Pallavi Shivalingegowda   (Pallavi)
110 Followers · 8 Following

read more
Joined 29 November 2016


read more
Joined 29 November 2016
3 MAR 2023 AT 22:27

ಜೊತೆಯಲ್ಲಿ ಬದುಕುವುದಲ್ಲ, ಆ ಸಂಬಂಧದಲ್ಲಿ ಎಷ್ಟು ಜೀವವಿದೆ ಅದಲ್ವಾ..

It’s not about living together, what matters is if there is life in a relationship..

—ಪಲ್ಲವಿ

-


4 JAN 2023 AT 9:21

ನಿನ್ನ ನಂಬಿಕೆಯೇ ದೇವರು
ನಿನ್ನ ನಂಬಿಕೆಯೇ ಅರೋಗ್ಯ
ನಿನ್ನ ನಂಬಿಕೆಯೇ ಜೀವನ.

What you believe is God
What you believe is Health
What you believe is Life.

-


1 AUG 2021 AT 12:07

ಟೀಗೋ ಎಣ್ಣೆಗೋ ಚಿಯರ್ಸ್ ಮಾಡೋಕೆ  ರೆಡಿ
ಕಾಲೋ ಮೆಸೇಜ್  ರಿಪ್ಲೈ ಮಾಡಿರ್ತರೆ ನೋಡಿ
ಬೇಜಾರೋ ಖುಷಿಯೋ ಮೀಟ್ ಆಗಿಬಿಡಿ
ಎಲ್ಲವೂ ಛಂದ ಇವರಿದ್ರೆ ಕೂಡಿ
ಇವರೇ ನಮ್ ಫ್ರೆಂಡ್ಸ ಒಂದ್ ಹೈಫೈ ಕೊಡಿ

ಸ್ನೇಹಿತರ ದಿನದ ಶುಭಾಶಯಗಳು

¦¦ ಪಲ್ಲವಿ ¦¦

-


26 APR 2021 AT 23:03

Whenever I see him, the way I fall in love is normal,
The feeling behind the wait to see him is normal?
The words spoken are normal,
The endless talk inside me is normal?
The gaze on him is normal,
The shadow of him that I see every where is normal?
Holding his hand and being among the world is normal,
In my heart, without any name, that familiar silence is normal?
Mind always searches for normal, it's only heart which lives in the state of unusual
Tel me normal or abnormal?

-


26 APR 2021 AT 22:58

ಅವನ ನೋಡಿದಾಗಲೆಲ್ಲ ಪ್ರೀತಿ ಮೂಡುವುದು ಸಹಜವೋ,
ಅವನ ನೋಡುವ ಕಾಯುವಿಕೆಯ ಪ್ರೀತಿ ಸಹಜವೋ?
ಹೊರಬಂದ ಮಾತು ಸಹಜವೋ,
ಒಳಗೆ ಉಳಿದು ಮುಗಿಯದ ಮಾತು ಸಹಜವೋ?
ನೆಟ್ಟ ನೋಟ ಸಹಜವೋ,
ನೋಡಿದಲೆಲ್ಲ ಕಾಣ ಬರುವ ಛಾಯೆ ಸಹಜವೋ?
ಕೈ ಹಿಡಿದು ಜಗತ್ತಿನಲ್ಲಿ ಒಬ್ಬರಾಗುವುದು ಸಹಜವೋ,
ಮನದ ಮಂಟಪದಲ್ಲಿ ಹೆಸರ ಹಂಗಿಲ್ಲದ ಆಪ್ತ ಮೌನ ಸಹಜವೋ?
ಸಹಜತೆ ಹುಡುಕುವುದೇ ಮನಸ್ಸಾದರೆ, ಅಸಹಜತೆಯಲ್ಲಿ ಬದುಕುವುದು ಹೃದಯ.
ಹೇಳು ಸಹಜವೋ ,ಅಸಹಜವೋ?

¦¦ಪಲ್ಲವಿ ¦¦

-


12 FEB 2021 AT 12:19

ಅಪೂರ್ಣ ಹೃದಯ. 
ಬಂದ ಮಾತುಗಳೆಲ್ಲ ಕಾವ್ಯವೆ. 
ತಲುಪದ ಮಾತುಗಳೆ ಪ್ರಶ್ನೆಗಳಾಗಿರಲು, 
ಅವನು ಮುಖ್ಯವೋ ಇಲ್ಲ ಅವನ ಉತ್ತರಗಳೋ. 
ನನ್ನ ಜೊತೆ ನನ್ನದೇ ಬಾಂಧವ್ಯ ಇರದ ಹೊರತು, 
ಯಾರ ಪ್ರೀತಿಯು ಅಮಲೇರಿಸಲಾಗದು. 

¦¦ ಪಲ್ಲವಿ ¦¦

-


29 DEC 2020 AT 23:41

ಪ್ರತಿ ದಿನ ನಡೆಯುವ ಜಾದೂಗಳಲ್ಲಿ ವಿಶಿಷ್ಟವಾದದು ನಿನ್ನ ಸ್ನೇಹ, 
ಅಹಿತ ಸಮಯದ ಬದುಕಿನ ಹಿತವಾದ ಕೆಲವು ಕ್ಷಣವೇ ನೀನು. 
ಅಚನಾಕ್ಕಾಗಿ ಸಿಕ್ಕಿದ ತೀರ, ನಡೆದಷ್ಟು ತಂಪು, 
ಕೂತು ಕಂಡಿದ್ದು ನನ್ನದೇ ಬಿಂಬ. 
ಕೆಲವರು ನಮ್ಮದೇ ಕನ್ನಡಿಯ ಹಾಗೆ ಅರ್ಹತೆಯೇ ಪ್ರತಿಬಿಂಬಿಸುವುದು, 
ಹೇಗೆ ತಾನೆ ನಾನು ಧನ್ಯವಾದ ತಲುಪಿಸದೆ ಇರುವುದು. 



¦¦ ಪಲ್ಲವಿ ¦¦

-


9 DEC 2020 AT 23:14

ನಿನ್ನ ಸಿಟ್ಟಾಗಿ, ನಿನ್ನ ಮುಗುಳ್ನಗೆಯಾಗಿ 
ನಿನ್ನ ನೋವಾಗಿ, ನಿನ್ನ ನಲಿವಾಗಿ
ನಿನ್ನದೇ ಹಾಡಿನ ಸಂಗೀತವಾಗಿ
ನೀ ಹಿಡಿದ ಕಿರು ಬೆರಳಿನ ಜೊತೆಯಾಗಿ 
ನಿನ್ನ ತೋಳಲ್ಲೇ ಬಂದಿಯಾಗಿ
ನಿನ್ನ ನೋಟದ ಒಲುಮೆಯಾಗಿ
ಕೂಡಿಟ್ಟ ಕನಸಿಗೆಲ್ಲ ಬಾಗಿಲಾಗಿ
ನಿನ್ನ ಹೃದಯ ಜ್ಯೋತಿಯಾಗಿ 
ಜಗತ್ತೇ ಸುಂದರವಾಗಿ ಮೂಡಿದೊಂದೆ ಭಾವ ಪ್ರೀತಿ.. 

¦¦ ಪಲ್ಲವಿ ¦¦

-


7 NOV 2020 AT 23:44

ನನ್ನ ಹುಡುಕಾಟದ ಪೂರ್ಣ ವಿರಾಮ, 
ಇಂದು ತುಂಬಿದ ಚಂದಿರನಷ್ಟು ಸ್ಪಷ್ಟ, 
ಈ ಬೆಳದಿಂಗಳಲ್ಲೇ ಮೀಯುವುದು ಎಂಥ ಅದೃಷ್ಟ. 
ಇಂಥ ಚಳಿ ಗಾಳಿಯಲ್ಲು ಬೆಂಕಿಯ ಕಿಡಿ, 
ಹೊತ್ತಿಸಿಯೇ ಬಿಟ್ಟಿತು ನಿನ್ನಿ ನೆನಪಿನ ಸ್ಪರ್ಶ, 
ಬೆಚ್ಚಗಾದ ಮನಸಿಗಿದು ಹರುಷ. 
ಗೀಟೆಳೆದ ಚುಕ್ಕಿಗಳೇ ನೀನಾಗಿ ಬಾನೆಲ್ಲ ತುಂಬಿದಂತೆ, 
ರಾತ್ರಿಯೇ ಮುಗಿಯದ ಹಾಗೆ ಹಿಡಿದು ಕಾದಿರುವಳಂತೆ. 



¦¦ ಪಲ್ಲವಿ ¦¦

-


2 OCT 2020 AT 23:11

Absence of fear is God

-


Fetching Pallavi Shivalingegowda Quotes