂ ಹದವಾಗಿ ಜೀವಿಸುವ ಬಯಕೆ , ರೆಕ್ಕೆ ಕತ್ತರಿಸಲು ಕಷ್ಟ ಪಡುತ್ತಿರುವವರ ಕಾರ್ಯ ಮುಂದುವರಿಯಲಿ , ಬಡಪಕ್ಷಿ ಬದುಕುವ ಪ್ರಯತ್ನದಲ್ಲೇ ಸಾಗಲಿ..

-


10 JAN 2022 AT 14:01

1. ನಂಬಿಕೆ ದ್ರೋಹ ಮಾಡುವವರ ಸಂಘ
2. ವಿಶ್ವಾಸದ ಮೇಲೆ ಘಾತಿಸಿದ ಕೆಲವರ ಸ್ನೇಹ
3.ನೇರವಾಗಿ ಮಾತನಾಡುತ್ತೇನೆ ಎಂದು ಮಾತು ಬಿಡುವ ಮಂದಿ

ಇಂತಹವರಿಂದ ಅಪಾಯವೇ ಹೆಚ್ಚು ..‌

-


10 JAN 2022 AT 11:58

ಎಲ್ಲರೂ ನನ್ನವರೇ ಎಂದು ಅಂದುಕೊಂಡಿದ್ದೆ ;
ಅರಿವಾಗಲು ತಡವಾಯಿತು !
ಅವರ ಕೆಲಸವಾಗಲು ನಾ ಮಾದ್ಯಮವಾಗಿದ್ದೆ ;
ಕೆಲಸ ಮುಗಿದ ಮೇಲೆ ನನ್ನ ಕಣ್ಣು ತೇವವಾಗಿತ್ತು..!

-


10 JAN 2022 AT 9:30

ಸಾಧಿಸುವ ಛಲವೊಂದಿದ್ದರೆ , ಪರಿಶ್ರಮ ಪಡುವ ಮನಸ್ಸು ನಿಮ್ಮದಾಗಿದ್ದರೆ , ಅದೃಷ್ಟವನ್ನು ನಂಬಿ ಕೈ ಚೆಲ್ಲಿ ಕೂರದೇ ಇದ್ದರೆ , ಕಾಲಕ್ಕೆ ಗೌರವ ಕೊಟ್ಟು ಮುನ್ನೆಡೆದರೆ , ಬದುಕಿನಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ... ಕೆಲಸ ಮಾಡಿ ಯಶಸ್ಸು ಸಾಧಿಸಬೇಕೆಂಬ ಗುರಿ ಇದ್ದಾಗ ಸಮಯ ಮೀರಿತು ಎಂಬುದು ನೆಪಕ್ಕಷ್ಟೆ ಸಿಮೀತವಾಗುತ್ತದೆ...

-


10 JAN 2022 AT 9:01

ಬದುಕಿನ ಸ್ಟೇಟಸ್ ನೋಡಿಕೊಂಡೇ
ಕೆಲವರು
ಇನ್ನೊಬ್ಬರ ವಾಟ್ಸ್ಯಾಪ್ ಸ್ಟೇಟಸ್ ನೋಡುವುದು...!!

-


31 DEC 2021 AT 20:16

1. ನಂಬಿದವರಿಂದಲೇ ಆದ ದ್ರೋಹ
2.ದುಡಿದು ದಣಿದರೂ ಸಿಗದ ಮಾನ್ಯತೆ
3.ಎಲ್ಲಾ ಇದ್ದು ಅಪರಿಚಿತನಾದ ಸಂಕಟ
ಈ ಮೂರು ಅಂಶಗಳು ಕಳೆದ ವರ್ಷದಲ್ಲಿ ಅನುಭವಿಸಿದ ಹಾಗೂ ಅರಗಿಸಿಕೊಳ್ಳಲು ಕಷ್ಟಕರವಾಗಿದ್ದ ಸಂದರ್ಭಗಳು... ಈ ವರ್ಷ ಇಂತಹ ಯಾವ ಘಟನೆಗಳು ಮರುಕಳಿಸದೇ ಇರಲಿ..

-


Fetching prasad hegde Quotes