ಕೆಲವೊಂದು ಮನೆಗಳಲ್ಲಿ ಸಂಜೆಯಾದರೆ ಮಕ್ಕಳು ಪುಸ್ತಕ ಮುಟ್ಟುತ್ತಿಲ್ಲವಲ್ಲಾ ಎಂಬ ಚಡಪಡಿಕೆ ತಂದೆಯದಾದರೆ.. ತಾಯಿಗೆ ಮಾತ್ರ ಆಕಾಶ ಕೆಳಗೆ ಬಿದ್ದರೂ ದಿನನಿತ್ಯದ ಟಿವಿ ಸೀರಿಯಲ್ ಗಳನ್ನು ನೋಡಲೇಬೇಕೆಂಬ ಕಾತರ
-
ಎಲ್ಲರ ನೋವಿನಲ್ಲಿ ನಾ ಪಾಲುದಾರ
ನನ್ನ ನೋವಿಗೆ ಮಾತ್ರ ನಾನೊಬ್ಬನೇ ಸಾಹುಕಾರ
-
ಬದುಕು ಬರಡಾಗಿ ಭಾವನೆಗಳಿಗೆ ಧಕ್ಕೆ ಉಂಟಾದಾಗ ಮನದ ಮಾತುಗಳನ್ನು ಸ್ಟೇಟಸ್ ಗಳ ಮೂಲಕ ಹೊರಹಾಕುತ್ತಾರೆ. ಆದರೆ ಸಂಬಂಧಪಟ್ಟವರು ಇದು ಬೇರೆಯವರಿಗಾಗಿ ಎಂದು ಭಾವಿಸುತ್ತಾರೆ ಭಾವನೆಗಳಿಗೆ ಬೆಲೆಯೇ ಸಿಗದ ಲೋಕವಿದು.
-
ಕೋಪದಿಂದ ದೂರವಾದವರು ಮರಳಿ ಬಂದರೆ ಆಶ್ಚರ್ಯವೇನಿಲ್ಲ.. ಆದರೆ ನಂಬಿಕೆದ್ರೋಹದ ನೋವಿನಿಂದ ದೂರವಾದ ಸ್ವಾಭಿಮಾನಿಗಳು ಮತ್ತೆ
ನಿಮ್ಮ ಜೀವನದಲ್ಲಿ ಹಿಂದಿರುಗಿ ಬರುವುದಿಲ್ಲ.
-
ಖುಷಿಯನ್ನು ಹಂಚಿಕೊಂಡಾಗ ಸಂಬಂಧಗಳು ಹತ್ತಿರವಾಗುತ್ತವೆ ಎಂಬುದು ನಿಜ.. ಆದರೆ ಕಷ್ಟಗಳನ್ನು ಹಂಚಿಕೊಂಡಾಗ ಆ ಸಂಬಂಧವು ಬದುಕಲ್ಲಿ ಎಂದೂ ಬಿಡಿಸಲಾಗದ ಅಮರ ಬಂಧನವಾಗಿ ಉಳಿಯಲಿದೆ.
-
ಮನುಷ್ಯ ಜೀವನದಲ್ಲಿ ನಿರೀಕ್ಷೆಗಳು ಜಾಸ್ತಿ
ದೇವರ ಆಟದಲ್ಲಿ ಪರೀಕ್ಷೆಗಳು ಜಾಸ್ತಿ
ಕೆಲವೊಮ್ಮೆ ಎಲ್ಲಾ ತಿಳಿದುಕೊಳ್ಳುವ ಶಕ್ತಿಯನ್ನು ಕೊಟ್ಟರೂ, ಏನನ್ನೂ ಮಾಡದೇ ಇರುವ ಅಸಹಾಯಕ ಪರಿಸ್ಥಿತಿಯಲ್ಲಿ ಇಡುತ್ತಾನೆ.
-
ಅರಿತವರು ಅಳಿಸಿ ಹೋದರೆ
ಮುದ್ದಿಸಿದವರು ಮರೆತು ಹೋದರೆ
ಪ್ರೀತಿಗೆ ಬೆಲೆಯಾದರೂ ಎಲ್ಲಿದೆ..?
-
ಅಂಧ ನೋಡಿ ಹುಟ್ಟೋ ಪ್ರೀತಿ.
ಹಣ ನೋಡಿ ಕೊಡುವ ಬೆಲೆ.
ಆಸ್ತಿ ನೋಡಿ ಒಂದಾಗೋ ಬಂಧುಗಳು
ಹೆಚ್ಚು ಕಾಲ ಉಳಿಯುವುದಿಲ್ಲ.
ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನಿಗೆ ನಿಜವಾದ ಸಂಪತ್ತು.-
ನನ್ನತನವನ್ನು ಮಾರಿಕೊಂಡು ಯಾರೊಬ್ಬರನ್ನೂ ಮೆಚ್ಚಿಸುವ ಅವಶ್ಯಕತೆ ನನಗಿಲ್ಲ. ಸ್ವಾಮಿ ವಿವೇಕಾನಂದರು ನುಡಿದಂತೆ ಗೌರವವಿಲ್ಲದ ಸ್ಥಳಕ್ಕೆ ಹೋಗುವುದಿರಲಿ ನನ್ನ ಚಪ್ಪಲಿಯನ್ನು ಸಹ ಅಲ್ಲಿ ಬಿಡುವುದಿಲ್ಲ.
-
ಕಾಲಹರಣಕ್ಕಾಗಿ ಹಾಗೂ ಅವಶ್ಯಕತೆಗಳನ್ನು ತೀರಿಸಿಕೊಳ್ಳಲಿಕ್ಕಾಗಿ ಯಾರ ಜೊತೆಯೂ ಸಂಬಂಧವನ್ನು ಬೆಳೆಸಬೇಡಿ. ಏಕೆಂದರೆ ಅವರು ಕೆತ್ತನೆ ಮಾಡಿದ ಮೂರ್ತಿಗಳಲ್ಲ - ಭಾವನೆಗಳಿರುವ ಮನುಷ್ಯರು.
-