phaneendra sharma  
13 Followers · 8 Following

Ee putta kavigondu prashamseya hambala 🙂
Find me on instagram at @kavanadakuusu
Joined 15 July 2018


Ee putta kavigondu prashamseya hambala 🙂
Find me on instagram at @kavanadakuusu
Joined 15 July 2018
18 JAN AT 0:31


ನಿನ್ನ ಕಂಗಳ ನಿಶ್ಕಲ್ಮಶ ಸಾಗರದಿ
ಪಯಣ ಬೆಳೆಸುತಿಹ ಪಯಣಿಗ ನಾನು
ಮುಳುಗಿಸುವೆಯೋ ತೇಲಿಸುವೆಯೋ
ದಡ ಸೇರಿಸುವೆಯೋ ನಿರ್ಧರಿಸು ನೀನು
ದಡದ ಆಚೆ ಇಹುದು ಹೊಸ ಜಿವನವು
ಮದ್ಯದಿ ಮುಳುಗಲು, ನಿನ್ನೊಳಗೆ ನಾ ವಿಲೀನವು
ಪ್ರೀತಿಯೆಂಬ ಹಡಗನ್ನು ಹುಡುಕುತಿಹೆ ನಾನು
ತೆಪ್ಪವಾದರೂ ಸಿಗಲು ಸಂತಸದಿ ದಡ ಸೇರುವೆನು

-


21 NOV 2023 AT 21:03

ತಪ್ಪಲ್ಲದ ತಪ್ಪಿಗೆ ಪಡೆದಿಹ
ನೋವೆನಿಸದ ನೋವಿದು ।
ಸಾವಿಲ್ಲದ ಬದುಕ ಹುಡುಕಿ
ಸೋತ ಮನದ ನೋವಿದು ॥
ನಗ್ನ ಕಣ್ಣಿಗೆ ಪರದೆಯೆಸೆದ
ಕಾಲದ ತಾಂಡವವಿದು ।
ರಕ್ಷಕನೇ ಭಕ್ಷಕನಾದ
ಪ್ರೇಮ ಕ್ರೌರ್ಯ ಕಥೆಯಿದು ॥
ಎಷ್ಟೇ ತಡೆದು ಮುನ್ನಡೆದರೂ
ಚುಚ್ಚಿ ಕೊಲ್ಲತೊಡಗಿಹುದು ।
ಮನ್ವಂತರದ ಮೌನವಿದು
ಸಾವಿನಾಚೆಯ ನೋವಿದು ॥

-


1 NOV 2023 AT 0:43

ಹೆಮ್ಮೆಯಿಂದ ಹೇಳುವೆನು ನಾನು ಇಂದು
ಕನ್ನಡಾಂಬೆಯ ಪುತ್ರರಲ್ಲಿ ನಾನೂ ಒಬ್ಬನೆಂದು ॥

ನನ್ನೆದೆ ಬಗೆದು ಇಣುಕಿ ನೋಡಿದರೂ ಸಿಗದು
ಕನ್ನಡವ ಬಿಟ್ಟು ಅನ್ಯ ಭಾಷೆಯ ಕುರುಹು ॥

ಇದು ಬರಿಯ ಭಾಷೆಯಲ್ಲ, ನಮ್ಮ ಗರ್ವ
ಇದರ ವಿಷಯದಿ ಸಿದ್ಧ ಕೊಡಲು ನಮ್ಮ ಸರ್ವಸ್ವ ॥

ಕನ್ನಡವ ಬರಿ ಬಳಸೊಲ್ಲ , ಪೂಜಿಸುವೆವು
ಕರ್ನಾಟಕವ ಬರಿ ಪ್ರೀತಿಸೊಲ್ಲ , ಆರಾಧಿಸುವೆವು ॥

- ಫಣೀಂದ್ರ

-


4 APR 2023 AT 22:55

ಪ್ರೇಮಾಶ್ವವನೇರಿ ಬರುತಿಹ ನಿನ್ನ
ನೋಡಲೆಂದು ಕಾಯುತಿಹೆ ನಾನಿಲ್ಲಿ
ಮನಸ್ಸಿಗೆಟುಕದ ಮರೀಚಿಕೆಯಂತೆ
ತಪ್ಪಿಸಿಕೊಂಡು ಓಡುತಿಹೆ ನೀನೆಲ್ಲಿ …?

-


7 MAR 2023 AT 22:34

ನೋಡು ನೋಡುತ ಆಗಿಹೋಗುವುದು
ಶುರುವಾಗುವ ಸುಂದರ ಪಯಣಗಳು
ಹಿಂತಿರುಗಲು ನಮ್ಮ ಕಣ್ಣನ್ನೊದ್ದೆ ಮಾಡುವುದು
ನೋವು ನಲಿವುಗಳ ಸಂಕೋಲೆಗಳು

ತಿಳಿನೀರಂತಿದ್ದ ಮನದಲಿ ಇಂದು
ಎದ್ದಿತೊಂದು ಭಯಂಕರ ಅಲೆ
ತೊರೆದು ಮುಂದೆ ಸಾಗಬೇಕೆಂದು
ಇಷ್ಟು ದಿನಗಳ ಬಂಧಗಳ ಇಲ್ಲೇ

ಹೊರಟರೂ ಎಲ್ಲ ಒಂದೇ ವಾಹನದಿ
ಇಳಿವರು ಬಂದಾಗ ತಮ್ಮ ನಿಲ್ದಾಣ
ಹೊಸ ವಾಹನಗಳ ಹುಡುಕುತ ಜೀವನದಿ
ಮುಂದುವರೆಸುವರು ತಮ್ಮ ಪಯಣ

-


17 OCT 2022 AT 23:47

ಕರುಳನ್ನೇ ಹರಿದು ಬಂದರೂ ನಾನು
ಹೆತ್ತು ಹೊತ್ತು ಎದೆ ಹಾಲುಣಿಸಿ ಸಲಹಿದೆ
ಹೊಟ್ಟೆಗೆ ಹಾಕಿಕೊಂಡು ನನ್ನೆಲ್ಲ ತಪ್ಪುಗಳ
ಹಿತ ಬದುಕು ನನಗೆಂದೇ ಸೃಶ್ಟಿಸಿದೆ

ಒಳಿತು ಕೆಡುಕುಗಳ ಮದ್ಯದ ದ್ವಂದ್ವಕೆ
ಮಂಗಳ ಹಾಡಿದೆ ಸರಿ ದಾರಿಯ ತೋರುತ
ಮನವ ಶಕ್ತಿಯ ಮಂದಿರವನಾಗಿಸಿದೆ
ಭಯವೆಂಬ ಅಸ್ಥಿರತೆಯ ದೂರ ಅಟ್ಟುತ

ನೀರಿನಿಂದ ಹೊರತೆಗೆದ ಮೀನಿನ ಹಾಗೆ
ನಿನ್ನನ್ನಗಲಿ ನಾನು ಇರುವುದು ಕನಸು
ದೈರ್ಯದ ಪ್ರತಿರೂಪವಾಗಿ ಹಿಂದೆ ನೀನಿರಲು
ನನ್ನೆಲ್ಲ ಕನಸುಗಳ ಮಾಡಿಕೊಳ್ಳುವೆ ನನಸು

-


17 OCT 2022 AT 23:33

ಮತ್ತೆ ಶುರುವಾಗಿದೆ ರಾಯಸದ ಗೀಳು
ಬರೆಯುವಿಕೆ ಹಾಗು ಪದಗಳ ಪ್ರೇಮಾಯಣ।
ಅಂದು ಇವೆರಡರ ನಡುವೆ ಇತ್ತು ಬಿರುಕುಗಳು
ಸರಿಹೋಗಲದು ಇಂದು ಹುಟ್ಟಿದೆ ಸಂಕ್ರಮಣ॥

-


3 SEP 2022 AT 0:11

ಮುದ್ದಾದ ತುಟಿಗಳ ಮಧ್ಯದಿಂದ
ಪುಟ್ಟದಾಗಿ ಇಣುಕಿದ ಭಾವಕೆ ಮನಸೋತೆ
ಎದೆ ಬಡಿತವ ನಿಲ್ಲಿಸಬಲ್ಲ ಈ ಭಾವವ
ನಗುವೆಂದು ಬಣ್ಣಿಸಲು ಕುಣಿದಾಡಿತೆನ್ನ ಮನ

-


16 AUG 2022 AT 19:07

ನಗುವ ಮೊಗದ ಹಿಂದೆ ಇಹುದು
ನೂರೆಂಟು ಮೂಟೆಗಳ ಅಳಲು
ನಗಿಸುವ ಮನಕೂ ನೋವುಂಟು
ತಿಳಿಯಬೇಕು ಈ ಸತ್ಯವ ಜನಗಳು

-


22 MAY 2022 AT 23:42

ನೋಟದಿ ಮನದ ಘರ್ಷಣೆಯ ಹೇಳಬಲ್ಲ
ಮಾತನಾಡಲು ನೋವುಗಳನು ಮರೆಸಬಲ್ಲ
ಬಿಗಿದಪ್ಪಲು ದುಗುಡಗಳ ದೂರ ಮಾಡಬಲ್ಲ
ಗೆಳೆತನವ ಪಡೆದವ ಜಗವನ್ನೇ ಗೆಲ್ಲಬಲ್ಲ

-


Fetching phaneendra sharma Quotes