ಈ ನಿನ್ನ ಸ್ವರದಲ್ಲಿ ಏನೋ ಜಾದು ಅಡಗಿದೆ...
ಎಷ್ಟೇ ಕೇಳಿದರೂ ಮತ್ತೆ ಮತ್ತೆ ಕೇಳುವಷ್ಟು ಇಂಪಾಗಿದೆ...
ನಿನ್ನ ಅಂದಕ್ಕೂ ನಿನ್ನ ಸಂಗೀತಕ್ಕೂ ಮನಸಾರೆ ಮನಸೋತು ತಲೆದೂಗುತ್ತಿರುವೆ....-
ಕಾಯುತಿಹಳು ನನ್ನ ಅರಸಿ ಎದೆಯ ಕದವ ತೆರೆದು.....
ಪ್ರೀತಿ ,ಮಮತೆಯ ಊಣ ಬಡಿಸಲು ತುದಿಗಾಲಲ್ಲಿ ನಿಂತಿಹಳು ....
ಅವಳ ನೋಡುವ ಅವಸರಕ್ಕೆ ನನ್ನ ಹೃದಯವು ಹೊರಟಿದೆ ಅವಳಿರುವ ಕಡೆಗೆ....
ನನ್ನೆಲ್ಲಾ ಕನಸುಗಳನ್ನು ಮುಡಿಪಿಡುವೆ ಅವಳ ಮಡಿಲಿಗೆ.....-
ಅವಳೊಂದು ಹಲವಾರು ವಿಷಯಗಳ ತುಂಬಿಕೊಂಡಿರುವ ಪುಸ್ತಕ....
ಎಷ್ಟೇ ಓದಿದರು ಅರ್ಥವಾಗುತ್ತಿಲ್ಲ....
ಮುನ್ನುಡಿಯಲ್ಲೂ ನಾನಿಲ್ಲ , ಮುಕ್ತಾಯದಲ್ಲೂ ನಾನಿಲ್ಲ....-
ಮೋಸ ಮಾಡಿದ್ದು ಅವಳೇ ಆದರೆ ಮೋಸಗಾರ ಎನ್ನುವ ಪಟ್ಟ ಕೊಟ್ಟಿದ್ದು ಮಾತ್ರ ನನಗೆ...
ಈ ಜನ್ಮದಲ್ಲಿ ಮತ್ತೆ ಮುಖ ತೋರಿಸಬೇಡ ಎಂದಳು...
ಈಗ ಪ್ರತಿ ನಿತ್ಯ ನನ್ನ ಭಾವಚಿತ್ರ ನೋಡಿ ಕಣ್ಣೀರಿಡುತ್ತಿದ್ದಾಳೆ....-
ನೀ ನಗುತ್ತ ನೋಡಬೇಕು ನನ್ನ ಅವನತಿಯನ್ನ...
ನೀ ಕೊಟ್ಟ ಗುಲಾಬಿಯು ನಿನ್ನನ್ನು ಕಳೆದುಕೊಂಡು ನನಂತೆ ಬಾಡಿ ಹೋಗಿದೆ...
ಸ್ವಲ್ಪ ದಿನ ಕಳೆಯಲಿ ನಾ ಘೋರಿ ಒಳಗೆ ಮಲಗಿರುವೆ...
ನೀ ಕೊಟ್ಟ ಗುಲಾಬಿಯೂ ನನ್ನ ಎದೆಯ ಮೇಲೆ ಶ್ರದ್ಧಾಂಜಲಿಯ ಸಂಕೇತ ಸೂಚಿಸುತ್ತಿರುತ್ತದೆ...
-
ಮಂಡಿಯೂರಿ ನೀಡುವೆನು ಗುಲಾಬಿಯ....
ದಯಮಾಡಿ ಒಪ್ಪಿಕೊ ನನ್ನ ಪ್ರೀತಿಯ....
ಗುಲಾಬಿ ಎಂದಿಗೂ ನೀನಾಗಿರು...
ಮುಳ್ಳಾಗಿ ನಿನ್ನ ಕಾವಲಿಗೆ ನಾನಿರುವೆ...-
ನೀ ನನ್ನೊಂದಿಗಿರುವಾಗ...!!
ಸ್ವಚ್ಚಂದವಾಗಿ ಹಾರಾಡುವ ಪಕ್ಷಿಯಂತಿದ್ದೆ...
ಪ್ರತಿ ದಿನ ಹೊಸ ಹೊಸ ಕನಸು ಕಾಣುತ್ತಿದ್ದೆ...
ನನ್ನ ಎಲ್ಲಾ ಭಾವನೆಗಳಿಗೂ ರೂವಾರಿ ನೀನಾಗಿದ್ದೆ...
ಈಗ ನೀ ನನ್ನೊಂದಿಗಿಲ್ಲದೆ ಭಾವನೆಗಳೆಲ್ಲವೂ ಬರಿದಾಗಿದೆ....
-
ದಿನೇ ದಿನೇ ಬದಲಾಗುತ್ತಿದೆ ನಿನ್ನ ನಡವಳಿಕೆ...
ಖಾತರಿಯಾಗುತ್ತಿದೆ ನನಗೆ, ನೀ ನನ್ನ ಬಿಟ್ಟು ಹೊರಡುವಿಕೆ....
ಬದಲಾಗುವ ಸಮಯದ ಜೊತೆ ನೀ ಬದಲಾಗುತ್ತಿರುವುದು ಏನು ವಿಶೇಷ ಅನ್ನಿಸುತ್ತಿಲ್ಲ....
ಮೊದಲೆ ಊಹಿಸಿದ್ದೆ ಇವಾಗ ಅದೇ ನಿಜವಾಗುತ್ತಿದೆ...-
ಸಿಗುವ ಮೊದಲು ಯಾವಾಗ ಸಿಗುತ್ತಾಳೋ ಅನ್ನಿಸುತ್ತಿತ್ತು...
ಮನಸ್ಸು ಅವಳು ಬರುವ ದಾರಿಯನ್ನೇ ಕಾಯುತ್ತಿತ್ತು...
ಬಂದ ಕೂಡಲೇ ಸ್ವಲ್ಪ ಸಮಯದಲ್ಲಿ ಪುನಃ ಹೋಗುವಳು ಎಂಬ ಸತ್ಯ ತಿಳಿದಿತ್ತು....
ಅವಳು ನನ್ನ ಜೊತೆ ಇರುವ ಸಮಯ ಅದಾಗಲೇ ಕಳೆದಿತ್ತು....
-
ಮುಗ್ಧ ಮನಸ್ಸೊಂದಿದೆ ಜೋಪಾನ ಮಾಡುವೆಯಾ...
ಖಾಲಿ ಹೃದಯವಿದೆ ಪ್ರೀತಿ ನೀಡುವೆಯಾ...
ಬತ್ತಿ ಹೋದ ಭಾವನೆಗಳಿವೆ ಧೈರ್ಯ ತುಂಬುವೆಯಾ...
ನೀನೇ ಬೇಕೆನ್ನುವ ಕನಸೊಂದಿದೆ, ಬಂದು ನನಸು ಮಾಡುವೆಯಾ...
-