ಕೆಲವೊಂದು ಸಲ ನೆನಪುಗಳೇ,
ನಮ್ಮ ಬದುಕಿಗೆ ಭರವಸೆ.....-
ಇಲ್ಲಿವರೆಗೂ ನಾನು ಜೀವನದಲ್ಲಿ ಯಾರಿಗೂ, ನಂಬಿಕೆ ದ್ರೋಹ ಹಾಗೂ ಮೋಸ ಮಾಡಿಲ್ಲ.
ಮತ್ತೇ ಮುಂದೇನು ನಂಬಿಕೆ ದ್ರೋಹ ಹಾಗೂ
ಮೋಸವನ್ನು ಯಾರಿಗೂ ಮಾಡಲ್ಲ.....-
ಇಬ್ಬರ ನಡುವೆ ಮೂರನೆಯವರು ಬಂದಾಗ,
ನೋವು ಆದರೂ ಆಗಬಹುದು ಇಲ್ಲವೆ ಸಾವು
ಆದರೂ ಆಗಬಹುದು.
ಆದರೆ
ಮೂರನೇಯವರಿಂದಲೇ ಆ ಇಬ್ಬರ ಜೀವನ ನರಕವಾಗುವದಂತು ಸತ್ಯ.....-
ಅಕ್ಕ-ತಮ್ಮ ಅಥವಾ ಅಣ್ಣ-ತಂಗಿ ಎಂದೂ
ಬರೀ ಮಾತಿನಲ್ಲಿ ಕರೆಯಬಾರದು.
ಅಕ್ಕ-ತಮ್ಮ ಅಥವಾ ಅಣ್ಣ-ತಂಗಿ ಎಂದೂ
ಮನಸ್ಸಿನ ಭಾವನೆಯಿಂದ ಕರೆಯಬೇಕು.....-
ನಾನು ದೇವರಲ್ಲಿ ಬೇಡುವುದು ಒಂದೇ
ಕಿತ್ತುಕೊಳ್ಳುವುದಾದರೆ ಯಾವುದನ್ನೂ
ನನಗೆ ಕೊಡಲೇಬೇಡ.....-
ಕಾಳಜಿ ಹೃದಯದಲ್ಲಿ ಇರಬೇಕೇ
ಹೊರತು ಮಾತಿನಲ್ಲಲ್ಲ...
ಕೋಪ ಮಾತಿನಲ್ಲಿ ಇರಬೇಕೇ
ಹೊರತು ಹೃದಯದಲ್ಲಲ್ಲ...-
ಅಣ್ಣ-ತಂಗಿ ಸಂಬಂಧ ಅತ್ಯಂತ ಪವಿತ್ರವಾದದ್ದು,
ಅದನ್ನೂ ಕೆಲವೊಬ್ಬರು ನಿಮ್ಮ ಸ್ವಾರ್ಥ,
ಕೆಟ್ಟ ಮಾತು, ಕೆಟ್ಟ ಆಲೋಚನೆ ಹಾಗೂ
ನಿಮ್ಮ ಕೆಟ್ಟ ಸಂಬಂಧಕ್ಕೆ ದುರುಪಯೋಗ ಪಡಿಸಿಕೊಳ್ಳಬೇಡಿ.
ಏಕೆಂದರೆ ಅಣ್ಣ-ತಂಗಿ ಪವಿತ್ರವಾದ ಸಂಭದಕ್ಕೆ,
ನಿಮ್ಮಂತವರಿಂದ ಕಳಂಕ ಉಂಟಾಗುತ್ತದೆ.....-
ನಾವು ಬೇರೆಯವರ ದೃಷ್ಟಿಯಲ್ಲಿ ,
ಕೆಟ್ಟವರಾಗಲು ಅವರಿಗೆ ಕೆಡಕು ಮಾಡಬೇಕೆಂದಿಲ್ಲ.
ಅವರು ಮಾಡುವ ತಪ್ಪುಗಳನ್ನು ಹೇಳಿದರೂ,
ಸಾಕು ಕೆಟ್ಟವರಾಗುತ್ತೇವೆ.....-
ನನ್ನ ಪಾಲಿಗೆ ಅವರೇ ವಿಲನ್ ಆಗುತ್ತಾರೆ,
ಅಂತಾ ಮೊದಲೇ ಗೊತ್ತಿತ್ತು ನನಗೆ,
ವಿಧಿಯ ಆಟ ಬಲ್ಲವರಾರು.....-
ಕೆಲವೊಂದು ವ್ಯಕ್ತಿಯ ಜೀವನದಲ್ಲಿ
ಹೊಸಬರು ಬಂದರೆ ಹಳೇಯವರಿಗೆ
ಬೆಲೆ ಕಡಿಮೆಯಾಗುವುದು.....-