.....
-
ನಂದಾದೀಪ ಗೋಕುಲ💙
(deeptalks)
94 Followers · 53 Following
ಎಂತ ಚಂದ ದೂರದಿಂದ ನೀನು ನೀಡೋ ಹಿಂಸೆ...❤️
Joined 20 August 2019
19 OCT 2020 AT 21:05
ಕೋಟಿ ನಕ್ಷತ್ರಗಳ ಸೂರು ತಲೆ ಮೇಲೆ
ಸಹ್ಯಾದ್ರಿ ತಪ್ಪಲಿನ ಹಸಿರ ಹಾಸಿಗೆ ಕೆಳಗೆ
ಚಳಿಗೆ ನಾಲ್ಕು ಮುತ್ತುಗಳು
ನಿನ್ನೊಟ್ಟಿಗೆ ಮೂರು ಹೊತ್ತುಗಳು
ಇದಕ್ಕಿಂತ ಪ್ರೀತಿ ಬೇಕಾ ?
ಹುಡುಗ ನಿಂಗೆ
ನನ್ನಂತಹ ಹುಡುಗಿ ಸಾಕ??-
15 OCT 2020 AT 18:48
ಎಲ್ಲಾ ಕಷ್ಟಗಳು ಒಮ್ಮೆಲೇ ತೀರಬೇಕು
ಎಂದೇನಿಲ್ಲ
ಸ್ವಲ್ಪ ಕಾಯೋಣ ಸಮಯ ಸರಿಯುವವರೆಗೂ
ನಮ್ಮ ಸಮಯ ಬರುವವರೆಗೂ!!
ಹೆಚ್ಚೇನಿಲ್ಲ ಅರೆಘಳಿಗೆ ಮಾತ್ರ
ಆಮೇಲೆ ಎಲ್ಲಾ ಸುಸೂತ್ರ!!-
18 SEP 2020 AT 10:23
ಸಾವಿರ ಹುಡುಗರು ಹೊಗಳಿ ಹಾಡಿದರೂ ತೀರದು ಹುಚ್ಚು ಆಸೆ
ನೀ ಒಮ್ಮೆ ತಿರುಗಿ ನೋಡಿ ನಕ್ಕರೆ ಸಾಕು
ಮೈ-ಮನವೆಲ್ಲ ತುಂಬಿದಂತೆ
ನವಿರೇಳಿಸೋ ನಶೆ...!-
9 MAR 2020 AT 14:11
ನೋಡು
ನನ್ನ ಹಣೆ ತುಂಬ ಕೆಂಪು
ಮೂಡಿದ ಮಲ್ಲಿಗೆ ಬಿಳುಪು
ಕೆನ್ನೆ ಮೇಲೆ ಹಳದಿ ಅಚ್ಚು
ಕೊರಳ ತುಂಬ ಕರಿಮಣಿ ಹೆಚ್ಚು
ಗಲ್ ಗಲ್ ಹಸಿರು ಬಳೆ
ಉಟ್ಟ ಸೀರೆ ಬಣ್ಣ ಕಿತ್ತಳೆ
ನನಗೆ ನೀನಿದ್ದರೆ ದಿನವೂ ಹೋಳಿ
ನೀ ಜೊತೆಗಿದ್ದರೆ ಪ್ರತಿ ಕ್ಷಣವೂ ಓಕುಳಿ-