ಇಲ್ಲಿ ಯಾರು ಉತ್ತಮ
ಯಾರು ಅಧಮ
ಸ್ವಾರ್ಥವ ಮೆರೆಸಲು ಮರೆಯಲಿ
ಸಂಚು ಹುಡುವರು..!
ಮೌನವಾಗಿರು ಮೌನಿಯಾಗಿರು
ಮೆರೆಯುವರ ಮಧ್ಯೆ
ಎಲ್ಲವನ್ನು ಮರೆತಂತೆಯಿರು..!-
ಅವಳ ಒಲವೆಂದರೆ ಹಾಗೆ
ಮಂಕಾದ ಮನ ಒಲಿಸೋ
ಮಂದಹಾಸದ ಹಾಗೆ..!
ಸದಾ ನಾ ಬಯಸುವು ಹೀಗೆ
ನಿನ್ನ ನೋವಿಗೆ ನಾ ನಲಿವಾಗಿ
ಎನ್ನ ನಿದ್ದೆಗೆ ನೀ ಮಡಿಲಾಗುವ ಹಾಗೆ ..!-
ತಿಳಿದು ತಿಳಿಗೇಡಿ ಆಗಿರುವವರ ಕಂಡು
ಗುಂಪು ತೊರೆದು ಒಂಟಿತನ ಬಯಸಿದ
ಒಂಟಿಗೇಡಿ ಬದುಕಿದು ಗಾಲಿಬ್.!
-
ರಕ್ಷಾ ಬಂಧನ ಶುಭಾಶಯಗಳು bro 🥳
ಕಳೆದಂತೆ ವರುಷ
ತುಂಬಿರಲಿ ನಿಮ್ಮ ಬದುಕಲ್ಲಿ ಹರುಷ
ಸಕ್ಕರೆಯ ಸಿಹಿಯಂತೆ ಅಣ್ಣ ತಂಗಿಯ ಬಂಧ
ಉಳಿಯಲ್ಲಿ ಚಿರಕಾಲ ಈ ಅನುಬಂಧ 😍
-
ಬೇವಿನಂತಹ ಕಹಿ ಸತ್ಯವ
ಅರಗಿಸಿಕೊಳಲು ಆಗದೆ
ಬೆಲ್ಲದ ಸಿಹಿ ಸುಳ್ಳು ಆರಸಿ ಹೋದವಳ
ಜೀವನವಿದು ಗಾಲಿಬ್ ..!!-
ಅಕ್ಕರೆಗೆ ಅರಸಿ ನೀ
ಆನಂದಕೆ ಆನಂದಿ ನೀ
ಇಳೆಗೆ ಇಬ್ಬನಿಯು ನೀ
ಈರಣದ ನಾದವು ನೀ
ಉಸಿರಿನ ಉತ್ಸಾಹ ನೀ
ಊಟದ ಸವಿಯು ನೀ
ಋತುಮಾಸದ ಹಂಬಲ ನೀ
ಎನ್ನ ಭಾವನೆಯ ಬಂಧು ನೀ
ಏರು ಇಳಿತಗೆ ಜೊತೆಗಾತಿ ನೀ
ಐಂದವ ಕಾಂತಿ ನೀ
ಒವಜ ಎನ್ನ ಬದುಕಿಗೆ ನೀ
ಓರಣದಿ ನಾ ನಿನ್ನ ಬಂಧಿಸಲಾರೆ
ಔಷಧ ನೀ ಎನ್ನ ಮನಕ್ಕೆ
ಅಂಬೆ ಕಾಲಿನ ಕಂದ ನಾನು
ಹಂಬಲಿಸುತ್ತಿರುವೆ ನಿನ್ನ
ಮಡಿಲನ್ನು..!!-
ಕಷ್ಟ ಬಂದಾಗ ಕಣ್ಮರೆ ಆಗುವವರು
ಜೊತೆಗೆ ಇದ್ದು ಜಾರಿಕೊಳ್ಳುವವರು
ಬೆನ್ ಹಿಂದೆ ಬಾಯಿ ಬಡಿದುಕೊಳ್ಳುವವರು
ತಪ್ಪುಗಳಿಗೆ ತೇಪೆ ಹಾಕಲ್ಲು ಮಾತು ಕಟ್ಟಿ
ಮಂಕು ಮಾಡುವವರು..!!-
🌺
ಈಶ್ವರ
ಶಂಕರ
ಶಂಭೋ
ಹರಹರ
ಲೋಕವನ್ನು ರಕ್ಷಿಸಲು ವಿಷವನ್ನು ಕುಡಿದ ನೀಲಕಂಠನೇ
ಭಕ್ತಿಗೆ ಸೋತು ಮಗನಾದ ಮಹದೇಶ್ವರನೇ
ಶಿವ ಪಾರ್ವತಿಯರ ಸ್ವರೂಪವಾದ
ಅರ್ಥನಾರೀಶ್ವರನೇ
ಶಿವಧನ್ಯಕ್ಕೆ ಶರಣಾಗಿ ಆತ್ಮಲಿಂಗಾವ
ರಾವಣನಿಗೆ ನೀಡಿದ ಗೋಕರ್ಣ ಲಿಂಗೇಶ್ವರನೇ
ಜಪಿಸಿದರೆ ನಿನ್ನ ನಾಮವ ಮುಳ್ಳು ಹೂವಾಗುವುದು ದೇವಾ
-
ಮನೆಯಂಗಳದಿ ಕಾಯುತಿರುವೆ
ನೋಡಲೆಂದು ನಿನ್ನ ಕೀರ್ತಿ
ನೆನಪಿನ ದಿಬ್ಬಣದಿ
ಹಿಡಿದು ಕಿರು ಆರತಿ..!!-