Poorvi Nayak   (Avyaktha)
337 Followers · 196 Following

Being me!
Joined 19 June 2021


Being me!
Joined 19 June 2021
20 APR AT 8:39

ಕುಕ್ಕರಿನೊಳಗೆ ಕುಕ್ಕಿ ಬಾಯಿಗೆ ಬೀಗ ಜಡಿದಂತಾಗುವುದು!
ಹಬೆಯೊಳಗೆ ತಾಳಿದರೆ ಹದವಾಗಿ ಬೇಯುವುದು!

-


20 APR AT 0:17

ದೂರದ ಬೆಟ್ಟ ನುಣ್ಣಗೆನ್ನುವುದಾದರೆ,
ಹಾಗೇ ಆಗಲಿ!
ನನಗೂ ಕಲ್ಲು ಮುಳ್ಳುಗಳು
ಕಾಣದಿರಲಿ!

-


20 APR AT 0:11

ದೂರವಿರಬೇಕೆಂದುಕೊಂಡವರ ದೂರಲೇನಿಲ್ಲ ಬಿಡು
ಇತಿಮಿತಿಯಲಿರಲೆಂಬ ಕಡಿವಾಣ ನಿನ್ನ ಕೈಲೂ ಇರಲಿ!

-


20 APR AT 0:06

ಅವರಿಗೇನು ಗೊತ್ತು ಗೆಳೆಯಾ,
ನಾ ಬರೆವ ಪ್ರತಿ ಸಾಲಿನಲಿ
ನಿನ್ನ ನೆನಪುಗಳ ಮತ್ತಿದೆಯೆಂದು!!

-


19 APR AT 23:50

ಅವನೊಲವ ಸಾಲಿನ ತುಂಬಾ
ಅವಳೇ ಅಚ್ಚಾಗಿರುವಳು,
ಅವಳು ಹೋಗಿಲ್ಲ,
ಇವನೂ ಕಳಿಸಿಲ್ಲ!
ಕೊನೆ ಕಾಣದ ಕಾವ್ಯವೀ ಒಲವು!

-


19 APR AT 23:40

ಅವನೆಂದರೆ,
ಸಿಡಿಮದ್ದಿನಂತಾಡುವವಳ ಮುದ್ದಿಸಿ
ನೋವನಾರಿಸುವ ಮದ್ದಾಗುವವನು!
ಅವನೆಂದರೆ,
ಮಾತು ಮಾತಿಗೂ ಅಳುವ ಅವಳ
ನಗುವನು ಕ್ಷಣದಲ್ಲಿ ಮರಳಿಸುವವನು!

-


19 APR AT 23:31

ಅದೇಕೋ ನಿನ್ನೆನಪು ತುಂಬಾ ಕಾಡುತ್ತಿದೆ..
ಮೊದಲ ಮಳೆಗಿಳೆಯ ಸಂಭ್ರಮಕೆ ಮಣ್ಣ ಕಂಪು ಆವರಿಸುವಾಗ!

-


19 APR AT 23:21

ಪರವಾಗಿಲ್ಲ, ಹೇಳಿಬಿಡು
ಇಷ್ಟವಿಲ್ಲವೆಂದು!
ಸರಿದುಬಿಡುವೆ ದೂರ
ನನಗಿಷ್ಟೇ ಎಂದು!

-


19 APR AT 14:45

ಸಹಜಸುಂದರಿಯವಳು
ತರುಲತೆಗಳ ತವರು!
ಅವಳ ನಗುವೇ ಬೆಳ್ಳಿ ಬೆಳಕು,
ಕವಿತೆ, ಕಲರವದಿ ಕತ್ತಲು!
ಬೆಳದಿಂಗಳ ಚೆಲುವೆ
ಹಸಿರು ಸೀರೆ, ನದಿನೀರ ಮೆರುಗು!
ನೀಲ, ಪಚ್ಚೆ, ವರ್ಣಮಯ
ಅವಳಾಭರಣ ಹೂಗಳು!
ಎನಿತು ಹೇಳಲಿ ಅವಳ ರೂಪವ
ರೂಪಕೇ ಐಸಿರಿಯವಳು!

-


18 APR AT 12:52

ದೂರ ತಳ್ಳುವ ಕಟು ಮಾತುಗಳಿಗಿಂತ
ನೀರವ ಮೌನ ಲೇಸು, ನಮ್ಮ ಮಧ್ಯೆ...
ಮೌನ ಮುಳ್ಳಿನ ಮರವಾಗಿ ಬೆಳೆದು
ಮನಸನ್ನು ಆಗಾಗ ಚುಚ್ಚುವುದಿಲ್ಲ!

-


Fetching Poorvi Nayak Quotes