ಶೂದ್ರ, ವೈಷ್ಯ, ಕುರುಬ, ಕೊರಗ, ದಲಿತ, ಹರಿಜನ, ಗಿರಿಜನ, ಕ್ರಿಶ್ಚಿಯನ್, ಮುಸ್ಲಿಂ ಇವರುಗಳ ಜಾತಿ ಹೆಸರನ್ನ ಬಹಿರಂಗವಾಗಿ ಹೇಳಿದ್ರೆ ಸಾಕು, ಸೀದ ಜೈಲಿಗೆ. ಆದರೆ ಇಷ್ಟೂ ಜಾತಿಯವರು ಒಬ್ಬ ಬ್ರಾಹ್ಮಣನಿಗೆ ಪುಳ್ ಚಾರು ಅಂದ್ರೆ ಯಾರೂ ಕೇಳುವವರೇ ಇಲ್ಲ.
-
ಇದ್ದಕ್ ಇದ್ಹಾಗೆ heart beat ಜಾಸ್ತಿ ಆಯ್ತು ಅಂದ್ರೆ,
ಪಕ್ಕದಲ್ಲೆ bullet ಹೋಯ್ತು ಅಂತಾನೇ ಅರ್ಥ...-
ಎಲ್ಲಾ ಮಹಾಕಾವ್ಯಗಳಿಗೂ ಅಂತ್ಯ ಅನ್ನೋದಿರುತ್ತೆ. 'ಪ್ರೀತಿ' ಕೂಡ ಒಂದು ಮಹಾಕಾವ್ಯ. ಅದರ ಅಂತ್ಯ ಸಾವಲ್ಲೋ..? ನೋವಲ್ಲೋ..??
-
ಕುಡಿಯೊಕೆ ಆಗದೇ ಇರೋನು, ಕೈಗೆ sanitizer ಹಾಕ್ಕೊಂಡು ಮೂಸಿ ಮೂಸಿ ನೋಡಿದ ಅಂತೆ...
-
ಹೂವು ತುಂಬಿದ ಮರದ ನೆರಳು...
ಇಂದು ಹೂಮಳೆಯ ನಡುವೆ ನಿಂತಿರುವೆನೆಂದು ಖುಷಿಪಡಲೇ...
ನಾಳೆ ಬೋಳು ಮರ ಒಂಟಿಯಾಗಿ ನಿಲ್ಲಬೇಕೆಂದು ದುಃಖ ಪಡಲೇ...-
ಹಿಂದೆ ಬರೋ ಸೈಕಲ್, ನಮಿಗ್ ಇಷ್ಟ ಆಗಲ್ಲ,
ಮುಂದೆ ಹೋಗೋ ಬುಲೆಟ್ ಗೆ ನಾವ್ ಇಷ್ಟ ಆಗಲ್ಲ.
ಏನೋ...ಗೊತ್ತಿಲ್ಲಪಾ...-
ಏನ್ 'ಭಯ' ಆದ್ರೂನೂ ok , ಆದ್ರೆ
ಖುಷಿಯಾಗಿರೋ timeಅಲ್ಲಿ suddenಆಗಿ
ನಾಳೆ ಏನಾಗತ್ತೇನೋ ಅನ್ನೋ 'ಭಯ'
ಯಾವ್ ಶತ್ರುಗೂ ಬೇಡ.-
ತೆಪ್ಪದಲ್ಲಿ ಚಿಮಣಿ ದೀಪ, ಹೊತ್ತಿ ಉರಿಯುತ್ತಿತ್ತು ಕೋಪ
ಸೆಳೆದ ಅವನ ಕಣ್ಣ ಹೊಳಪ, ದೃಷ್ಟಿ ತಗಲುವಂತ ರೂಪ
ನೋಡುತಿದ್ದ ಆಕೆ ಮುನಿಸು ಕರಗಿಯೇ ಹೋಯ್ತು ಪಾಪ
ಕಣ್ಣಲ್ಲೇ ಶುರುವಾಗಿತ್ತು ಸಂದೇಶ ವರ್ಗಾವಣೆ
ಇನ್ನೇತಕೆ ಬೇಕು ಇದಕ್ಕಿಂತ ಒಳ್ಳೆ ಸಂಭಾಷಣೆ
ನಡೆದಿತ್ತಾಗಲೆ ಒಬ್ಬರ ಮನಸು ಇನ್ನೊಬ್ಬರಿಗೆ ಅರ್ಪಣೆ
ಪ್ರಣಯಭರಿತ ವಾತಾವರಣ ಆಗಾಗ ನೀಡಿತ್ತು ಪ್ರೇರಣೆ-
ಪ್ರೀತಿ ಅಲೆಯಲಿ ತೇಲುತ್ತಿದೆ, ಇವರ ಮನಸಿನ ತೆಪ್ಪ
ಹೃದಯ ವಿನಿಮಯ ಶುರುವಾಗಿ ಕೊಟ್ಟಾಯ್ತು ಕಪ್ಪ
ವೇಣು ಕೃಷ್ಣನ ಕೈಯಲಿರಲು, ರಾಧೆಗೀಗ ಪ್ರೀತಿ ಅಮಲು
ಮುರಳಿನಾದ ಚಿಮ್ಮುತಿರಲು,ಆಕೆ ಭಾವ ತುಂಬಿ ಬರಲು
ಕರಗಿ ಹೋದ ರಾಧೆಗೀಗ ಇರುವುದೊಂದೇ ದಾರಿ ಮೀಸಲಾದ ಅವನ ಮಡಿಲು,ಜಾರಿದಳು ಆಸರೆ ಕೋರಿ
ಕೊಳಲ ದನಿಗೆ ತಲೆದೂಗಿ ಮೂಕವಾದ ಯಮುನೆ ತೀರ
ಮಾರ್ದನಿ ಚಲಿಸಿದಂತೆ, ಚಂದ್ರ ಜಾರಿದ ದಿಗಂತದೂರ...
-