Param Marigowdnar   (Param marigowdnar)
0 Followers · 3 Following

Joined 16 September 2023


Joined 16 September 2023
5 FEB 2024 AT 11:25

ಸುಮ್ನೆ ಕೂತವ್ರನ್ನ ತಡವಿ, ದೇಹ ಮನಸ್ಸು ಬ್ಯಾರೆ ಬ್ಯಾರೆ ಅಂತ ಹೇಳಿ ಹೊರಟವನಿಗೆ "ಎಲ್ಲೊಂಟ್ರಿ?" ಅಂತ ಕೇಳಿದ್ದಾರೆ ಫ್ರೆಂಡು..

ಅವಾ.. "ಯಾಕೋ ಮೈ-ಕೈ ಸುಸ್ತು, ಪೇನ್ ಕಿಲ್ಲರ್ ತಗೊಳೋಕೆ ಮೆಡಿಕಲ್ಲಿಗೆ ಹೋಗ್ತಿದ್ದೀನಿ" ಆಂದ್ನಂತೆ..

-


4 FEB 2024 AT 19:31

ಖಾಲಿ ಜೇಬಿನ ಸಂದರ್ಭದಲ್ಲಿ
ಕೈ ಹಿಡಿದವರನ್ನು,
ಜೇಬು ತುಂಬಿದ ಸಂದರ್ಭದಲ್ಲಿ
ತಪ್ಪದೇ ನೆನೆಯೋಣ...

-


2 FEB 2024 AT 22:13

ಬೆಳಿಗ್ಗೆ ಎದ್ದೊಡನೆ ಭಗವಂತನಿಗೊಂದು ಧನ್ಯವಾದ ಹೇಳಿ. ಅನೇಕರು ಇಂದಿನ ಬೆಳಗನ್ನು ನೋಡದೇ ಭುವಿಯಿಂದ ನಿರ್ಗಮಿಸಿದ್ದಾರೆ...

-


2 FEB 2024 AT 16:06

ಬದುಕು ಹೇರ್ ಕಟ್ ಇದ್ದಂತೆ. ಹೊಸ ಸ್ಟೈಲ್ ಗಾಗಿ ಹಳೆಯದೊಂದಷ್ಟನ್ನು ಕಳೆದುಕೊಳ್ಳಲೇಬೇಕು...

-


1 FEB 2024 AT 20:38

ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಭಾರತಕ್ಕಾಗಿ ಧ್ಯಾನಿಸಿದಾಗ ಗುರು ಅನುಗ್ರಹದಿಂದ ಗುರಿ‌ ನಿಶ್ಚಯವಾದ ದಿನವಿಂದು.

-


1 FEB 2024 AT 20:21

ಒಳ್ಳೆಯ ಊಟವೊಂದೇ 'ಆಹಾ' ಎನ್ನುವ ತೃಪ್ತಿಯ ಮಾತು ಹೊರಬರುವಂತೆ ಮಾಡೋದು. ಪ್ರೀತಿಯಿಂದ ಇತರರಿಗೆ ಉಣಬಡಿಸುವ ಅವಕಾಶ ಕಳಕೊಳ್ಳಬೇಡಿ!

-


1 FEB 2024 AT 18:37

ಪ್ರಕೃತಿಯ ಆರ್ಕೆಸ್ಟ್ರದಲ್ಲಿ ಸದ್ದಿಲ್ಲದೇ ಕುಣಿಯುವ ನರ್ತಕಿ ಸೊಳ್ಳೆ! ಸ್ವಲ್ಪ ಎಡವಟ್ಟಾದರೆ ದೈತ್ಯದೇಹಿಯನ್ನೂ ಅಡ್ಡಡ್ಡ ಮಲಗಿಸಬಲ್ಲದು. ಯಾರನ್ನೂ ನಿರ್ಲಕ್ಷಿಸುವಂತಿಲ್ಲ ಅಷ್ಟೇ!

-


1 FEB 2024 AT 17:00

ಬ್ರೇಕಿನ ಮೇಲೆ ವಿಶ್ವಾಸವಿದ್ದರೆ, ವೇಗದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ!

-


30 JAN 2024 AT 22:50

ರಾಜರ ಕಾಲದಲ್ಲಿ ಈ ಮೊಬೈಲ್ ಇದ್ದಿದ್ರೆ ಫಸ್ಟ್ Status ಹಾಕಿ ಆಮೇಲೆ, ಯುದ್ದಕ್ಕೆ ಹೋಗತಿದ್ದ್ರು!

-


28 JAN 2024 AT 22:18

ತಗ್ಗು ದಿಬ್ಬಗಳ
ಹತ್ತಿ ಇಳಿಯುವಾಸೆಗೆ
ಹೊತ್ತೆಲ್ಲಿ..? ಗೊತ್ತೆಲ್ಲಿ...?

-


Fetching Param Marigowdnar Quotes