Pranav Hegde   (Legend Pranav Hegde)
34 Followers · 18 Following

Joined 14 March 2018


Joined 14 March 2018
9 JUN 2019 AT 20:39

ನೋಡು ನೋಡುತ್ತಿದ್ದಂತೆ ಬದಲಾಯ್ತು ಜೀವನ|
ನೋಡು ನೋಡುತ್ತಿದ್ದಂತೆ ಬದಲಾಯ್ತು ಚೇತನ||
ನೋಡು ನೋಡುತ್ತಿದ್ದಂತೆ ವಿಶ್ವವಾಯ್ತು ನವೀನ|
ನೋಡು ನೋಡುತ್ತಿದ್ದಂತೆ ಮುಂದುವರಿಸಿದೆವು ಚಲನ||


ನೋಡುತ್ತಿದ್ದಂತೆ ಬದಲಿಸಿದೆವು ಪ್ರಕೃತಿ|
ನೋಡುತ್ತಿದ್ದಂತೆ ಬೆಳೆಯಿತು ಬೃಹತ್ ಆಕೃತಿ||
ನೋಡುತ್ತಿದ್ದಂತೆ ಉರುಳಿದವು ಮರಗಳು|
ನೋಡುತ್ತಿದ್ದಂತೆ ನಶಿಸಿದವು ಹಕ್ಕಿಗಳು||


ಶಾಲೆಯಲ್ಲಿ ವೇಗವಾಗಿ ಕಲಿತೆವು ಅಕ್ಷರ|
ಪ್ರಕೃತಿ ಮೀರಿದರೆ ಉಳಿಗಾಲವಿಲ್ಲ ಎಚ್ಚರ||
ಇವೆಲ್ಲವನ್ನು ಅರಿಯಬೇಕು ನೀ ಸಾಕ್ಷರ|
ಪ್ರತಿಯೊಬ್ಬರೂ ಬೆಳಸಬೇಕು ಗಿಡ-ಮರ||

-


17 JUL 2018 AT 18:17

ನಾವು ಎಂದೂ ಬೇರೆಯವರನ್ನು ಅವಲಂಬಿಸಿ ಬದುಕಬಾರದು.'ಕುಟುಂಬ'ಎಂದರೆ ಒಬ್ಬರನ್ನೊಬ್ಬರು ಆಸರೆಯಾಗಿ ಬದುಕಬೇಕು ,ಅದು ತಪ್ಪಲ್ಲ.ಆದರೆ ನಮ್ಮ ಏಳ್ಗೆಗಾಗಿ ಇತರರ ಬದುಕನ್ನು ಬಲಿಪಡೆಯಬರದು.ಇನ್ನೊಬ್ಬರ ಹೋಗಳಿಕೆಯಿಂದ ನಾವು ರಾಜನ ಹಾಗೆ ಮೆರೆಯಬಾರದು.ಇನ್ನೊಬ್ಬರಿಗೆ ಆಶ್ರಯ ನೀಡುವ ಮನಸ್ಸು ನಮ್ಮದಾಗಬೇಕು.
ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೆ ವನೆ|
ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರತಾ||
ಸಿಂಹಕ್ಕೆ ಸಂಸ್ಕಾರ ಕೊಟ್ಟರಾರು? ರಾಜಭಿಷೇಕ ಮಾಡಿದವರಾರು?
ತನ್ನ ಶೌರ್ಯದ ಮೂಲಕ ಸಿಂಹ "ಕಾಡಿನ ರಾಜ" ಎನಿಸಿಕೊಂಡಿದ್ದು.
ಹಾಗೆಯೇ ನಾವು ಕೂಡ ನಮ್ಮ ಗುಣಗಳಿಂದ ಇತರರ ಬಾಳಿಗೆ ಬೆಳಕಾಗಬೇಕು.

-


22 JUN 2018 AT 8:52

￰ದೇವರು ಇಲ್ಲ ಎಂಬವರಿಗೆ ಒಂದು ಚಿಕ್ಕಕಥೆ ....
ಚಿಕ್ಕಹುಡುಗನೊಬ್ಬಗೆ ದೇವರನ್ನು ಭೇಟಿ ಮಾಡಬೇಕೆನಿಸಿತು.ದೇವರಿರುವ ಜಾಗಕ್ಕೆ ಹೋಗಲು ತುಂಬ ಹೊತ್ತು ಪ್ರಯಾಣ ಮಾಡಬೇಕು ಎಂಬುದು ಆತನಿಗೆ ಗೊತ್ತಿತ್ತು .ಗಾಗ ಕೇಕ್ ಮತ್ತು ಪಾನೀಯಗಳನ್ನು ಸೂಟಕೇಸ್ನಲ್ಲಿ ತುಂಬಿ ಹೊರಟ.ದಾರಿ ಮಧ್ಯ ವೃದ್ಧೆಯೊಬ್ಬಳು ಪಾರ್ಕ್ನಲ್ಲಿ ಪಾರಿವಾಳಗಳನ್ನು ನೋಡುತ್ತಾ ಕುಳಿತಿದ್ದಳು. ಅವಳ ಪಕ್ಕದಲ್ಲೇ ಆ ಹುಡುಗ ಕುಳಿತು ಸೂಟ್ಕೇಸ್ ತೆರೆದ .ಅವಳು ಹಸಿವಿನಿಂದ ಬಳಲುತ್ತಿರುವುದನ್ನು ಕಂಡು ಈತ ಕೇಕು ನೀಡಿದ .ಅವಳು ಕೇಕು ಪಡೆದು ನಕ್ಕಳು.ಆ ನಗು ತುಂಬಾ ಸುಂದರವಾಗಿತ್ತು.ಆ ನಗುವನ್ನು ಮತ್ತೆ ನೋಡಲು ಬಯಸಿದ ಆ ಹುಡುಗ ಪಾನೀಯವನ್ನು ಆಕೆಗೆ ನೀಡಿದ .ಆಗ ವೃದ್ದೆ ವೃದ್ಧೆ ಪುನಃ ನಕ್ಕಳು .ಹೀಗೆ ತಿನ್ನುತ್ತಾ ,ನಗುತ್ತಿದ್ದಂತೆ ಮಧ್ಯಾಹ್ನವಾಯಿತು .ಆದರೆ ಇಬ್ಬರೂ ಒಂದು ಮಾತು ಕೂಡ ಆಡಲಿಲ್ಲ .
ಸಂಜೆಯಾಗುತ್ತಿದ್ದಂತೆ ಆ ಹುಡುಗ ಹೊರಟ. ನಾಲ್ಕೂ ಹೆಜ್ಜೆ ಇಡುತ್ತಿದ್ದಂತೆ ಮತ್ತೆ ವೃದ್ಧೆಯ ಬಳಿ ಬಂದು ಅವಳನ್ನು ಖುಷಿಯಿಂದ ಅಪ್ಪಿಕೊಂಡ .ಅವಳು ಇನ್ನೂ ಸುಂದರವಾಗಿ ನಕ್ಕಳು .ಈತ ಮನೆಗೆ ಹೋದಾಗ ಇವನ ಅಮ್ಮ ,'ಯಾಕೆ ಇಂದು ಇಷ್ಟೊಂದು ಸಂತೋಷವಾಗಿದ್ದೀಯ' ಎಂದು ಅಚ್ಚರಿಯಿಂದ ಕೇಳಿದಳು .ಆ ಹುಡುಗ 'ನಾನು ಇಂದು ದೇವರ ಜೊತೆ ಕೇಕು ತಿಂದೆ,ನಿನಗೆ ಗೊತ್ತಾ!ಆಕೆ ನಾನು ಎಂದು ನೋಡದ ಸುಂದರ ನಗೆ ಬೀರಿದಳು'.ಎಂದು ಹೇಳಿದ.ಬಾಲಕ ಕೊಟ್ಟ ಕೇಕು ತಿಂದ ವೃದ್ಧೆ ಮನೆಗೆ ಹೋದಾಗ ,ಆಕೆಯ ಮಗ 'ಯಾಕೆ ಇಷ್ಟು ಖುಷಿಯಾಗಿದ್ದೀಯ'ಎಂದು ಕೇಳಿದ .ಆಕೆ "ನಾನಿಂದು ದೇವರ ಜೊತೆ ಕೇಕು ತಿಂದೆ,ನಿನಗೆ ಗೊತ್ತಾ?ನಾನು ನಿರೀಕ್ಷಿಸಿದಂತೆ ಆ ದೇವರು ಚಿಕ್ಕವನಾಗಿದ್ದಾನೆ" ಎಂದಳು.

-


20 JUN 2018 AT 21:24

ಜಗತ್ತಿನ್ನಲ್ಲಿ ನಶ್ವರವಾದ ಈ ಬದುಕಿನಲ್ಲಿ ನಾವು ಈಶ್ವರನ ಕೃಪೆಯಿಂದ ಮಾತ್ರ ಜೀವಿಸಬಹುದು .ಅದನ್ನು ಬಿಟ್ಟು ದೇವರಿಲ್ಲ ಎಂಬ ವಾದವನ್ನು ಮಾಡುವವರು ಈಶ್ವರನ ಮಹಿಮೆಯನ್ನು ಒಮ್ಮೆ ಅರಿಯಬೇಕು . ಹೇ ಮಹಾದೇವ ರಕ್ಷಿಸು ಎಂದು ಮನದಾಳದಿಂದ ಪ್ರಾರ್ಥಿಸಿದರೆ ಯಾವುದಾದರೂ ರೂಪದಲ್ಲಿ ಬಂದು ಖಂಡಿತ ರಕ್ಷಿಸುತ್ತಾನೆ .ಆತನನ್ನು ಪ್ರಾರ್ಥಿಸಲು ಜಾತಿ,ಮತ,ಲಿಂಗ , ಬೇಧವಿಲ್ಲ .ಸರ್ವರಕ್ಷಕ ಆ ಈಶ್ವರ ನಮ್ಮೊಳಗೇ ಇರುತ್ತಾನೆ ನಮ್ಮ ನಡೆಯನ್ನು ನೋಡುತ್ತಿರುತ್ತಾನೆ .ಆದ್ದರಿಂದ ಆ ಈಶ್ವರನ ಕೃಪೆ ಸರ್ವರ ಮೇಲೆ ಇರುತ್ತದೆ .
ಅಹಂ ಬ್ರಹ್ಮಾಸ್ಮಿ

-


11 MAY 2018 AT 19:46

ಮತದಾರರೇ ಲಾಲಿಸಿ ,

ಹಾಕೋಣ ಮತವನ್ನು
ತೆಗೆದುಕೊಳ್ಳದಿರಿ ಹಣವನ್ನು
ಭ್ರಷ್ಟಾಚಾರವನ್ನು ಬೆಂಬಲಿಸದಿರಿ
ಶಿಷ್ಟಾಚಾರವನ್ನು ಹುರಿದುಂಬಿಸಿ

ಬೇಡ ನಮಗೆ ಗೂಂಡಾ ರಾಜಕೀಯ
ಬೇಡ ನಮಗೆ ಜಾತಿ -ಪಂಥ ರಾಜಕೀಯ
ನಮಗೆ ಬೇಕು ಅಭಿವೃದ್ಧಿ ಅಭ್ಯರ್ಥಿ
ಹಾಗಾಗಿ ಮತ ಹಾಕಲು ಮರೆಯದಿರಿ

ಒಂದು ಮತ ನಿರ್ಧರಿಸುತ್ತೆ ದೇಶದ ಭವಿಷ್ಯ
ತಪ್ಪದೆ ಯೋಚಿಸಿ ಮತ ಹಾಕು ಶಿಷ್ಯ

ಪರಸ್ಪರ ನಿಂದಿಸುವ ನಾಯಕ ನಮಗೆ ಬೇಡ
ಏನೇ ಆದರೂ ಕನ್ನಡ ನೀ ಬಿಡಬೇಡ

ದೇಶ ಮೊದಲು ನಂತರ ನಿಂದನೆ
ಮತವನ್ನು ಹಾಕದೆ ಇರಬೇಡ ಪೂಜ್ಯನೆ

NOTA ಒತ್ತಿ ನಿನ್ನ ಹಕ್ಕನ್ನು ಕಳೆದುಕೊಳ್ಳಬೇಡ
ನಂತರ ಪಶ್ಚಾತಾಪ ಪಡಬೇಡ

-


10 MAY 2018 AT 19:35

ಚಂದಿರ ಬಂದಾನ
ಬೆಳಕನ್ನ ಚೆಲ್ಲ್ಯಾನ
ಮಲಗೋಣ ಬಾ ಕಂದ ಜೋ...ಜೋ....|ಪ|

ಮಳೆ ಮೋಡ ಆಗೈತೆ
ಕೋಲ್ಮಿಂಚು ಬಂದೈತೆ
ಚಕ ಚಕ ಹೊಳೀತೈತೆ ನನ ಕಂದ ಬೇಗನೆ ಮಲಗಮ್ಮ ಜೋ ಜೋ...

ಅಪ್ಪಯ್ಯ ಬರ್ತಾನ
ಆಟಿಕೆಯ ತರ್ತಾನ
ಝಣ ಝಣ ಗೆಜ್ಜೆ ಹಾಕ್ತಾನ ಮಲಗಮ್ಮ ನನ ಕಂದ ಜೋ ಜೋ ....

ನುಡಿಮುತ್ತ ಹೇಳೋಣ
ಜೋಗಿನ ಕರೆಸೋಣ
ಒಳ್ಳೊಳ್ಳೆ ಮಾತನ್ನು ಆಡೋಣ
ಮಲಗಮ್ಮ ನನ ಕಂದ ಜೋ ಜೋ.....

-


10 MAY 2018 AT 8:36

ನಮ್ಮೊಳಗೆ ಅಹಂಕಾರವಿರಬೇಕು .ಆದರೆ ಅದು ಮಿತಿಮೀರಿದಾಗ ಜ್ವಾಲೆಯಂತೆ ನಮ್ಮ ಗುಣ ಸ್ವಭಾವವನ್ನು ಬದಲಿಸುತ್ತದೆ .ಪ್ರೀತಿ , ವಾತ್ಸಲ್ಯ ,ಮಿತ್ರತ್ವ ,ಸಂಬಂಧ ಇವೆಲ್ಲವನ್ನು ತನ್ನೊಳಗೆ ಸೆಳೆದು ನಾನೇ ದೊಡ್ಡವನು ಎಂಬ ದುರಹಂಕಾರ ಹುಟ್ಟುತ್ತದೆ .ಆದ್ದರಿಂದ ನಮ್ಮ ಅಹಂಕಾರವನ್ನು ಹಿಡಿತದಲ್ಲಿಟ್ಟಿಕೊಳ್ಳಬೇಕು ,ಆಗ ಮಾತ್ರ ಮಾನವ ಜನ್ಮವು ಸಾರ್ಥಕವಾಗುತ್ತದೆ .
ಜೈ ಹಿಂದ್ ,ಶುಭ ಮುಂಜಾನೆ

-


24 APR 2018 AT 8:04

ನಮ್ಮ ಅದೃಷ್ಟ ನಮ್ಮ ಸುತ್ತಮುತ್ತ ತಿರುಗುತ್ತ ನಮಗೆ ವಿವಿಧ ಅವಕಾಶವನ್ನು ಕೊಡುತ್ತಿರುತ್ತದೆ. ನಾವು ಸಂತೋಷದಿಂದ ಇರುವಾಗ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನಾವು ಕಷ್ಟದಲ್ಲಿ ಇರುವಾಗ ಈ ಅವಕಾಶಗಳಿಗೇ ಕಾಯುತ್ತಿರುತ್ತೇವೆ. ಆಗ ಅದೃಷ್ಟ "ನಾನು ಬಂದಾಗ ನೀನು ನಿರಾಕರಿಸಿದೆ, ಈಗ ನೀನು ಕರೆದರೆ ನಾನೇಕೆ ಬರಬೇಕು?"ಎಂದು ಹೇಳುತ್ತದೆ. ಆದರೆ ನಾವು ಸರಿಯಾದ ಸಮಯಕ್ಕೆ ಕಾಯಬೇಕು.ಒಂದಲ್ಲ ಒಂದು ದಿನ ಅದೃಷ್ಟ ಬಂದೇ ಬರುತ್ತದೆ. ಹಾಗಾಗಿ ಎದೆಗುಂದದೆ ಬದುಕಬೇಕು.
ಜೈ ಹಿಂದ್

-


12 APR 2018 AT 22:03

Walking in different direction and achieve is a good thing.But when a person chooses same path followed by other and achieve higher than others is known as "LEGEND".
JAI HIND

-


12 APR 2018 AT 20:33

ರಾಜನ ರಕ್ಷಣೆಗೆ ಇರುವರು ರಾಜಭಟರು.
ದೇಶ ವಿದೇಶದಿಂದ ಸುದ್ದಿ ತಂದು ರಕ್ಷಿಸುವರು ಗುಪ್ತಚರರು.
ಜನಸಾಮಾನ್ಯ ನಾಗರಿಕರನ್ನು ಯಾರು ಕಾಪಾಡುವವರು??
ಹೆದರಬೇಡಿ ,ಎಲ್ಲರ ರಕ್ಷಣೆಗೆ ಇದ್ದಾರೆ ನಮ್ಮ ಸಿಂಹ ಸದೃಶ್ಯ ಸೈನಿಕರು.

ಜೈ ಹಿಂದ್ , ಇಂಕ್ವಿಲಾಬ್ ಜಿಂದಾಬಾದ್

-


Fetching Pranav Hegde Quotes