Pramod Shankar Rao   (ರೇಖಾಸುತ)
11 Followers · 36 Following

Joined 10 September 2018


Joined 10 September 2018
30 MAR 2023 AT 12:15

'ರಾಮ'ನೆಂದರೆ  ಅದು ಬರಿ ನಾಮವಲ್ಲ , ಬದುಕಿನ ನಿಯಮ,
'ರಾಮ ನಾಮ'ದ ಜಪವು ಬರಿ ರಕ್ಷೆಯಲ್ಲ , ದಿಕ್ಸೂಚಿ ನಕ್ಷೆ..!

ರಾಮ ನವಮಿಯ ಶುಭಾಶಯಗಳು..!

-


24 OCT 2022 AT 9:59

ಸರಿಯಲಿ ಬೇಗುದಿ-ಬವಣೆಗಳೆಲ್ಲ ದೂರ ,
ಜ್ವಲಿಸಲಿ ಕಲಿಕೆಯ ಹಣತೆ ನಿರಂತರ ,
ಮಂದವಾಗಲಿ ಮದ-ಮೋಹ-ಮತ್ಸರ,
ಜಾಗೃತವಾಗಲಿ‌ ಮನದಿ ಮಮತೆ-ಕನಿಕರ,
"ನವ್ಯ-ಭವ್ಯ"ವಾಗಲಿ ದೀಪಾವಳಿ ಸಡಗರ

ದೀಪಾವಳಿಯ ಶುಭಾಶಯಗಳು ನಿಮಗೆ ...!!

-


8 SEP 2022 AT 7:57

ಸುತ್ತಲಿರುವರಲ್ಲರೂ ನಿರ್ಲಕ್ಷ್ಯದಿಂದ ಕಂಡರೂ,
ಗುರಿಯ ಸೇರುವ ತವಕದ ಹೆಜ್ಜೆಯೇ ಲಕ್ಷ್ಯ..!

-


8 SEP 2022 AT 7:50

ಕೆರೆಯೊಳಗೆ 'ನೆರೆ-ಹೊರೆ'ಯು ಕಟ್ಟಿಕೊಂಡರೆ ,
'ನೆರೆ' ಬಂದೊಡೆ 'ಹೊರೆ'ಯ ಬರೆ ಬೀಳದೇ..?!

ಬಯಸಿ ಬಂದವರಿಗೆಲ್ಲ‌ ಬಳಸಿದಷ್ಟೂ 'ನೆಲೆ'ಯಾಗಿರೆ ,
ಬರೆ ಬಿದ್ದೊಡೆ , ನೆಲೆಯಿತ್ತ ಊರ ಜರಿವುದು ಸರಿಯೇ..?!

-


8 JUL 2022 AT 12:20

# ಹಸಿರೇ ಉಸಿರು #
< ಹಸಿರ ಹೊದಿಕೆಯೊಳಗಡಗಿರುವ ಚಿಟ್ಟೆಯ ಆಂತರ್ಯ >

ನಿಮಗಿರಬಹುದು ಇದು ಬರಿಯ ಹಸಿರು ,
ನಮಗಿದೇ ಸೂರು ..!

ನಿಮಗಿರಬಹುದು ಇದು ಕೇವಲ ಘೋಷ ,
ನಮಗಿದೇ ಶ್ವಾಸ ..!

ನಿಮಗಿರಬಹುದು ನೂರು‌‌ ಚಾಪಲ್ಯ ,
ನಮಗಿದೊಂದೇ ವಾತ್ಸಲ್ಯ ..!

ಹಸಿರ ಉಳಿಸಿ ನಿಮಗಾಗಿಯಲ್ಲ - ನಮಗಾಗಿಯಲ್ಲ‌ ,‌
ಯೋಚಿಸಿ , ನಮ್ಮದೇ ಕೊನೆಯ ಪೀಳಿಗೆಯಲ್ಲ..!— % &— % &

-


4 JUL 2022 AT 22:13

ಏನಿರಬಹುದು ಇವುಗಳ ಸಂವಾದ ..?!

ಚೆಲುವಿನ ಚಿನ್ನಾಟವೋ..?!
ಒಲವಿಗೆ ಕಾದಾಟವೋ..?!
ಬವಣೆಯ ಒಡನಾಟವೋ..?!

ಉಭಯ ಕುಶಲೋಪರಿಯೋ..?!
ಅನುಭವದ ಅನವರಿಕೆಯೋ..?!
ಮರುಗಿದ ಮನಕೆ ಅಭಯವೋ..?!

-


2 APR 2022 AT 15:32

ಪ್ರಕೃತಿಯು ಬರಡ ಸರಿಸಿ , ಬರೆದಿದೆ ಹಸಿರ ಮುನ್ನುಡಿ,
ಹಿಂದಿನ ಹಿನ್ನಡೆಯ ಬದಿಗಿರಿಸಿ , ನಿಮಗಿರಲಿ ಸದಾ ಮುನ್ನಡೆ,

ಶುಭಕೃತ ನಾಮ ಸಂವತ್ಸರದ ಶುಭ ಕಾಮನೆಗಳು..!

-


6 APR 2019 AT 15:28

ಹಳೆ‌ ಬೇರಿನ ಹಠ ಸಾಧನೆ ಚಿಗುರೊಡೆದಿದೆ ಹೊಸ ಹಸಿರು ,

ಬೇಗೆಯೊಳ್ ಬೆಂದಿಪ್ಪಿಹ ಜೀವ ಸಂಕುಲಕ್ಕೊದಗಿದೆ ಉಸಿರು,

ಪರಿಚಲನೆಯ ಪರಿಕಲ್ಪನೆಯು ಇದು , ಹೊಸ ವರುಷವು ಶುರು,

ಜೀವನವಿದು ಶ್ರಮದ ಚಕ್ರ , ಹುರುಪಿರಲಿ ಸದಾ ಕಾಲ , ನೋಡದಿರು ಫಲಕೆ ಇದಿರು,

ಸಮನಾಗಿ ಸ್ವೀಕರಿಸು ಸಿಹಿ-ಕಹಿ , ಮಸುಕಾಗಲಿ ಕಹಿ ಈ ಬಾರಿಯ ಸಿಹಿಯೆದುರು.

ವಿಕಾರಿ ನಾಮ ಸಂವತ್ಸರ ಯುಗಾದಿಯ ಶುಭಾಶಯಗಳು

-


4 NOV 2021 AT 12:16

ಸಕಲವೂ 'ಸರಳ ಹಾಗು ಸಮೃದ್ಧ'ವಾಗಿರಲೆಂದು ಪ್ರಾರ್ಥಿಸುತ ,
ದೀಪಾವಳಿಯ ಶುಭಾಶಯಗಳು ನಿಮಗೆ .


-


4 NOV 2021 AT 12:06

ಅಹಂಕಾರದ ಅಂಧಕಾರ ತ್ಯಜಿಸಿ ,
ಅನುವಲ್ಲದ ಅ'ನು/ವ'ಮಾನಗಳ ಸರಿಸಿ,
ವಿಡಂಬ-ವಿಕೃತಗಳ ತೊಗಲ ದಹಿಸಿ ,

ಸಂಕುಲದ ನಿತ್ಯಶಕ್ತಿ - ಪ್ರಕೃತಿಗೆ ನಮಿಸಿ ,
ಆಂತರ್ಯ ವಿಕಸನದ ದೀಪ ಉರಿಸಿ,
ಕೃತಜ್ಞತಾ ಭಾವದ ದೀಪಾವಳಿ ಆಚರಿಸಿ.

ಸಕಲವೂ 'ಸರಳ & ಸಮೃದ್ಧ'ವಾಗಿರಲೆಂದು ಪ್ರಾರ್ಥಿಸುತ ,
ದೀಪಾವಳಿಯ ಶುಭಾಶಯಗಳು ನಿಮಗೆ .

-


Fetching Pramod Shankar Rao Quotes