ದೂರ ಇದ್ರೆ ಮಸ್ತಿ
ಹತ್ರ ಇದ್ರೆ ಕುಸ್ತಿ,
ಸಿಕ್ಕರೂ ಕೋಟಿ ಆಸ್ತಿ
ಮರೆಯಬೇಡ ದೋಸ್ತಿ..!
-
ಕನಸಲ್ಲಿ ಕಂಡ್ರೂ ಎಳನೀರು,
ಮನಸಿಗೆ ಅದುವೇ ಸಿಹಿನೀರು..
ನೋಡೋಕೆ ಮಾತ್ರ ತಣ್ಣೀರು,
ಮುಟ್ಟಲು ಹೋದ್ರೆ ಬಿಸಿನೀರು..
ಹತ್ರ ಇದ್ರೆ ಪನ್ನೀರು,
ದೂರ ಆದ್ರೆ ಕಣ್ಣೀರು..
ಸುರಿದು ಸುರಿದು ಮಳೆನೀರು,
ಲೈಫು ತುಂಬಾ ಬರಿ ನೀರು..
-
ಎದೆಯಲಿಲ್ಲದ ಪದವ
ನಾಲಿಗೆಯಲೇಕೆ ತರುವೆ
ಒಲವಿರದ ಪಯಣವೆಂದ ಮೇಲೆ
ಸುಮ್ಮನೆ ಜೊತೆಯಲೇಕೆ ಬರುವೆ
ಹೊರಟುಬಿಡು ತಿರುಗಿ
ಇದ್ದೂ ಇರದಂತೇಕೆ ಕಾಡುವೆ !!-
ಅವಳ ಬಿಸಿಯುಸಿರು
ಎನ್ನೆದೆಗೆ ತಾಗಿ
ಮಾಗಿ ಚಳಿ ಕೂಡ
ಬೇಸಿಗೆಯಂತಾಗಿ
ಮೋಹ ಮನದಲ್ಲಿ ಆವರಸಿ
ಲಗ್ನವಾಗುವಾಸೆಯ ತಂದಿದೆ
ಮುದ್ದು ಮೊಗದ ನಾರಿಯ
ಕಣ್ತುಂಬ ಸದಾ ನೋಡಲು
ಕಣ್ಗಳೆರಡು ಒಂದೇ ಸಮನೆ
ಕಾತುರದಿ ಕಾಯುತ್ತಿದೆ
-
ನಿನ್ನಲ್ಲಿಯೇ ಇಟ್ಟಿಹ ಪ್ರೀತಿಗೆ
ಕನಸಲೆ ಕಟ್ಟಿದೆ ಅರಮನೆ,
ನಿನ್ನನೇ ನೋಡುತ ಆ ಗಳಿಗೆ
ಆಗಿದೆ ಬಾಗಿಲನಿಡದ ಸೆರೆಮನೆ...!-
ನಿನ್ನಯ ಪ್ರೀತಿಯ ದಾಳಿಗೆ
ಸೋತು ಬಂದಿಹೆ ಬಳಿಗೆ,
ಹಾಕಿದರೂ ಇನ್ನು ಗಲ್ಲಿಗೆ
ಸ್ವಾಗತಿಸುವೆ ನಾ ಆ ಗಳಿಗೆ..!
-
ಅವಳೊಂದು ಅದ್ಭುತ
ಮಾತಿನಲೇ ಓಡಿಸುವಳು ಭೂತ,
ಅವಳ ನೋಟದ ಚಿತ್ತ
ಮನಸ ಸೆಳೆದಿದೆ ಅತ್ತ..!
ಉದುರುವವು ಮುತ್ತು
ಎತ್ತಿದರೇನೆ ಅವಳ ಕತ್ತು,
ಪ್ರೀತಿಯ ಆಳದ ಮತ್ತು
ಪದಗಳಿಲ್ಲ ಹೇಳಲದರ ಕಿಮ್ಮತ್ತು.!
-
ಸಾವಿರ ಮಂತ್ರಿಯೆ ಬಂದಾಗ್ಯೂ
ಅವರನೂ ಆಳೋ ನಾಯಕನು,
ಯಾರೇ ಹೋಗಲಿ, ಯಾರೇ ಬರಲಿ
ನಿನ್ನ ಸೇವೆಗೆ ಯಾರೂ ಸಮರಿಲ್ಲ...!
ಅತ್ತರೆ ಇಲ್ಲಿ ಅಳಿಸುವರೆಲ್ಲ
ಗಾಂಧಿಯ ತತ್ವಕೆ ಬೆಲೆಯಿಲ್ಲ,
ಬಿದ್ದರೆ ಇಲ್ಲಿ ನಗುವರು ಎಲ್ಲ
ಎದ್ದರೆ ಸುಮ್ಮನೆ ನಿಲ್ಲುವರು..!
-
ನಿಶ್ಯಬ್ದದ ರಾತ್ರಿಯಲೂ
ಬರೆವೆ ನಾನು ಕವಿತೆ,
ಬಂಡೆ ಕಲ್ಲಿನ ನಡುವಿನಲು
ಕಾಣೋ ಅವಳದೆ ಆ ಚರಿತೆ...!
ಈ ಪ್ರೇಮದ ಮಬ್ಬಿನಲಿ
ಆದೆ ನಾನು ಕುರುಡ,
ಅವಳದೆ ಗುಂಗಿನಲಿ
ಇನ್ನೂ ಕಾಯುತ ಕುಳಿತಿರುವೆ..!
-
ಕಾಣುತ್ತಿದ್ದರೂ ರಂಗು ರಂಗಿನಾಂಗ
ತಿಳಿದಿರಬೇಕಿದುವೇ ಚದುರಂಗ,
ಅರಿಯದೇ ಹಾಕ ಹೊರಟರೆ ಏಣಿಯನು ಚಂದಿರಂಗ
ಆಗೋದು ಖಚಿತ ನಾವೇನೆ ಮಂಗ
ಮನಸಿನ ಮಾತು ತರವಲ್ಲ
ಕನಸಿನ ಮಾತು ನಿಜವಲ್ಲ-