ಅಪ್ಪ.....❤️
ನೀನಿಲ್ಲದಿದ್ದರೂ ಬದುಕು
ನಡೆಯುತ್ತಿದೆ
ಎನ್ನುವುದು ನಿಜ
ಆದರೆ ನಿನ್ನವರೆಂದು
ಕೊಂಡಿದ್ದವರೆ ಬೆನ್ನಹಿಂದೆ
ಆಡಿಕೊಂಡು ನಗುವಾಗ
ನೀನಿರಬೇಕಿತ್ತು ಈ
ನಾಯಿ ನರಿಗಳ ಬಾಯಿ
ಮುಚ್ಚಿಸಲು ಅನಿಸುವುದಂತೂ
ಸುಳ್ಳಲ್ಲ-
ನನ್ನೆಲ್ಲ ಸಂಕಷ್ಟದಲ್ಲೂ ನನ್ನ
ಸದಾ ಮುನ್ನಡೆಸಿದೊಂದೆ
ನನಗೆ ಸದಾ ಜೊತೆಗೆ
ನಾನಿದ್ದೇನೆ ಎಂಬ ಧೈರ್ಯ
-
ಇಲ್ಲಿ ಎಲ್ಲ ಸಂಬಂಧಗಳು
ಸತ್ಯವನ್ನಷ್ಟೇ ಬೇಡುತ್ತವೆ
ಸುಳ್ಳು ಪೊಳ್ಳು ಉದ್ದುದ್ದ
ಸಮರ್ಥನೆಗಳನ್ನಲ್ಲ
ಸುಳ್ಳುಗಳೊಂದಿಗೆಯೇ
ಹೆಣೆದ ಸಂಬಂಧ
ಅದೆಷ್ಟು ಸುಳ್ಳುಗಳ
ಸರಮಾಲೆಇರುವುದು
ಬಲ್ಲವರಾರು
ಎಲ್ಲವು ಸುಳ್ಳೆಂದು ಅರಿವಾದಮೇಲೆ
ದೂರ ಉಳಿದುಬಿಡಬೇಕು
ಇಲ್ಲ ಮತ್ತೊಮ್ಮೆ ಭಾವನೆಗಳಮೇಲೆ
ಅಗಾಧಪೆಟ್ಟು ಬೀಳುವುದು ಖಂಡಿತ
ಜೊತೇಇದ್ದವರನ್ನೇ ನಂಬಲಾಗದು
ಇನ್ನು ಎಲ್ಲೋ ಇದ್ದವರ ನಂಬಿದ್ದು
ನಮ್ಮದೇ ಮೂರ್ಖತನ-
ಅಪ್ಪ ❤️🌍
ಬಿದ್ದಾಗ ಕೈ ಹಿಡಿದು ನಡೆಸಿದವ
ಅತ್ತಾಗ ಕಣ್ಣಿರೋರೆಸಿದವ
ಸೋತಾಗ ಗೆಲ್ಲುವೆ ಎಂದು
ಧೈರ್ಯತುಂಬಿದವ
ಗೆದ್ದಾಗ ಎಲ್ಲರಿಗಿಂತ ಹೆಚ್ಚು
ಸಂಭ್ರಮಿಸಿದವ
ಎಲ್ಲರೂ ಹೆಣ್ಣೆಂದು ಹಂಗಿಸಿದಾಗ
ನನ್ನ ಮಗಳೆಂದು ಹೆಮ್ಮೆಯಿಂದ
ಹೇಳಿಕೊಂಡು ಓಡಾಡಿದವ
ಆದರೆ
ಅವನಿಲ್ಲದೆ ಬದುಕುವುದೇಗೆ
ಎಂದೇಳುವುದ ಮರೆತುಬಿಟ್ಟವ
ಹೇಳದೆ ಕೇಳದೆ ಕಾಣದೂರಿಗೆ
ಹೊರಟುಬಿಟ್ಟವ💔
-
ಪ್ರೀತಿ
ಒಂದು ದಿನದ ಸಡಗರವಲ್ಲ
ಒಂದೇ ದಿನದ ಸಂಭ್ರಮವಲ್ಲ
ವರ್ಷಕ್ಕೊಮ್ಮೆ ಬಂದುಹೋಗುವ
ಹಬ್ಬವೂ ಅಲ್ಲ
ಪ್ರತಿ ದಿನದ ಆರಾಧನೆಯದು
ಸದಾ ಜೊತೆಗಿರುವ ಮಧುರ
ಭಾವವದು-
ಬಯಸಿದಷ್ಟು ಒಲವು ಕಾಳಜಿ
ಬದುಕಿನಲ್ಲಿ ದಕ್ಕಿಬಿಟ್ಟರೆ
ಅಲ್ಲಿಂದಲೇ ನೆಮ್ಮದಿಯ
ಬದುಕಿನ ಆರಂಭ-
ತೆರೆದ ಗಾಯಕ್ಕೆ
ಮುಲಾಮು ಹಚ್ಚಲೊರಟಿದ್ದಾರೆ
ಅವರೇ ಮಾಡಿದ ಗಾಯವದು
ಎಂಬುದ ನಾ ಮರೆತಿಲ್ಲವೆಂದು
ಅರಿವಿಲ್ಲ ಅವರಿಗೆ-
ಓದು ಸಹ ಅಮಲೇರಿಸುತ್ತದೆ
ಕೂತು ಓದುವ ಸಾಹಸ ಮಾಡ್ಬೇಕಷ್ಟೆ
ಅದೇ ದುಶ್ಚಟಗಳತ್ತ ಸುಳಿಯುವಾಗ
ಮಾಡುವಿರಲ್ಲ ಥೇಟ್ ಅಂತದ್ದೇ ಸಾಹಸ
ಒಮ್ಮೆ ಓದುವ ಹುಚ್ಚು
ಅಂಟಿಕೊಂಡರೆ ಸಾಕು
ಬಿಡಲಾಗದ ನಂಟು ಬೆಸೆದು ಬಿಡುತ್ತದೆ
ನಿಮ್ಮ ದುಶ್ಚಟಗಳಿಗಿಂತ
ಹೆಚ್ಚೇ ಅಮಲೇರಿಸುತ್ತದೆ-
ಅಪ್ಪ♥️
ನೀನಿರಬೇಕಿತ್ತು
ಒಂದಷ್ಟು ನಿನ್ನ ಬಳಿ ಹೇಳುವುದಿತ್ತು
ನಿನ್ನ ಸಲಹೆಯ ಕೇಳುವುದಿತ್ತು
ಅದು ಬೇಕು ಇದು ಬೇಕೆಂದು
ನಿನ್ನ ಬಳಿ ತರಿಸಿಕೊಳ್ಳುವುದಿತ್ತು
ನಾ ನನ್ನಪ್ಪನ ಮಗಳೆಂದು
ಅಮ್ಮನ ಕಾಡಿಸುವುದಿತ್ತು
ನಾ ನಿನಗಾಗೇ ಬಹಳಷ್ಟು
ಕೊಡಿಸುವುದಿತ್ತು
ನಿನ್ನ ಆಸೆ ಕನಸಿನಹಾಗೆ ನಾ
ಬದುಕುವುದಿತ್ತು
ನೀ ನನ್ನ ಕಣ್ತುಂಬದ ಹಾಗೆ ಪ್ರತಿಕ್ಷಣ
ನನ್ನ ಜೊತೆ ನಿಲ್ಲುವುದಿತ್ತು
ಅದೇನಾದರಾಗಲಿ
ನೀನೀರಬೇಕಿತ್ತು......🥹-